ಮೊದಲ ಚುನಾವಣೆಯಿಂದಲೇ ಅಸ್ಥಿತ್ವರದಲ್ಲಿರೊ ಲೋಕಸಭಾ ಕ್ಷೇತ್ರಗಳ ಪೈಕಿ ಬಿಜಾಪುರ ಅಥವಾ ವಿಜಯಪುರ ಕೂಡಾ ಒಂದು. ಈ ಲೋಕಸಭಾ ಕ್ಷೇತ್ರ ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ಬಿಜಾಪಪುರ ಸಿಟಿ, ನಾಗಠಾಣ, ಇಂಢಿ, ಸಿಂಧಗಿ ಅನ್ನೋ 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಈ ಪೈಕಿ 6ರಲ್ಲಿ ಕಾಂಗ್ರೆಸ್ ಇದ್ರೆ, ಜೆಡಿಎಸ್ ಹಾಗೂ ಬಿಜೆಪಿ ತಲಾ ಒಂದು ಕ್ಷೇತ್ರವನ್ನ ಹಂಚಿಕೊಂಡಿವೆ. ಇಲ್ಲಿ ಪ್ರಸುತ ಬಿಜೆಪಿಯ ರಮೇಶ್ ಜಿಗಜಿಣಗಿ ಸಂಸದರಾಗಿದ್ದಾರೆ. 1999ರಿಂದಲೂ ಇಲ್ಲಿ ಬಿಜೆಪಿ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. 1999 ಹಾಗೂ 2004 ಚುನಾವಣೆಗಳಲ್ಲಿ ಬಸವನಗೌಡ ಪಾಟೀಲ್ ...

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗಮನವನ್ನ ಸೆಳೀತಿರೋದು ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕಗಳು. ಇಲ್ಲಿನ ಎಲ್ಲ ಕ್ಷೇತ್ರದಲ್ಲೂ ಕೂಡಾ ಈ ಬಾರಿ ತುರುಸಿನ ಸ್ಪರ್ಧೆ ಕಂಡು ಬರ್ತಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ನೇರ ಹಣಾಹಣಿ. ಹೀಗಾಗಿನೇ ಘಟಾನುಘಟಿ ನಾಯಕರ ಭವಿಷ್ಯ ಇಲ್ಲಿ ನಿರ್ಧಾರ ಆಗಲಿದೆ. ಈ ಭಾಗದಲ್ಲಿ ತೀವ್ರ ಕುತೂಹಲವನ್ನ ಉಂಟುಮಾಡಿರೋ ಕ್ಷೇತ್ರಗಳು ಸಾಕಷ್ಟಿವೆ. ಆದ್ರೆ ಸ್ವಲ್ಪ ವಿಶೇಷವಾಗಿ ಕಾಣೋದು ರಾಯಚೂರು ಲೋಕಸಭಾ ಕ್ಷೇತ್ರ. ಯಾಕಂದ್ರೆ ಈ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳಿಗೆ ಮತದಾರೊಂದಿಗಿನ ಭಾಂದವ್ಯ ಅಷ್ಟಕ್ಕಷ್ಟೇ. ಕುಟುಂಬ ...

ಧಾರವಾಡ ಲೋಕಸಭಾ ಕ್ಷೇತ್ರ ಸಧ್ಯ ಬಿಜೆಪಿ ಹಿಡಿತದಲ್ಲಿದ್ದರೂ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಪೈಪೋಟಿಯಿದೆ. ಇದು ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ ಧಾರವಾಡ ಪೂರ್ವ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಹುಬ್ಬಳ್ಳಿ ಧಾರವಾಡ ಕೇಂದ್ರ, ಕಲಘಟಿಕಿ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತೆ. ಈ ಪೈಕಿ ನಾಲ್ಕರಲ್ಲಿ ಬಿಜೆಪಿ ಹಾಗೇ ನಾಲ್ಕರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿ ಬಿಜೆಪಿಯಿಂದ ಹಾಲಿ ಸಂಸದ ಪ್ರಹ್ಲಾದ್ ...

ಗಣಿನಾಡಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಬಳ್ಳಾರಿಯಲ್ಲಿ ರಾಮುಲು ವರ್ಸಸ್ ತುಕಾರಂ ಅಖಾಡ ಸಿದ್ದ ಆಗಿದೆ. ಗಣಿಯಿಂದಾಗಿ ಅಲ್ಲಿನ ಗಣಿ ಧಣಿಗಳಿಂದಾಗಿ ಈ ಕ್ಷೇತ್ರ ಸಾಕಷ್ಟು ಪ್ರಖ್ಯಾತಿ ಹಾಗೂ ಕುಖ್ಯಾತಿಯನ್ನ ಗಳಿಸಿಕೊಂಡಿತ್ತು. 1999ರಲ್ಲಿ ಇಲ್ಲಿಂದ ಸೋನಿಯಾಗಾಂಧಿ ಸ್ಪರ್ಧೆ ಮಾಡಿದಾಗ ಇಡೀ ದೇಶದ ಕಣ್ಣು ಬಳ್ಳಾರಿ ಮೇಲೆ ಬಿದ್ದಿತ್ತು. ಅಂತಹ ಬಳ್ಳಾರಿಯಲ್ಲಿ ಈಗ ಕಾಂಗ್ರೆಸ್ ಹಾಗೂ ಬಿಜೆಪಿಗಳು ಸಮಬಲದ ಹೋರಾಟವನ್ನ ನಡೆಸುವ ಉತ್ಸಾಹವನ್ನ ತೋರುತ್ತಾ ಇವೆ. ಈ ಬಾರಿ ಏನಾದ್ರೂ ಮಾಡಿ ಅತಿ ಹೆಚ್ಚು ಕ್ಷೇತ್ರಗಳನ್ನ ಗೆಲ್ಲಬೇಕು ಅಂತ ಹೊರಟಿರೋ ಎರಡು ಪಕ್ಷಗಳು ಬಳ್ಳಾರಿ ಮೇಲೂ ...

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನ ನೋಡೋದಾದ್ರೆ ಸ್ಥಳಿಯ ನಾಯಕರ ವಿರೋಧವನ್ನ ಲೆಕ್ಕಿಸದೇ ಇಲ್ಲಿ ಹಾಲಿ ಸಂಸದ ಭಗವಂತ್‌ ಖೂಬಾ ಅವರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್‌ ನೀಡಿದೆ. ಭಗವಂತ್ ಖೂಬಾ, ಬಾಬಾ ರಾಮ್ ದೇವ್ ಹಾಗೂ RSS ