ನಮ್ಮ ಪುರಾಣಗಳಲ್ಲಿ ಏಳು ನಗರಿಗಳನ್ನ ಅತ್ಯಂತ ಪುರಾತನ ನಗರಿಗಳನ್ನಾಗಿ ಗುರುತಿಸಲಾಗಿದೆ. “ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ| ಪುರೀ ಧ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ||” ಉತ್ತರಪ್ರದೇಶದಲ್ಲಿರೋ ಅಯೋಧ್ಯೆ, ಮಥುರಾ ಹಾಗೂ ಕಾಶಿ, ಉತ್ತರಾಕಾಂಡ್ನಲ್ಲಿರೋ ಹರಿದ್ವಾರ, ತಮಿಳುನಾಡಿನ ಕಾಂಚಿ , ಮಧ್ಯಪ್ರದೇಶದಲ್ಲಿರೋ ಅವಂತಿಕಾ ಅಂದ್ರೆ ಇಂದಿನ ಉಜ್ಜೈನಿ, ಗುಜರಾತ್ನ ದ್ವಾರಾವತಿ ಅಂದ್ರೆ ದ್ವಾರಕೆಗಳನ್ನ ಸಪ್ತ ಪುರಿಗಳು, ಸಪ್ತ ನಗರಿಗಳು ಅಂದ್ರೆ ಅತ್ಯಂತ ಪ್ರಮುಖವಾದ ಅತ್ಯಂತ ಹಳೆಯ ನಗರಗಳು ಅಂತ ಗುರುತಿಸಲಾಗುತ್ತೆ.
ಈ ಏಳೂ ನಗರಗಳು ಪುರಾಣಗಳಲ್ಲಿ ಮಾತ್ರವಲ್ಲದೇ ಐತಿಹಾಸಿಕವಾಗಿಯೂ ತನ್ನದೇ ಆದ ಮಹತ್ವವನ್ನ ಹೊಂದಿವೆ. ಪ್ರಸ್ತುತ ಈ ಸಪ್ತ ಪುರಿಗಳು ಎಲ್ಲಿವೆ ಹಾಗೂ ಇವುಗಳ ಪುರಾಣ ಇತಿಹಾಸಗಳು ಏನು ಹೇಳುತ್ವೆ ಅನ್ನೋ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.






Leave a Reply