ರಸ್ತೆಗಳನ್ನು ದೇಶದ ನರನಾಡಿಗಳು ಅಂತ ಕರೆಯಲಾಗುತ್ತೆ. ಆದ್ರೆ ಅಂತಹ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿಗಳು ಅಥವಾ ಪಾಟ್ ಹೋಲ್ಗಳು ಸಾರ್ವಜನಿಕರ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತವೆ. ಅದು ಯಾವುದೇ ರಸ್ತೆ ಆಗಿರಬಹುದು, ಅಲ್ಲೊಂದು ಗುಂಡಿ ಬಿತ್ತು ಅಂದ್ರೆ ಅದನ್ನ ಗಮನಿಸದೇ ಹೋದ್ರೆ ಅಲ್ಲೊಂದಷ್ಟು ಸಾವು ನೋವು ಕಟ್ಟಿಟ್ಟ ಬುತ್ತಿ! ಈ ಪಾಟ್ ಹೋಲ್ಗಳ ಕಾರಣದಿಂದ 2022ರಲ್ಲಿ ಸರಿ ಸುಮಾರು 4446 ಅಫಘಾತಗಳು ಸಂಭವಿಸಿವೆ. ಅದರಲ್ಲಿ 1856 ಮಂದಿ ಸಾವನ್ನಪ್ಪಿದ್ರೆ, ಇನ್ನುಳಿದ ನಾಗರೀಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಕೇವಲ ಉದಾಹರಣೆ ಅಷ್ಟೆ! ಇಂತಹ ಅದೆಷ್ಟೊ ಘಟನೆಗಳು ಗೊತ್ತೂ ಆಗದಂತೆ ಉಳಿದು ಬಿಡುತ್ವೆ. ಹೀಗಾಗಿ ಭಾರತದಲ್ಲಿ ರಸ್ತೆ ಮೇಲಿನ ಗುಂಡಿಗಳು ಸಹಸ್ರಾರು ಮಂದಿಯ ಪ್ರಾಣವನ್ನು ಬಲಿ ಪಡೀತಿವೆ ಅನ್ನೋದು ಸ್ಪಷ್ಟ.
ಭಾರತ ಜಗತ್ತಿನಲ್ಲೇ ಅತಿ ದೊಡ್ಡ ರಸ್ತೆ ಸಂಪರ್ಕ ಜಾಲವನ್ನ ಹೊಂದಿರುವ ದೇಶ. ಆದರೆ ಭಾರತದಲ್ಲಿ ಪಾಟ್ ಹೋಲ್ಗಳ ಸಮಸ್ಯೆ ಹೆಚ್ಚು. ಸಾಕಷ್ಟು ಜನ ಈ ಪಾಟ್ ಹೋಲ್ಗಳಿಗೆ ಬಿದ್ದು ಪ್ರಾಣಗಳನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪಾಟ್ ಹೋಲ್ಗಳನ್ನ ಮುಚ್ಚಬೇಕು ಅಂದ್ರೆ ಅದು ಸಾಧ್ಯವಿಲ್ಲದ ಅನ್ನೋ ಮಾತುಗಳನ್ನ ಸರ್ಕಾರಿ ಅಧಿಕಾರಿಗಳೇ ಹೇಳ್ತಿದ್ದಾರೆ. ಯಾಕಂದ್ರೆ ಭಾರತದಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಾಟ್ ಹೋಲ್ಗಳಿವೆ.
ಹಾಗಾದರೆ ಈ ಪಾಟ್ ಹೋಲ್ಗಳಿಗೆ ಏನೂ ಮಾಡೋದಕ್ಕೆ ಸಾಧ್ಯವಿಲ್ವಾ? ಸರ್ಕಾರ ಅವುಗಳನ್ನು ಕಾಲಕಾಲಕ್ಕೆ ಮುಚ್ಚಿಸಬಹುದಲ್ವಾ ಅಂತ ಯೋಚಿಸ್ತಿರೋ ಹೊತ್ತಲ್ಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಹತ್ವದ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಅದು ಭಾರತದಲ್ಲಿನ ಹೆದ್ದಾರಿಗಳಲ್ಲಿ ಇನ್ನು ಮುಂದೆ ಗುಂಡಿ ಬೀಳೋಲ್ಲ ಅಂದಿದ್ದಾರೆ. ಹಾಗೇನಾದ್ರೂ ಆದ್ರೆ ರಸ್ತೆ ಮೇಲಿನ ಆ ಗುಂಡಿ ತಾನಾಗೇ ಮುಚ್ಚಿ ಬಿಡುತ್ತಾ? ಏನಿದು ವಿಶೇಷ ಕತೆ. ರಸ್ತೆಲೀ ಇದ್ದ ಗುಂಡಿ ತಾನಾಗೆ ಮುಚ್ಚೋದಕ್ಕೆ ಸಾಧ್ಯನಾ? ಅನ್ನೋ ಕುರಿತಾದ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.
ಭಾರತದಲ್ಲಿನ್ನು ಮ್ಯಾಜಿಕ್ ರೋಡ್ಸ್..!

What’s your reaction?
Love0
Sad0
Happy0
Sleepy0
Angry0
Dead0
Wink0




Leave a Reply