ನಿಮಗೆ ದೇಶ ದೇಶಗಳ ನಡುವಿನ ಗಡಿಯ ಬಗ್ಗೆ ಗೊತ್ತಿದೆ. ಹಾಗೇನೇ ಪ್ರಾಣಿಗಳು ಕೂಡಾ ಗಡಿ ಗುರುತಿಸಿಕೊಳ್ಳೋದರ ಬಗ್ಗೆ ನೀವು ಕೇಳಿರಬಹುದು. ಆದ್ರೆ ಈ ಜಗತ್ತಿನಲ್ಲಿ ಒಂದು ಗಡಿ ಇದೆ. ಅದನ್ನ ಮೀರಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವುದೇ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಸಂಚರಿಸೋದೇ ಇಲ್ಲ. ಸರಿಸುಮಾರು ಇನ್ನೂರು ವರ್ಷಗಳ ಕಾಲ ನಡೆದಿರೋ ಈ ಸಂಶೋಧನೆಯಲ್ಲಿ ಈ ಭಯಾನಕ ಅಂಶ ಹೊರ ಬಿದ್ದಿದ್ದು, ಅದೊಂದು ಪುಟ್ಟ ಜಾಗವನ್ನ ಜೀವಿಗಳು ದಾಟೋದಕ್ಕೆ ಸಾಧ್ಯವೇ ಆಗ್ತಿಲ್ಲ. ಅದು ಯಾಕೆ ಅನ್ನೋದು ಇಲ್ಲಿವರೆಗೂ ಉಳಿದುಕೊಂಡಿರೋ ಯಕ್ಷ ಪ್ರಶ್ನೆ. ನೀವು ಕೊಕ್ಕರೆ ...
ಮಾನವ ಜಗತ್ತಿನ ಮಹಾ ಅದ್ಭುತಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳೋದು ವಿಮಾನಗಳು. ಸಹಸ್ರಾರು ಕಿಲೋಮೀಟರ್ಗಳಷ್ಟು ದೂರವನ್ನು ಕೆಲವೇ ಗಂಟೆಗಳಲ್ಲಿ ತಲುಪೋ ಈ ವಿಮಾನಗಳು ಇವತ್ತು ಜಗತ್ತನ್ನು ತುಂಬಾ ಹತ್ತಿರಕ್ಕೆ ತಂದು ಬಿಟ್ಟಿವೆ. ಇಂತಹ ವಿಮಾನಗಳು ಎಂತಹದ್ದೇ ಪರ್ವತಗಳನ್ನು ಕೂಡಾ ದಾಟುತ್ತವೆ. ಮಹಾಸಾಗರಗಳನ್ನು ಕ್ರಾಸ್ ಮಾಡುತ್ತವೆ. ಹೀಗಾಗಿ ಅವುಗಳ ಶಕ್ತಿಗೆ ತಲೆದೂಗದವರೇ ಇಲ್ಲ. ಹೀಗಿದ್ದರೂ ಕೂಡಾ ಕೆಲವೊಮ್ಮೆ ವಿಮಾನಗಳು ಹಾಗೂ ಅವುಗಳ ಪೈಲೆಟ್ಗಳು ತುಂಬಾನೇ ವಿಚಿತ್ರವಾಗಿ ವರ್ತಿಸ್ತಾರೆ. ನೇರವಾಗಿ ಹೋದರೆ ಕೆಲವೇ ನಿಮಿಷಗಳಲ್ಲಿ ಸೇರುವ ಜಾಗಗಳನ್ನು ಕೂಡಾ ಸುತ್ತಿ ಬಳಸಿ ಗಂಟೆಗಳ ಕಾಲ ಆಕಾಶದಲ್ಲೇ ರೌಂಡ್ ಹೊಡೆಸಿ ...
ಜಪಾನ್ ಅನ್ನೋ ಹೆಸರಲ್ಲ ಒಂದು ರೀತಿಯ ಶಕ್ತಿ. ವಿದ್ವಂಸಕಾರಿ ದಾಳಿಯಿಂದ ಕೇವಲ ಯವತ್ತು ಐವತ್ತು ವರ್ಷಗಳಲ್ಲಿ ವಿಶ್ವದ ಪ್ರಬಲ ಶಕ್ತಿಯಗಿ ಬೆಳೆದು ಬಂದ ಜಪಾನ್ ಇಡಿ ಜಗತ್ತಿಗೆ ಇವತ್ತು ಮಾದರಿಯಾಗಿದೆ. ಅಲ್ಲಿನ ಟೆಕ್ನಾಲಜಿಗೆ ಇಡಿ ಪ್ರಪಂಚ ತಲೆದೂಗುತ್ತೆ. ಮೇಡ್ ಇನ್ ಜಪಾನ್ ಅಂತಂದ್ರೆ ಕಣ್ಣು ಮುಚ್ಚಿ ಏನನ್ನು ಬೇಕಿದ್ರು ತಗೋಬಹುದು ಅಂತ ಹೇಳಲಾಗುತ್ತದೆ. ಇಂತಹ ಜಪಾನ್ನಲ್ಲಿ ಆಗಾಗ್ಗೆ ಭರ್ಜರಿ ಸುದ್ದಿಗಳು ಹೊರ ಬೀಳ್ತಾ ಇರುತ್ತೆ. ಅಂತಹದ್ದೇ ಒಂದು ಸುದ್ದಿ ಮೊನ್ನೆ ಮೇ 11ನೇ ತಾರಿಕು ಹೊರ ಬಿದ್ದಿದೆ. ಇಲ್ಲಿದೆ ನೊಡಿ ಆ ಸುದ್ದಿಯ ಮೂಲ ...
ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ರಾಜ್ಯ ಹಾಗೂ ದೇಶದ ಜನತೆಗೆ ಈಗೊಂದಷ್ಟು ಸಮಾಧಾನ ಸಿಕ್ತಿದೆ. ಕಳೆದ ಒಂದು ವಾರದಿಂದ ವರುಣ ಕೂಡಾ ಅಬ್ಬರಿಸ್ತಿದ್ದು, ಇಳೆ ತಂಪಾಗುವಂತೆ ಮಾಡಿದ್ದಾನೆ. ಇನ್ನೇನು ಹಸಿರೆಲ್ಲ ಹೋಯ್ತು ಅನ್ನೋ ಹೊತ್ತಿಗೆ ಮಳೆ ಬಿದ್ದಿರೋದ್ರಿಂದ ಭೂಮಿಯಲ್ಲಿ ಹಸಿರು ಚಿಗುರೋದಕ್ಕೆ ಶುರುಮಾಡಿದೆ. ಕಾಡುಗಳಲ್ಲಿನ ಕಾಳ್ಗಿಚ್ಚು ಕಡಿಮೆ ಆಗಿದೆ. ದನಕರುಗಳಿಗೆ ನೀರು ಸಿಕ್ತಿದೆ. ಇಷ್ಟಾದ್ರು ಇನ್ನು ಕೆಲವು ಕಡೆಗಳಲ್ಲಿ ಮಳೆ ಬೀಳದೇ ಇರೋದು ಆ ಭಾಗದ ಜನರಲ್ಲಿ ಆತಂಕವನ್ನ ಉಂಟು ಮಾಡ್ತಾ ಇದೆ. ಈ ಹೊತ್ತಲ್ಲೇ ಭಾರತದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆ ಆಗುತ್ತೆ ...
ಚಂದ್ರನನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳೋದಕ್ಕೆ ಜಗತ್ತಿನಲ್ಲಿ ‘ರೇಸ್’ ಶುರುವಾಗಿದೆ. ಈಗಾಗಲೇ ಭೂಮಿ ಮೇಲಿರೋ ಅಂಟಾರ್ಟಿಕವನ್ನು ಹರಿದು ಹಂಚಿಕೊಂಡಿರೋ ಜಾಗತಿಕ ಶಕ್ತಿಗಳು ಈಗ ಚಂದ್ರನನ್ನು ವಶಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿವೆ. ಈ ಹಿನ್ನಲೆಯಲ್ಲೇ ಚೈನಾ ಚಂದ್ರನ ಮೇಲೆ ಒಂದಷ್ಟು ಬಾಹ್ಯಾಕಾಶ ನೆಲೆಗಳನ್ನ ಮಾಡಿಕೊಳ್ಳೋದ್ರ ಮೂಲಕ ಆ ಕಾರ್ಯಕ್ಕೆ ಚಾಲನೆಯನ್ನ ಕೊಟ್ಟಿದೆ. ಅಲ್ಲಿ ನಿರ್ಮಾಣ ಆಗ್ತಿರೋದು ಕೇವಲ ಸಂಶೋಧನಾ ಘಟಕನಾ ಅಥವ ಚೈನಾ ಅಲ್ಲಿಗೆ ತನ್ನ ಮಿಲಿಟರಿಯನ್ನ ಕಳಿಸುತ್ತಾ ಅನ್ನೊ ಕುತೂಹಲ ಕೂಡಾ ಹೆಚ್ಚಾಗ್ತ ಇದೆ. ಇದೆಲ್ಲ ಅಲ್ಲಿನ ಅತ್ಯದ್ಭುತವಾದ ಖನಿಜ ಸಂಪತ್ತನ್ನು ಕೈ ವಶ ಮಾಡಿಕೊಳ್ಳುವ ...
