ರಸ್ತೆಗಳನ್ನು ದೇಶದ ನರನಾಡಿಗಳು ಅಂತ ಕರೆಯಲಾಗುತ್ತೆ. ಆದ್ರೆ ಅಂತಹ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿಗಳು ಅಥವಾ ಪಾಟ್ ಹೋಲ್ಗಳು ಸಾರ್ವಜನಿಕರ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತವೆ. ಅದು ಯಾವುದೇ ರಸ್ತೆ ಆಗಿರಬಹುದು, ಅಲ್ಲೊಂದು ಗುಂಡಿ ಬಿತ್ತು ಅಂದ್ರೆ ಅದನ್ನ ಗಮನಿಸದೇ ಹೋದ್ರೆ ಅಲ್ಲೊಂದಷ್ಟು ಸಾವು ನೋವು ಕಟ್ಟಿಟ್ಟ ಬುತ್ತಿ! ಈ ಪಾಟ್ ಹೋಲ್ಗಳ ಕಾರಣದಿಂದ 2022ರಲ್ಲಿ ಸರಿ ಸುಮಾರು 4446 ಅಫಘಾತಗಳು ಸಂಭವಿಸಿವೆ. ಅದರಲ್ಲಿ 1856 ಮಂದಿ ಸಾವನ್ನಪ್ಪಿದ್ರೆ, ಇನ್ನುಳಿದ ನಾಗರೀಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಕೇವಲ ಉದಾಹರಣೆ ಅಷ್ಟೆ! ಇಂತಹ ಅದೆಷ್ಟೊ ಘಟನೆಗಳು ಗೊತ್ತೂ ಆಗದಂತೆ ...



