ಭಾರತೀಯ ಸೇನೆ ಮೇಂಟೇನ್ ಮಾಡ್ತಿರೋ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಾ..?

ಕೇರಳದ ತಿರುವನಂತಪುರಂನಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ತಿಳಿಯದವರೇ ಕಡಿಮೆ. ಲಕ್ಷಾಂತರ ಕೋಟಿ ಚಿನ್ನಾಭರಣಗಳನ್ನ ಹೊಂದಿರೋ ಅನಂತ ಪದ್ಮನಾಭ ಸ್ವಾಮಿ, ತಿರುಪತಿಯ ತಿಮ್ಮಪ್ಪನನ್ನು ಹಿಂದಿಕ್ಕಿದ್ದ ದೇವರಾಗಿದ್ದ. ಹೀಗಾಗೀ ಆ ದೇವಾಲಯಕ್ಕೆ ಹೆಚ್ಚಿನ ಭದ್ರತೆಯನ್ನ ಕೊಡಲಾಗಿತ್ತು. ಎಲ್ಲಿ ನೋಡಿದರೂ ಸಿಸಿ ಕೆಮೆರಾಗಳು, ಸಿಂಪಲ್ಲಾಗಿ ಪಂಚೆಯುಟ್ಟು ದೇವಾಲಯದ ಒಳಗೆ ಕಾವಲು ಕಾಯ್ತಿದ್ದ ಮಿಲಿಟರಿ; ಯಾವ ಅಧಿಕಾರಿಯ ಸೊಂಟದಲ್ಲಿ ನೋಡಿದ್ರು ಅತ್ಯಾಧುನಿಕ ಆಯುಧಗಳು! ಇದು ಅನಂತ ಪದ್ಮನಾಭನ ದೇವಾಲಯದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯಗಳು. ಆ ದೇವಾಲಯನ್ನು ಸಂಪೂರ್ಣವಾಗಿ ಮಿಟಲಿರಿ ಆವರಿಸಿಕೊಂಡು ಬಿಟ್ಟಿದೆ. ಅದಕ್ಕೆ ಕಾರಣ ಅಲ್ಲಿರೋ ಸಂಪತ್ತು. ಈ ದೇವಾಲಯವನ್ನ ನೋಡಿಕೊಳ್ಳುತ್ತಿರುವುದು ಮಿಟಲಿರಿಯೇ ಆದ್ರು ಅದ್ರ ಉಸ್ತುವಾರಿ ಮಾತ್ರ ಟ್ರಸ್ಟಿನ ಹಿಡಿತದಲ್ಲಿದೆ.
ಆದರೆ ಈ ಅನಂತ ಪದ್ಮನಾಭ ಸ್ಮಾಮಿ ದೇವಾಲಯದಿಂದ ಕೂಗಳತೆ ದೂರಲ್ಲಿ ಒಂದು ಗಣೇಶನ ಮಂದಿರ ಇದೆ. ಆ ದೇವಾಲಯ ಸಂಪೂರ್ಣ ಹೊಣೆ ಮದ್ರಾಸ್ ರೆಜಿಮೆಂಟಿದೇ ಆಗಿದೆ! ಆ ದೇವಾಲಯವನ್ನ ಮೂರು ಶತಮಾನಗಳಿಂದ ಮಿಲಿಟರಿಯೇ ನೋಡಿಕೊಂಡು ಬರ್ತಿದೆ. ಭಾರತದಲ್ಲಿ ಸೇನೆಯೇ ಮೆಂಟೇನ್ ಮಾಡ್ತಿರುವ , ಜನನಿಬಿಡ ಪ್ರದೇಶದಲ್ಲಿರೋ ಅತ್ಯಂತ ಪ್ರಖ್ಯಾತ ದೇವಾಲಯಗಳ ಪೈಕಿ ಇದು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತೆ.
ಹಾಗಾದರೆ ಈ ಗಣೇಶ ದೇವಾಲಯದ ವಿಶೇಷತೆ ಏನು? ಇದನ್ನ ಮಿಲಿಟರಿ ತನ್ನ ಹಿಡಿತದಲ್ಲೇ ಇಟ್ಟುಕೊಂಡಿರೋದ್ಯಾಕೆ ಅನ್ನೋ ಕುರಿತಾದ ಕುತೂಹಲಕಾರಿ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.