ಅದೊಂದು ವಿಚಿತ್ರ ಕಾಡು. ಅಲ್ಲಿ ಹುಲಿ ಘರ್ಜನೆ ಇದೆ. ಹಕ್ಕಿಗಳ ಚಿಲಿಪಿಲಿ ಕೇಳಿ ಬರುತ್ತೆ. ಆ ಕಾಡಲ್ಲಿ ಚಿರತೆಗಳು ಹುಲಿಗಳ ಕಣ್ಣುತಪ್ಪಿಸಿ ಓಡಾಡುತ್ವೆ. ಹಾಗೇ ಅಲ್ಲಿ ಕರಡಿ ಹಾಗೂ ಹುಲಿಯ ನಡುವಿನ ಬಲಾಬಲದ ಪರೀಕ್ಷೆಗಳೂ ನಡೆಯುತ್ವೆ. ಇಂತಹ ಕಾಡಲ್ಲಿ ನರಭಕ್ಷಕ ಹುಲಿಗಳ ಕಥೆ ಕೂಡಾ ಕೇಳಿ ಬರುತ್ತೆ. ಆ ಕಾಡಿನ ಸುತ್ತಮುತ್ತ ಒಂದೇ ವರ್ಷದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಹುಲಿ ದಾಳಿಯಿಂದ ಸಾವನ್ನಪ್ಪಿರೋ ವರದಿಯಾಗಿದೆ. ಇಷ್ಟಾದ್ರು ಅಲ್ಲಿ ಜನ ನಿರ್ಭಡೆಯಿಂದ ಓಡಾಡ್ತಾರೆ. ಬೈಕ್ಗಳನ್ನ ಹುಲಿಗಳು ಅಡ್ಡಗಟ್ಟುತ್ವೆ. ಕೆಲವೊಮ್ಮೆ ಸವಾರರನ್ನು ಪ್ರದಕ್ಷಿಣೆ ಹಾಕೋ ಹುಲಿಗಳು ...

ಅದು ಐತಿಹಾಸಿಕ ಅಭಯಾರಣ್ಯ. ಭಾರತ ಹಾಗೇ ಏಷ್ಯಾದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನಗಳ ಪೈಕಿ ಒಂದು. 20ನೇ ಶತಮಾನದಲ್ಲಿ ಜೀವಿಸಿದ್ದ, ನರಭಕ್ಷಕ ಹುಲಿಬೇಟೆಗಾರನ ಕನಸಿನ ಕೂಸು ಆ ಸಂರಕ್ಷಿತಾರಣ್ಯ. ಜೀವವೈವಿದ್ಯಕ್ಕೆ ಹೆಸರುವಾಸಿಯಾದ ಆ ಅಭಯಾರಣ್ಯದಲ್ಲಿ ಸುಮಾರು 250ಕ್ಕೂ ಅಧಿಕ ಹುಲಿಗಳಿದ್ರೂ ಕೂಡಾ ಅದೃಷ್ಟವಿದ್ದೋರಿಗೆ ಮಾತ್ರ ಕಾಣಸಿಗೋದು ಅನ್ನೋ ಮಾತಿದೆ. ಅಲ್ಲಿ 700ಕ್ಕೂ ಅಧಿಕ ಆನೆಗಳಿವೆ, 5 ಸಾವಿರಕ್ಕೂ ಅಧಿಕ ಜಿಂಕೆಯಂತಹ ಪ್ರಾಣಿಗಳು ಆಹಾರ ಸರಪಳಿಯನ್ನ ಭದ್ರವಾಗಿಸಿವೆ. ಅಲ್ಲಿ ಸ್ವಾರ್ಥದ ಮರಗಳ ಕತೆ ಕೇಳಿಬರುತ್ತೆ, ಫಾರೆಸ್ಟ್ ಕ್ಯಾನ್ಸರ್ ಅನ್ನೋ ಕುಖ್ಯಾತಿಗೆ ಪಾತ್ರವಾದ ಪ್ಲೋರಾ ಕಾಣಸಿಗುತ್ತೆ. 20ನೇ ...

