ಹುಲಿ ಸಂರಕ್ಷಿತಾರಣ್ಯದಲ್ಲಿರೋ ಆ ಪ್ರಾಣಿಯ ರಕ್ಷಣೆಗೆ ಸಾವಿರ ಬಂದೂಕುಧಾರಿಗಳು..!

ಮಾನವರ ಬೇಟೆಯ ಹುಚ್ಚಿಗೆ ಅಪರೂಪದಲ್ಲಿ ಅಪರೂಪ ಅನ್ನಿಸಿಕೊಂಡಿರೋ ಅನೇಕ ವನ್ಯಜೀವ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ನೀಲಗಿರಿ ಥಾರ್ಗಳು, ಏಷಿಯಾಟಿಕ್ ಲಯನ್ಸ್, ಸ್ಲೆಂಡರ್ ಲೋರೀಸ್, ಸಿಂಹಬಾಲದ ಕೋತಿಗಳು, ಬೆಂಗಾಲ್ ಟೈಗರ್ಸ್ ಸೇರಿದಂತೆ ಹಲವು ಅಪೂರ್ವ ಜೀವಿಗಳು ಬೆರಳೆಣಿಕೆಯಷ್ಟೇ ಉಳಿದುಕೊಂಡಿವೆ. ಅಳಿದುಳಿದ ಈ ಸಂಕುಲವನ್ನು ಉಳಿಸಿಕೊಳ್ಳೋದಕ್ಕೆ ಸರ್ಕಾರ ನಾನಾ ಯೋಜನೆಯನ್ನ ಹಮ್ಮಿಕೊಂಡಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಲಯನ್, ಪ್ರಾಜೆಕ್ಟ್ ಕ್ರೊಕೊಡೈಲ್ ಹೀಗೆ ಕಾಲಕ್ಕನುಗುಣವಾಗಿ ನಾನಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಾ ಇದೆ. ಇಂತಹದ್ದೇ ಒಂದು ಅಳಿವಿನ ಅಂಚಿಗೆ ತಲುಪಿರುವ ಭಾರತೀಯ ಮೂಲದ ಅಪರೂಪದ ತಳಿಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಬಾಡಿಗಾರ್ಡ್ಗಳನ್ನ ನೇಮಕ ಮಾಡಿದೆ. ಇದು ವಿಚಿತ್ರ ಅನ್ನಿಸಿದ್ರೂ ಸತ್ಯ!
ಅಕ್ರಮ ಬೇಟೆಗಾರರಿಂದ ಅಪರೂಪದ ಆ ಪ್ರಾಣಿ ಸಂಕುಲವನ್ನ ರಕ್ಷಿಸೋದಿಕ್ಕಾಗಿ ಈಶಾನ್ಯದ ಆ ರಾಜ್ಯದಲ್ಲಿ ಅರಣ್ಯ ಇಲಾಖೆ ಒಂದು ಸಾವಿರದಷ್ಟು ಕಾವಲುಗಾರರನ್ನ ನೇಮಿಸಿ ಅವರ ಕೈಗೆ ಕೋವಿಗಳನ್ನ ನೀಡಿದೆ. ಅದೆಷ್ಟೋ ಬಾರಿ ತಾವು ಸಂರಕ್ಷಿಸ್ತಾ ಇರೋ ಪ್ರಾಣಿಗಳಿಂದಲೇ ದಾಳಿಗೆ ತುತ್ತಾದರೂ ಕೂಡಾ ಹಿಂಜರಿದೇ ನಿಷ್ಟೆಯಿಂದ ಅವುಗಳನ್ನ ಕಾಯೋ ಕೆಲಸವನ್ನ ಮುಂದುವರೆಸಿದ್ದಾರೆ. ಆ ಕಾಡಲ್ಲಿ ಸ್ವಯಂ ಅರಣ್ಯ ಇಲಾಖೆಯವರೇ ಒಣಗಿದ ಹುಲ್ಲುಗಳಿಗೆ ಬೆಂಕಿಯನ್ನ ಕೂಡಾ ಹಚ್ಚುತ್ತಾರೆ.
ಅದು ಇಂಡಿಯನ್ ಒನ್ ಹಾರ್ನ್ಡ್ ರೈನೋಸಾರ್ಸ್ ಅಂದ್ರೆ ಭಾರತೀಯ ಒಂಟಿಕೊಂಬಿನ ಘೇಂಡಾಮೃಗಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಅಭಯಾರಣ್ಯ. ಅದರ ಹೆಸರು ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯ. ಈಶಾನ್ಯ ಭಾರತ ಪ್ರಮುಖ ಅಭಯಾರಣ್ಯದಲ್ಲಿ ಒಂದು ಅನ್ನಿಸಿಕೊಂಡಿರೋ ಈ ಅಭಯಾರಣ್ಯ ಅಸ್ಸಾಂ ರಾಜ್ಯದಲ್ಲಿದೆ. ಕಾಜಿರಂಗ ಅಭಯಾರಣ್ಯ ಒಂದು ಹುಲಿ ಸಂರಕ್ಷಿತಾರಣ್ಯ ಆಗಿದ್ರೂ ಕೂಡಾ ಹೆಚ್ಚು ಪ್ರಸಿದ್ಧಿಯನ್ನ ಪಡೆದಿರೋದು ಒಂದು ಕೊಂಬಿನ ಘೇಂಡಾಮೃಗಗಳಿಗೆ.
ಇಲ್ಲಿ ಸ್ವಚ್ಚಂದವಾಗಿ ತಿರುಗಾಡ್ತಾ, ನೀರಸೆಲೆಯಲ್ಲಿ ಜಲಕ್ರೀಡೆಯಲ್ಲಿ ತೊಡಗಿಕೊಂಡಿರೋ ಘೇಂಡಾಮೃಗಗಳನ್ನ ಕಾಣೋದಿಕ್ಕೆ ಸಾಧ್ಯ. ಹೀಗಾಗಿಯೇ ಇದನ್ನ ಪಾರಡೈಸ್ ಆಫ್ ಇಂಡಿಯನ್ ಒನ್ ಹಾರ್ನ್ಡ್ ರೈನೋಸಾರ್ಸ್ ಅಂತ್ಲೂ ಕರೆಯಲಾಗುತ್ತೆ. ಪ್ರಪಂಚದಲ್ಲಿರೋ ಒಟ್ಟು ಗ್ರೇಟ್ಇಂಡಿಯನ್ ರೈನೋಸಾರ್ಸ್ ಪೈಕಿ ಮೂರನೇ ಎರಡರಷ್ಟು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿವೆ.
ಹಾಗಾದ್ರೆ ಸಾಮಾನ್ಯ ಅಭಯಾರಣ್ಯಗಳಿಗಿಂತ ವಿಭಿನ್ನ ಅನ್ನಿಸಿಕೊಂಡಿರೋ ಈ ಶತಾಯುಷಿ ಅಭಯಾರಣ್ಯ ಹಾಗೂ ಇಲ್ಲಿ ಕಂಡುಬರುವ ಭಾರತ ಮೂಲದ ಆ ಅಪೂರ್ವ ಪ್ರಾಣಿ ತಳಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.