ಉಡುಪಿಯಲ್ಲಿ ಬಿಜೆಪಿಗೆ ಬೀಳುತ್ತಾ ಮುತಾಲಿಕ್ ಹೊಡೆತ..?

ರಾಜ್ಯ ವಿಧಾನ ಸಭೆಗೆ ಚುನಾವಣೆಗಳು ಇನ್ನೂ ಘೋಷಣೆಯಾಗೋದು ಬಾಕಿ ಇದೆ.. ಆದ್ರೆ, ಇಗಾಗಲೇ ರಾಜ್ಯದಾದ್ಯಂತ ಚುನಾವಣೆ ಕಾವು ಜ್ವರದ ಥರಾ ಏರ್ತಾ ಹೋಗ್ತಿದೆ.. ಅದರಲ್ಲೂ ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಮೇಲುಗೈ ಸಾಧಿಸೋದಕ್ಕೆ ಈ ಬಾರಿಯೂ ಕೂಡಾ ಕಾಂಗ್ರೆಸ್ ಹಾಗೂ ಬಿಜೆಪಿಗಳು ಭಯಾನಕ ಹಣಾಹಣಿಗೆ ಇಳೀತಾ ಇವೆ.. ಈ ಹಂತದಲ್ಲಿ ಹಿಂದುತ್ವದ ಮಂತ್ರದೊಂದಿಗೆ ಚುನಾವನೆಯನ್ನ ನಡೆಸೋ ಬಿಜೆಪಿಗೆ ಸ್ವಲ್ಪ ಕರ್ಣ ಕಠೋರ ಅನ್ನಿಸೋ ಹಾಗೆ ಹಿಂದುತ್ವದ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ತಮ್ಮ ಶ್ರೀ ರಾಮ ಸೇನೆಯ ಮೂಲಕ ಕಣಕ್ಕಿಳಿಯೋ ಸುಚನೆಯನ್ನ ಕೊಟ್ಟಿದಾರೆ.

ಈಬಾರಿ ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಆಡಳಿತ ನಡೆಸ್ತಾ ಇದೆಯಾದ್ರೂ, ಹಿಂದೂ ಕಾರ್ಯಕರ್ತರ ರಕ್ಷಣೆಯ ವಿಷಯದಲ್ಲಿ ಭಾರತೀಯ ಜನತಾ ಪಕ್ಷ ಸರಿಯಾಗಿ ಗಮನ ಹರಿಸಿಲ್ಲ.. ಸರಿಯಾದ ನಿರ್ಧಾರಗಳನ್ನ ಕೈಗೊಂಡಿಲ್ಲ.. ಬಿಜೆಪಿ ಆಡಳಿತದಲ್ಲೂ ಹಿಂದೂ ಕಾರ್ಯಕರ್ತರ ಹತ್ಯೆಗಳು ಕಡಿಮೆಯಾಗಿಲ್ಲ. ಅದರಲ್ಲೂ ಗೃಹ ಖಾತೆಯನ್ನ ನಿರ್ವಹಿಸುವಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ ಅನ್ನೋ ಅಸಮಾಧಾನ ಅಲ್ಲಿನ ಕಾರ್ಯಕರ್ತರಲ್ಲಿದೆ.

ಇಂಥಾ ಸಂದರ್ಭದಲ್ಲಿ ಶ್ರೀ ರಾಮ ಸೇನೆಯ ಮುಖಂಡ ಹಾಗೂ ಪ್ರಖರ ಹಿಂದುತ್ವ ವಾದಿ ನಾಯಕ ಪ್ರಮೋದ್ ಮುತಾಲಿಕ್ ತಾವೂ ಕೂಡಾ ಈ ಬಾರಿ ಚುನಾವಣಾ ಕಣಕ್ಕಿಳಿಯೋ ಬಗ್ಗೆ ಘೋಷಿಸಿರೋದು, ಅಲ್ಲಿನ ಪ್ರಮುಖ ರಾಜಕಾರಣಿಯೊಬ್ಬರ ನಿದ್ದೆ ಗೆಡಿಸ್ತಾ ಇದೆ. ಹಾಗಾದ್ರೆ ಈ ಬಾರಿ ಕರಾವಳಿ ಜಿಲ್ಲೆ ಯಾರ ಕೈ ಹಿಡಿಯುತ್ತೆ? ಯಾರಿಗೆ ಹೂ ಮುಡಿಸುತ್ತೆ ? ಯಾರನ್ನ ಹೊತ್ತು ಮರೆಯುತ್ತೆ ಅನ್ನೋ ಬಗ್ಗೆ ಒಂದಷ್ಟು ಮಾಹಿತಿ ಹಾಗೂ ಈ ಹಿಂದೆ ಅಲ್ಲಿನ ವಿಧಾನ ಸಭಾ ಕ್ಷೇತ್ರಗಳಲ್ಲಿ ಏನೆಲ್ಲಾ ಆಗಿತ್ತು ಯಾರೆಲ್ಲಾ ಗೆದ್ದು ಬಂದಿದ್ರು? ಯಾರ ಮತಗಳು ಅಲ್ಲಿ ಎಷ್ಟೆಷ್ಟಿವೆ ಅನ್ನೋ ಕುರಿತಾದ ಒಂದಷ್ಟು ಮಾಹಿತಿ ಈ ವಿಡಿಯೊದಲ್ಲಿದೆ. ಜಸ್ಟ್ ಕ್ಲಿಕ್ ಮಾಡಿ ಉಡುಪಿ ಜಿಲ್ಲೆಯ ಮಾಹಿತಿಯನ್ನ ನೋಡಿ