ಮಾನವರ ಬೇಟೆಯ ಹುಚ್ಚಿಗೆ ಅಪರೂಪದಲ್ಲಿ ಅಪರೂಪ ಅನ್ನಿಸಿಕೊಂಡಿರೋ ಅನೇಕ ವನ್ಯಜೀವ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ನೀಲಗಿರಿ ಥಾರ್ಗಳು, ಏಷಿಯಾಟಿಕ್ ಲಯನ್ಸ್, ಸ್ಲೆಂಡರ್ ಲೋರೀಸ್, ಸಿಂಹಬಾಲದ ಕೋತಿಗಳು, ಬೆಂಗಾಲ್ ಟೈಗರ್ಸ್ ಸೇರಿದಂತೆ ಹಲವು ಅಪೂರ್ವ ಜೀವಿಗಳು ಬೆರಳೆಣಿಕೆಯಷ್ಟೇ ಉಳಿದುಕೊಂಡಿವೆ. ಅಳಿದುಳಿದ ಈ ಸಂಕುಲವನ್ನು ಉಳಿಸಿಕೊಳ್ಳೋದಕ್ಕೆ ಸರ್ಕಾರ ನಾನಾ ಯೋಜನೆಯನ್ನ ಹಮ್ಮಿಕೊಂಡಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಲಯನ್, ಪ್ರಾಜೆಕ್ಟ್ ಕ್ರೊಕೊಡೈಲ್ ಹೀಗೆ ಕಾಲಕ್ಕನುಗುಣವಾಗಿ ನಾನಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಾ ಇದೆ. ಇಂತಹದ್ದೇ ಒಂದು ಅಳಿವಿನ ಅಂಚಿಗೆ ತಲುಪಿರುವ ಭಾರತೀಯ ಮೂಲದ ಅಪರೂಪದ ತಳಿಯ ಸಂರಕ್ಷಣೆಗಾಗಿ ಅರಣ್ಯ ...

ಇತ್ತೀಚೆಗೆ ಮಲೆಯಾಳಂ ಸಿನಿಮಾ ತುಂಬಾನೇ ಸದ್ದು ಮಾಡ್ತಿದೆ. ದಶಕಗಳ ಹಿಂದೆ ಪೋಲಿ ಸಿನಿಮಾಗಳಿಗೆ ಫೇಮಸ್ ಆಗಿದ್ದ ಮಲಯಾಳಂ ಚಿತ್ರ ರಂಗ ಇಡೀ ಇಡೀ ದೇಶವನ್ನ ತನ್ನತ್ತ ತಿರುಗಿ ನೋಡುವಂತೆ ಮಾಡ್ತಿದೆ. ಸಾಕಷ್ಟು ಅತ್ಯುತ್ತಮ ಚಿತ್ರಗಳು ತೆರೆ ಕಾಣ್ತಿವೆ. ಅಷ್ಟೇ ಅಲ್ಲದೇ ಈ ವರ್ಷ ಮಲಯಾಳಂ ಚಿತ್ರವೊಂದು ಸಾವಿರ ಕೋಟಿ ಕ್ಲಬ್ಬನ್ನ ಸೇರಿದೆ. ಮತ್ತೆ ಮಲೆಯಾಳಂ ಚಿತ್ರರಂಗ ಸುದ್ದಿಯಾಗಲು ಕಾರಣವಾಗಿದ್ದು ಇತ್ತೀಚೆಗೆ ‘ಮಂಜುಮೆಲ್ ಬಾಯ್ಸ್’ ಅನ್ನೋ ಸಿನಿಮಾ! ಈ ಚಿತ್ರದಲ್ಲಿ ನೈಸರ್ಗಿಕ ಗುಹೆಯೊಂದರಲ್ಲಿ ಕಂದಕಕ್ಕೆ ಬಿದ್ದ ಸ್ನೇಹಿತನನ್ನ ಸಾವಿನದ ದವಡೆಯಿಂದ ಪಾರು ಮಾಡೋದ್ರ ಬಗ್ಗೆ ತೋರಸಲಾಗಿದೆ. ...