ಮಹಾಭಾರತದ ಕತೆಗಳನ್ನ ಕೇಳೋವಾಗ ಪ್ರಮಿಳಾ ಸಾಮ್ರಾಜ್ಯದ ವಿಷಯ ಬರುತ್ತೆ. ಹೆಣ್ಣುಮಕ್ಕಳೇ ರಾಜ್ಯಭಾರವನ್ನ ನಡೆಸ್ತಾ ಇದ್ದ ಸಾಮ್ರಾಜ್ಯವೊಂದು ದಕ್ಷಿಣ ಭಾರತಲ್ಲಿತ್ತು. ಅಲ್ಲಿ ಪುರುಷರಿಗೆ ಪ್ರವೇಶ ಇರ್ಲಿಲ್ಲ! ಅಕಸ್ಮಾತ್ ಬಂದ್ರೂ ರಾತ್ರಿ ಉಳಿದುಕೊಳ್ಳೋ ಹಾಗಿಲ್ಲ, ಅಂತಹ ಸಾಮ್ರಾಜ್ಯವನ್ನ ಪಾಂಡವರ ಅಶ್ವಮೇಧದ ಕುದುರೆ ಪ್ರವೇಶ ಮಾಡಿತ್ತು. ಅದರ ಬೆಂಗಾವಲಿಗೆ ಹೋದ ಅರ್ಜುನ ಅಲ್ಲಿನ ಮಹಾರಾಣಿಯಾಗಿದ್ದ ಪ್ರಮಿಳೆಯ ಸೈನ್ಯದ ಜೊತೆ ಕಾದಾಡಿದ್ದ ಅನ್ನೋ ಕಥೆಗಳನ್ನ ಕೇಳಿರ್ತೀರಿ. ಇಪ್ಪತ್ತೊಂದನೇ ಶತಮಾನದಲ್ಲಿ ‘ಪ್ರಮಿಳಾ ಸಾಮ್ರಾಜ್ಯ’ ಅಂದರೆ ಸ್ತ್ರೀಯರು ಮಾತ್ರ ಇರೋ ಪುಟ್ಟ ಗ್ರಾಮವೊಂದಿದೆ, ಅಲ್ಲಿ ಪುರುಷರಿಗೆ ಪ್ರವೇಶ ಇಲ್ಲ..ಬಂದ್ರೂ ರಾತ್ರಿ ಉಳಿದುಕೊಳ್ಳೋ ಹಾಗಿಲ್ಲ..! ...
ಈ ಜಗತ್ತಿನಲ್ಲಿ ಅತಿ ದೊಡ್ಡ ಹಾವು ಯಾವುದು? ಅದು ಅನಕೊಂಡನಾ ಅಥವಾ ರೆಟಿಕ್ಯುಏಟೆಡ್ ಪೈತಾನಾ? ಇಲ್ಲಿವರೆಗೂ ಈ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಆದರೆ ಇತ್ತೀಚಿಗೆ ಕೊಲಂಬಿಯಾದಲ್ಲಿ ಸಿಕ್ಕಿ 27 ಅಡಿಗಳಷ್ಟು ಉದ್ದದ ಅನಕೊಂಡ ಹೆಚ್ಚು ಸದ್ದು ಮಾಡಿತ್ತು. ಅದು ಐನೂರು ಕೆಜಿಯಷ್ಟು ತೂಗ್ತಿತ್ತು. ಹೀಗಾಗಿ ಅತೀ ಉದ್ದದ ಹಾಗೂ ಅತಿ ತೂಕದ ಹಾವು ಅನ್ನೊ ಹೆಗ್ಗಳಿಕೆ ಅದು ಪಾತ್ರ ಆಯ್ತು. ಅಲ್ಲಿವರೆಗೂ ಈ ಉದ್ದದ ಹಾವುಗಳ ಪಟ್ಟಿಯಲ್ಲಿ ಮಲಯನ್ ಪೈತಾನ್ಗಳು ಅಂದ್ರೆ ರೆಟಿಕ್ಯುಲೇಟೆಡ್ ಪೈತಾನ್ಗಳು ಕಾಣಿಸಿಕೊಳ್ತಿದ್ವು. ಹೀಗಾಗಿ ಜಗತ್ತಿನ ಅತಿ ಉದ್ದದ ಸರಿಸೃಪ ಯಾವುದು ...
