ಭರತ ಖಂಡದಲ್ಲಿತ್ತಾ ಜಗತ್ತಿನ ಅತೀದೊಡ್ಡ ಹಾವು..?

ಈ ಜಗತ್ತಿನಲ್ಲಿ ಅತಿ ದೊಡ್ಡ ಹಾವು ಯಾವುದು? ಅದು ಅನಕೊಂಡನಾ ಅಥವಾ ರೆಟಿಕ್ಯುಏಟೆಡ್ ಪೈತಾನಾ? ಇಲ್ಲಿವರೆಗೂ ಈ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಆದರೆ ಇತ್ತೀಚಿಗೆ ಕೊಲಂಬಿಯಾದಲ್ಲಿ ಸಿಕ್ಕಿ 27 ಅಡಿಗಳಷ್ಟು ಉದ್ದದ ಅನಕೊಂಡ ಹೆಚ್ಚು ಸದ್ದು ಮಾಡಿತ್ತು. ಅದು ಐನೂರು ಕೆಜಿಯಷ್ಟು ತೂಗ್ತಿತ್ತು. ಹೀಗಾಗಿ ಅತೀ ಉದ್ದದ ಹಾಗೂ ಅತಿ ತೂಕದ ಹಾವು ಅನ್ನೊ ಹೆಗ್ಗಳಿಕೆ ಅದು ಪಾತ್ರ ಆಯ್ತು. ಅಲ್ಲಿವರೆಗೂ ಈ ಉದ್ದದ ಹಾವುಗಳ ಪಟ್ಟಿಯಲ್ಲಿ ಮಲಯನ್ ಪೈತಾನ್ಗಳು ಅಂದ್ರೆ ರೆಟಿಕ್ಯುಲೇಟೆಡ್ ಪೈತಾನ್ಗಳು ಕಾಣಿಸಿಕೊಳ್ತಿದ್ವು. ಹೀಗಾಗಿ ಜಗತ್ತಿನ ಅತಿ ಉದ್ದದ ಸರಿಸೃಪ ಯಾವುದು ಅಂದ್ರೆ ಅದು ಅನಕೊಂಡ ಅಂತ ಹೇಳುವಂತಾಗಿ ಬಿಡ್ತು.
ಆದರೆ ಅನಕೊಂಡಾಗಿಂತಲೂ ದೊಡ್ಡದಾದ ಹಾವುಗಳು ನಮ್ಮ ಜಗತ್ತಿನಲ್ಲಿ ಇತ್ತಾ ಅನ್ನೋದನ್ನ ಗಮನಿಸ್ತಾ ಹೋದ್ರೆ ನಮಗೆ ಕೊಲಂಬಿಯಾದ ಕಲ್ಲಿದ್ದಲು ಗಣಿಗಳಲ್ಲಿ ಸಿಕ್ಕ ಟಿಟನೋಬೋವಾ ಕಣ್ಣಿಗೆ ಬೀಳುತ್ತೆ. ಆ ಬಾರಿ ಗಾತ್ರದ ಹಾವು 42 ಅಡಿಗಳಷ್ಟು ಉದ್ದ ಇತ್ತು ಅಂತ ಸಂಶೋಧಕರು ಹೇಳ್ತಾರೆ. ಹೀಗಾಗಿ ಇಲ್ಲಿವರಗೂ ಈ ಜಗತ್ತಲ್ಲಿ ಕಂಡು ಬಂದಿರೋ ಅತಿ ಉದ್ದದ ಹಾವು ಅನ್ನೊ ಹೆಗ್ಗಳಿಕೆಗೆ ಟಿಟನೋಬೋವಾ ಪಾತ್ರ ಆಗಿದೆ. ಆದ್ರೆ ಈಗ ಆ ರೆಕಾರ್ಡ್ ಕೂಡಾ ಮುರಿದು ಬಿದ್ದಿದೆ!
ಭಾರತದಲ್ಲಿ ಜಗತ್ತಿನ ಅತಿ ದೊಡ್ಡ ಹಾವಿನ ಪಳೆಯುಳಿಕೆಗಳು ಪತ್ತೆಯಾಗಿವೆ..ಈ ಹಾವು ಕಡಿಮೆ ಅಂದ್ರು 50 ಅಡಿಗಳಷ್ಟು ಉದ್ದ ಇದೆ ಅಂತ ಹೇಳಲಾಗ್ತಿದೆ. ಹಾಗಾದರೆ ಆ ಹಾವು ಭಾರತದಲ್ಲಿ ಇದ್ದದ್ದಾದ್ರು ಯಾವ ಕಾಲದಲ್ಲಿ; ಈಗ ಅದು ಪತ್ತೆಯಾಗಿರೋದು ಎಲ್ಲಿ? ಈ ಬಗ್ಗೆ ವಿಜ್ಞಾನ ಜಗತ್ತು ಹೇಳ್ತಾ ಇರೋದಾದ್ರು ಏನು ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.