ಇತ್ತೀಚೆಗೆ ಮಲೆಯಾಳಂ ಸಿನಿಮಾ ತುಂಬಾನೇ ಸದ್ದು ಮಾಡ್ತಿದೆ. ದಶಕಗಳ ಹಿಂದೆ ಪೋಲಿ ಸಿನಿಮಾಗಳಿಗೆ ಫೇಮಸ್ ಆಗಿದ್ದ ಮಲಯಾಳಂ ಚಿತ್ರ ರಂಗ ಇಡೀ ಇಡೀ ದೇಶವನ್ನ ತನ್ನತ್ತ ತಿರುಗಿ ನೋಡುವಂತೆ ಮಾಡ್ತಿದೆ. ಸಾಕಷ್ಟು ಅತ್ಯುತ್ತಮ ಚಿತ್ರಗಳು ತೆರೆ ಕಾಣ್ತಿವೆ. ಅಷ್ಟೇ ಅಲ್ಲದೇ ಈ ವರ್ಷ ಮಲಯಾಳಂ ಚಿತ್ರವೊಂದು ಸಾವಿರ ಕೋಟಿ ಕ್ಲಬ್ಬನ್ನ ಸೇರಿದೆ. ಮತ್ತೆ ಮಲೆಯಾಳಂ ಚಿತ್ರರಂಗ ಸುದ್ದಿಯಾಗಲು ಕಾರಣವಾಗಿದ್ದು ಇತ್ತೀಚೆಗೆ ‘ಮಂಜುಮೆಲ್ ಬಾಯ್ಸ್’ ಅನ್ನೋ ಸಿನಿಮಾ!
ಈ ಚಿತ್ರದಲ್ಲಿ ನೈಸರ್ಗಿಕ ಗುಹೆಯೊಂದರಲ್ಲಿ ಕಂದಕಕ್ಕೆ ಬಿದ್ದ ಸ್ನೇಹಿತನನ್ನ ಸಾವಿನದ ದವಡೆಯಿಂದ ಪಾರು ಮಾಡೋದ್ರ ಬಗ್ಗೆ ತೋರಸಲಾಗಿದೆ. ಆ ಚಿತ್ರ ನೈಜ ಘಟನೆಯನ್ನ ಆಧರಿಸಿ ತೆಗೆದಿದ್ದು, ಕೊಡೈಕೆನಾಲ್ನ ರುದ್ರ ರಮಣೀಯತೆಯನ್ನ ಅದು ಸಾರಿ ಹೇಳ್ತಾ ಇದೆ. ಯಾಕಂದರೆ ಆ ಚಿತ್ರ ದಲ್ಲಿ ಬರುವ ಗುಣ ಗುಹೆಗಳು, ತನ್ನ ರೌದ್ರತೆಗೆ, ನಿಗೂಢತೆಗೆ ಹೆಸ್ರುವಾಸಿ ಯಾಗಿದೆ. ಅಂತಹ ಗುಹೆಯಲ್ಲಿ ನಡೆದ ಕಥೆಹಂದರವನ್ನಿಟ್ಟುಕೊಂಡು ಮಲಯಾಳಂನ ನಿರ್ದೇಶಕ ಅತ್ಯುತ್ತಮ ಚಿತ್ರವನ್ನ ತೆಗೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಈ ಚಲನಚಿತ್ರದಿಂದಾಗಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ಗುಣ ಗುಹೆಗಳು ಒಂದು ನಿಗೂಢ ಪ್ರದೇಶವಾಗಿ ಕುಖ್ಯಾತಿಯನ್ನೂ ಕೂಡಾ ಹೊಂದಿದೆ!
ಭಾರತದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿರುವ ಈ ಕೊಡೈಕೆನಾಲ್, ತನ್ನ ರುದ್ರರಮಣೀಯ ಪ್ರಕೃತಿಗಾಗಿ ಹೆಸರುವಾಸಿ. ಇಲ್ಲಿನ ಪ್ರಕೃತಿ ಅನೇಕ ಪ್ರಾಕೃತಿಕ ವಿಸ್ಮಯಗಳನ್ನು, ನಿಗೂಢ, ಭಯಾನಕ ಸ್ಥಳಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಆ ಪೈಕಿ ಗುಣ ಕೇವ್ಸ್ ಕೂಡಾ ಒಂದು. ಇದನ್ನು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿಯೂ ಆಗಿರುವ ಈ ಗುಹೆಗಳನ್ನು ಬ್ರಿಟಿಷರು ‘ಡೆವಿಲ್ಸ್ ಕಿಚನ್’ ಅಂತಲೇ ಗುರುತಿಸಿದ್ದರು! ಈ ಗುಹೆಗಳ ಬಳಿಯ ಕಂದಕ ಇದುವರೆಗೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡಿದೆ!
ಈ ಗುಣ ಕೇವ್ ಬಗ್ಗೆ ಹಾಗೂ ಯಾವುದಾದ್ರು ಒಂದು ಪ್ರವಾಸಿ ತಾಣಕ್ಕೆ ಹೋದಾಗ ನಾವು ಹೇಗಿರಬೇಕು ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.
ಪಕೃತಿಯ ಮಡಿಲಿನಲ್ಲೊಂದು ‘ಡೆವಿಲ್ಸ್ ಕಿಚನ್’..!

What’s your reaction?
Love0
Sad0
Happy0
Sleepy0
Angry0
Dead0
Wink0





Leave a Reply