ಚಂದ್ರನ್ನ ಕಬ್ಜ ಮಾಡಿಕೊಳ್ಳೋದಕ್ಕೆ ರಶ್ ಶುರುವಾಗಿ ಐವತ್ತೈದು ವರ್ಷಗಳು ಕಳೆದು ಹೋಗ್ತಿವೆ. ಇಂತಹ ಹೊತ್ತಲ್ಲಿ ನಾಸಾದ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಒಂದು ಭಯಾನಕ ಮಾಹಿತಿಯನ್ನ ಹೊರ ಹಾಕಿದ್ದಾರೆ. 2030ರ ಹೊತ್ತಿಗೆ ಚೈನಾ ಚಂದ್ರನನ್ನು ತನ್ನ ಮುಷ್ಟಿಗೆ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಅಂತ ಅವ್ರು ಹೇಳ್ತಾ ಇದ್ದಾರೆ. ಅದಕ್ಕೆ ಅವ್ರು ಸಾಕಷ್ಟು ಕಾರಣಗಳನ್ನು ಕೂಡಾ ಕೊಡ್ತಿದ್ದು, ಇದನ್ನ ಏನಾದ್ರು ಮಾಡಿ ತಡೀಬೇಕು ಅಂತ ಅವ್ರು ಹೇಳ್ತಿದ್ದಾರೆ. ಚಂದಿರ. ಹುಣ್ಣಿಮೆಯ ದಿನ ಬಾನಲ್ಲಿ ರಾತ್ರಿ ಹೊತ್ತು ಮಿನುಗುವ ಚಂದ್ರನನ್ನ ನೋಡಿದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ...
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (International Monitary Fund) ಅಂದ್ರೆ IMF ಭಾರತೀಯರಿಗೊಂದು ಖುಷಿಯ ವಿಷಯವನ್ನ ಹಂಚಿಕೊಂಡಿದೆ. ಈ ಬಾರಿ ಭಾರತ ಚೈನಾವನ್ನು ಕೂಡಾ ಹಿಂದಿಕ್ಕಲಿದೆ ಅನ್ನೋ ಭವಿಷ್ಯವನ್ನ IMF ನುಡಿದಿದೆ. ಇದು ಭಾರತದ ತಾಖತ್ತು ಹೆಚ್ಚಿಸುಕೊಳ್ಳುವ ಸಮಯವಾಗಿದ್ದು ಚೈನಾ ವೈರಾಣು ಕಾಟದ ನಂತರ ಇಡಿ ಜಗತ್ತು ಚೀನಿಯರನ್ನ ನಂಬೋದನ್ನ ಬಿಟ್ಟು ಭಾರತದ ಕಡೆ ನೋಡ್ತಿರೋದೇ ಈ ಬೆಳವಣಿಗೆಗೆ ಕಾರಣ ಅಂತ ಹೇಳಲಾಗ್ತಾ ಇದೆ. ಭಾರತ ಈಗ ಇಡಿ ವಿಶ್ವದಲ್ಲೇ ಅತಿ ಹೆಚ್ಚು ಜನ ಸಂಖ್ಯೆಯನ್ನ ಹೊಂದಿರೋ ದೇಶ. ಹಾಗಾನೇ ಇದು ಐದನೇ ಅತಿ ದೊಡ್ಡ ...
ಅವಳಿಗೆ ಆಗಷ್ಟೆ ಹದಿನೆಂಟು ತುಂಬಿತ್ತು. ಅವಳ ಮನೆಗೆ ಬಂದ ಗುಪ್ತಚರ ಅಧಿಕಾರಿಗಳು, ಆ ಯುವತಿಯ ಸಹಾಯ ಕೇಳಿದ್ರು. “ದೇಶಕ್ಕಾಗಿ ನೀನೊಂದು ಮಹಾತ್ಕಾರ್ಯವನ್ನ ಮಾಡಬೇಕಿದೆ!” ಅಂದರು. “ಯಾವುದೇ ಕ್ಷಣದಲ್ಲೂ, ಎಂಥದ್ದೇ ಪರಿಸ್ತಿಯಲ್ಲೂ ನಿನ್ನನ್ನ ರಕ್ಷಿಸಿಕೊಳ್ಳುವ ಜವಬ್ದಾರಿ ನಮ್ಮದು” ಅನ್ನೋ ಭರವಸೆಯಿತ್ತರು. ಆ ಬಳಿಕ ಅವಳು ಕೆಲಸ ಮಾಡಬೇಕಿದ್ದ ಜಾಗದ ಬಗ್ಗೆ ತಿಳಿಸಿದ್ರು. ಅಲ್ಲವತ್ತು ಅವರು ಹೇಳಿದ ಸ್ಥಳದಲ್ಲಿ ನಿಜಕ್ಕೂಕೆಲಸ ಮಾಡೋದಕ್ಕೆ ಆಗುತ್ತಾ? ಅಲ್ಲಿ ಜಗತ್ತಿನ ಅತಿ ಬಲಿಷ್ಟ ಗುಪ್ತಚರ ಸಂಸ್ಥೆ ಇದೆ. ಅಲ್ಲಿನ ಪೊಲೀಸಿಂಗ್ ವ್ಯವಸ್ಥೆ ಇಡೀ ಜಗತ್ತಲ್ಲೇ ಮನ್ನಣೆಯನ್ನು ಗಳಿಸಿಕೊಂಡಿದೆ. ಇಷ್ಟರ ಮೇಲೂ ಅಲ್ಲಿ ...












