ಮಾನವ ಜಗತ್ತಿನ ಮಹಾ ಅದ್ಭುತಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳೋದು ವಿಮಾನಗಳು. ಸಹಸ್ರಾರು ಕಿಲೋಮೀಟರ್ಗಳಷ್ಟು ದೂರವನ್ನು ಕೆಲವೇ ಗಂಟೆಗಳಲ್ಲಿ ತಲುಪೋ ಈ ವಿಮಾನಗಳು ಇವತ್ತು ಜಗತ್ತನ್ನು ತುಂಬಾ ಹತ್ತಿರಕ್ಕೆ ತಂದು ಬಿಟ್ಟಿವೆ. ಇಂತಹ ವಿಮಾನಗಳು ಎಂತಹದ್ದೇ ಪರ್ವತಗಳನ್ನು ಕೂಡಾ ದಾಟುತ್ತವೆ. ಮಹಾಸಾಗರಗಳನ್ನು ಕ್ರಾಸ್ ಮಾಡುತ್ತವೆ. ಹೀಗಾಗಿ ಅವುಗಳ ಶಕ್ತಿಗೆ ತಲೆದೂಗದವರೇ ಇಲ್ಲ. ಹೀಗಿದ್ದರೂ ಕೂಡಾ ಕೆಲವೊಮ್ಮೆ ವಿಮಾನಗಳು ಹಾಗೂ ಅವುಗಳ ಪೈಲೆಟ್ಗಳು ತುಂಬಾನೇ ವಿಚಿತ್ರವಾಗಿ ವರ್ತಿಸ್ತಾರೆ. ನೇರವಾಗಿ ಹೋದರೆ ಕೆಲವೇ ನಿಮಿಷಗಳಲ್ಲಿ ಸೇರುವ ಜಾಗಗಳನ್ನು ಕೂಡಾ ಸುತ್ತಿ ಬಳಸಿ ಗಂಟೆಗಳ ಕಾಲ ಆಕಾಶದಲ್ಲೇ ರೌಂಡ್ ಹೊಡೆಸಿ ...



