ಇತ್ತೀಚೆಗೆ ಮಲೆಯಾಳಂ ಸಿನಿಮಾ ತುಂಬಾನೇ ಸದ್ದು ಮಾಡ್ತಿದೆ. ದಶಕಗಳ ಹಿಂದೆ ಪೋಲಿ ಸಿನಿಮಾಗಳಿಗೆ ಫೇಮಸ್ ಆಗಿದ್ದ ಮಲಯಾಳಂ ಚಿತ್ರ ರಂಗ ಇಡೀ ಇಡೀ ದೇಶವನ್ನ ತನ್ನತ್ತ ತಿರುಗಿ ನೋಡುವಂತೆ ಮಾಡ್ತಿದೆ. ಸಾಕಷ್ಟು ಅತ್ಯುತ್ತಮ ಚಿತ್ರಗಳು ತೆರೆ ಕಾಣ್ತಿವೆ. ಅಷ್ಟೇ ಅಲ್ಲದೇ ಈ ವರ್ಷ ಮಲಯಾಳಂ ಚಿತ್ರವೊಂದು ಸಾವಿರ ಕೋಟಿ ಕ್ಲಬ್ಬನ್ನ ಸೇರಿದೆ. ಮತ್ತೆ ಮಲೆಯಾಳಂ ಚಿತ್ರರಂಗ ಸುದ್ದಿಯಾಗಲು ಕಾರಣವಾಗಿದ್ದು ಇತ್ತೀಚೆಗೆ ‘ಮಂಜುಮೆಲ್ ಬಾಯ್ಸ್’ ಅನ್ನೋ ಸಿನಿಮಾ! ಈ ಚಿತ್ರದಲ್ಲಿ ನೈಸರ್ಗಿಕ ಗುಹೆಯೊಂದರಲ್ಲಿ ಕಂದಕಕ್ಕೆ ಬಿದ್ದ ಸ್ನೇಹಿತನನ್ನ ಸಾವಿನದ ದವಡೆಯಿಂದ ಪಾರು ಮಾಡೋದ್ರ ಬಗ್ಗೆ ತೋರಸಲಾಗಿದೆ. ...



