ವಿಮಾನಗಳೂ ಹಾರಾಡದ ಆ ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು..? STORY OF ‘NO FLY ZONES’

ಮಾನವ ಜಗತ್ತಿನ ಮಹಾ ಅದ್ಭುತಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳೋದು ವಿಮಾನಗಳು. ಸಹಸ್ರಾರು ಕಿಲೋಮೀಟರ್ಗಳಷ್ಟು ದೂರವನ್ನು ಕೆಲವೇ ಗಂಟೆಗಳಲ್ಲಿ ತಲುಪೋ ಈ ವಿಮಾನಗಳು ಇವತ್ತು ಜಗತ್ತನ್ನು ತುಂಬಾ ಹತ್ತಿರಕ್ಕೆ ತಂದು ಬಿಟ್ಟಿವೆ. ಇಂತಹ ವಿಮಾನಗಳು ಎಂತಹದ್ದೇ ಪರ್ವತಗಳನ್ನು ಕೂಡಾ ದಾಟುತ್ತವೆ. ಮಹಾಸಾಗರಗಳನ್ನು ಕ್ರಾಸ್ ಮಾಡುತ್ತವೆ. ಹೀಗಾಗಿ ಅವುಗಳ ಶಕ್ತಿಗೆ ತಲೆದೂಗದವರೇ ಇಲ್ಲ. ಹೀಗಿದ್ದರೂ ಕೂಡಾ ಕೆಲವೊಮ್ಮೆ ವಿಮಾನಗಳು ಹಾಗೂ ಅವುಗಳ ಪೈಲೆಟ್ಗಳು ತುಂಬಾನೇ ವಿಚಿತ್ರವಾಗಿ ವರ್ತಿಸ್ತಾರೆ. ನೇರವಾಗಿ ಹೋದರೆ ಕೆಲವೇ ನಿಮಿಷಗಳಲ್ಲಿ ಸೇರುವ ಜಾಗಗಳನ್ನು ಕೂಡಾ ಸುತ್ತಿ ಬಳಸಿ ಗಂಟೆಗಳ ಕಾಲ ಆಕಾಶದಲ್ಲೇ ರೌಂಡ್ ಹೊಡೆಸಿ ಕರಕೊಂಡು ಹೋಗುತ್ವೆ. ಯಾಕೆ ಹೀಗೆ ಅಂತ ಯೋಚನೆ ಮಾಡಿದಾಗ ಅಲ್ಲಿ ನಮಗೆ ಸಿಗೋ ಉತ್ತರ ನೋ ಫ್ಲೈ ಝೋನ್( NO FLY ZONE).
ಇಡೀ ಜಗತ್ತಲ್ಲಿ ವಿಮಾನಗಳು ಎಲ್ಲಿ ಬೇಕಾದರೂ ಹಾರಾಟ ಮಾಡುತ್ತವೆ. ನಮ್ಮ ಮೌಂಟ್ ಎವರೆಸ್ಟಿಗಿಂತಲೂ ಎತ್ತರವಾಗಿ ಹಾರಬಲ್ಲ ವಿಮಾನಗಳು ನಮ್ಮಲ್ಲಿವೆ. ಇನ್ನು ಆಕಾಶ ಯಾವಾಗಲೂ ಖಾಲಿ ಇರುತ್ತೆ. ಮೋಡ ಬಿಟ್ಟರೆ ಅಲ್ಲಿ ಏನೂ ಇರೋದಿಲ್ಲ. ವಿಮಾನಗಳೋ ಮೋಡಗಳನ್ನ ಕೂಡಾ ದಾಟಿ ಹಾರಾಡುತ್ತವೆ. ಹೀಗಿರೋವಾಗ ಈ ಲೋಹದ ಹಕ್ಕಿಗಳಿಗೆ ಆಕಾಶದಲ್ಲಿ ಅಡ್ಡಿ ಏನು ಅನ್ನೋ ಪ್ರಶ್ನೆ ನಮ್ಮನ್ನ ಕಾಡದೇ ಇರೋದಿಲ್ಲ. ಇದಕ್ಕೆ ಉತ್ತರವನ್ನ ಹುಡುಕಿದಾಗ ಜಗತ್ತಿನಲ್ಲಿ ಹಲವು ಪ್ರದೇಶಗಳಲ್ಲಿ ಈ ನೋ ಫ್ಲೈ ಝೊನ್ ಕಂಡು ಬರುತ್ತೆ.
ಈ ಪ್ರಪಂಚದಲ್ಲಿರುವ ಕೆಲವು ಪ್ರಮುಖ ನೋ ಫ್ಲೈ ಝೋನ್ ಗಳು ಯಾವುವು? ಅವುಗಳ ಪ್ರಾಮುಖ್ಯತೆ ಏನು ಅನ್ನೋ ಕುರಿತಾದ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.