ರಸ್ತೆಗಳನ್ನು ದೇಶದ ನರನಾಡಿಗಳು ಅಂತ ಕರೆಯಲಾಗುತ್ತೆ. ಆದ್ರೆ ಅಂತಹ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿಗಳು ಅಥವಾ ಪಾಟ್ ಹೋಲ್ಗಳು ಸಾರ್ವಜನಿಕರ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತವೆ. ಅದು ಯಾವುದೇ ರಸ್ತೆ ಆಗಿರಬಹುದು, ಅಲ್ಲೊಂದು ಗುಂಡಿ ಬಿತ್ತು ಅಂದ್ರೆ ಅದನ್ನ ಗಮನಿಸದೇ ಹೋದ್ರೆ ಅಲ್ಲೊಂದಷ್ಟು ಸಾವು ನೋವು ಕಟ್ಟಿಟ್ಟ ಬುತ್ತಿ! ಈ ಪಾಟ್ ಹೋಲ್ಗಳ ಕಾರಣದಿಂದ 2022ರಲ್ಲಿ ಸರಿ ಸುಮಾರು 4446 ಅಫಘಾತಗಳು ಸಂಭವಿಸಿವೆ. ಅದರಲ್ಲಿ 1856 ಮಂದಿ ಸಾವನ್ನಪ್ಪಿದ್ರೆ, ಇನ್ನುಳಿದ ನಾಗರೀಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಕೇವಲ ಉದಾಹರಣೆ ಅಷ್ಟೆ! ಇಂತಹ ಅದೆಷ್ಟೊ ಘಟನೆಗಳು ಗೊತ್ತೂ ಆಗದಂತೆ ...

ಮೊದಲ ಚುನಾವಣೆಯಿಂದಲೇ ಅಸ್ಥಿತ್ವರದಲ್ಲಿರೊ ಲೋಕಸಭಾ ಕ್ಷೇತ್ರಗಳ ಪೈಕಿ ಬಿಜಾಪುರ ಅಥವಾ ವಿಜಯಪುರ ಕೂಡಾ ಒಂದು. ಈ ಲೋಕಸಭಾ ಕ್ಷೇತ್ರ ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ಬಿಜಾಪಪುರ ಸಿಟಿ, ನಾಗಠಾಣ, ಇಂಢಿ, ಸಿಂಧಗಿ ಅನ್ನೋ 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಈ ಪೈಕಿ 6ರಲ್ಲಿ ಕಾಂಗ್ರೆಸ್ ಇದ್ರೆ, ಜೆಡಿಎಸ್ ಹಾಗೂ ಬಿಜೆಪಿ ತಲಾ ಒಂದು ಕ್ಷೇತ್ರವನ್ನ ಹಂಚಿಕೊಂಡಿವೆ. ಇಲ್ಲಿ ಪ್ರಸುತ ಬಿಜೆಪಿಯ ರಮೇಶ್ ಜಿಗಜಿಣಗಿ ಸಂಸದರಾಗಿದ್ದಾರೆ. 1999ರಿಂದಲೂ ಇಲ್ಲಿ ಬಿಜೆಪಿ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. 1999 ಹಾಗೂ 2004 ಚುನಾವಣೆಗಳಲ್ಲಿ ಬಸವನಗೌಡ ಪಾಟೀಲ್ ...

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗಮನವನ್ನ ಸೆಳೀತಿರೋದು ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕಗಳು. ಇಲ್ಲಿನ ಎಲ್ಲ ಕ್ಷೇತ್ರದಲ್ಲೂ ಕೂಡಾ ಈ ಬಾರಿ ತುರುಸಿನ ಸ್ಪರ್ಧೆ ಕಂಡು ಬರ್ತಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ನೇರ ಹಣಾಹಣಿ. ಹೀಗಾಗಿನೇ ಘಟಾನುಘಟಿ ನಾಯಕರ ಭವಿಷ್ಯ ಇಲ್ಲಿ ನಿರ್ಧಾರ ಆಗಲಿದೆ. ಈ ಭಾಗದಲ್ಲಿ ತೀವ್ರ ಕುತೂಹಲವನ್ನ ಉಂಟುಮಾಡಿರೋ ಕ್ಷೇತ್ರಗಳು ಸಾಕಷ್ಟಿವೆ. ಆದ್ರೆ ಸ್ವಲ್ಪ ವಿಶೇಷವಾಗಿ ಕಾಣೋದು ರಾಯಚೂರು ಲೋಕಸಭಾ ಕ್ಷೇತ್ರ. ಯಾಕಂದ್ರೆ ಈ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳಿಗೆ ಮತದಾರೊಂದಿಗಿನ ಭಾಂದವ್ಯ ಅಷ್ಟಕ್ಕಷ್ಟೇ. ಕುಟುಂಬ ...

ಧಾರವಾಡ ಲೋಕಸಭಾ ಕ್ಷೇತ್ರ ಸಧ್ಯ ಬಿಜೆಪಿ ಹಿಡಿತದಲ್ಲಿದ್ದರೂ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಪೈಪೋಟಿಯಿದೆ. ಇದು ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ ಧಾರವಾಡ ಪೂರ್ವ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಹುಬ್ಬಳ್ಳಿ ಧಾರವಾಡ ಕೇಂದ್ರ, ಕಲಘಟಿಕಿ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತೆ. ಈ ಪೈಕಿ ನಾಲ್ಕರಲ್ಲಿ ಬಿಜೆಪಿ ಹಾಗೇ ನಾಲ್ಕರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿ ಬಿಜೆಪಿಯಿಂದ ಹಾಲಿ ಸಂಸದ ಪ್ರಹ್ಲಾದ್ ...

ಗಣಿನಾಡಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಬಳ್ಳಾರಿಯಲ್ಲಿ ರಾಮುಲು ವರ್ಸಸ್ ತುಕಾರಂ ಅಖಾಡ ಸಿದ್ದ ಆಗಿದೆ. ಗಣಿಯಿಂದಾಗಿ ಅಲ್ಲಿನ ಗಣಿ ಧಣಿಗಳಿಂದಾಗಿ ಈ ಕ್ಷೇತ್ರ ಸಾಕಷ್ಟು ಪ್ರಖ್ಯಾತಿ ಹಾಗೂ ಕುಖ್ಯಾತಿಯನ್ನ ಗಳಿಸಿಕೊಂಡಿತ್ತು. 1999ರಲ್ಲಿ ಇಲ್ಲಿಂದ ಸೋನಿಯಾಗಾಂಧಿ ಸ್ಪರ್ಧೆ ಮಾಡಿದಾಗ ಇಡೀ ದೇಶದ ಕಣ್ಣು ಬಳ್ಳಾರಿ ಮೇಲೆ ಬಿದ್ದಿತ್ತು. ಅಂತಹ ಬಳ್ಳಾರಿಯಲ್ಲಿ ಈಗ ಕಾಂಗ್ರೆಸ್ ಹಾಗೂ ಬಿಜೆಪಿಗಳು ಸಮಬಲದ ಹೋರಾಟವನ್ನ ನಡೆಸುವ ಉತ್ಸಾಹವನ್ನ ತೋರುತ್ತಾ ಇವೆ. ಈ ಬಾರಿ ಏನಾದ್ರೂ ಮಾಡಿ ಅತಿ ಹೆಚ್ಚು ಕ್ಷೇತ್ರಗಳನ್ನ ಗೆಲ್ಲಬೇಕು ಅಂತ ಹೊರಟಿರೋ ಎರಡು ಪಕ್ಷಗಳು ಬಳ್ಳಾರಿ ಮೇಲೂ ...

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನ ನೋಡೋದಾದ್ರೆ ಸ್ಥಳಿಯ ನಾಯಕರ ವಿರೋಧವನ್ನ ಲೆಕ್ಕಿಸದೇ ಇಲ್ಲಿ ಹಾಲಿ ಸಂಸದ ಭಗವಂತ್‌ ಖೂಬಾ ಅವರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್‌ ನೀಡಿದೆ. ಭಗವಂತ್ ಖೂಬಾ, ಬಾಬಾ ರಾಮ್ ದೇವ್ ಹಾಗೂ RSS ಮೂಲಕ ಟಿಕೆಟ್ ಪಡೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಮಾತುಗಳಿವೆ. ಅವರು ಮೊದಲ ಬಾರಿ ಸ್ಪರ್ಧೆ ಮಾಡಿದಾಗಲೂ ಕೂಡಾ ಅವರ ಬೆನ್ನಿಗೆ ಬಾಬಾ ರಾಮ್ ದೇವ್ ನಿಂತಿದ್ರು. ಹೀಗಾಗಿ ಈ ಬಾರಿ ಕೂಡಾ ಅವರಿಗೆ ಟಕೆಟ್ ಸಿಕ್ಕಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಏನಾದ್ರೂ ಮಾಡಿ ಭಗವಂತ್ ಖೂಬಾರನ್ನ ಕಟ್ಟಿ ...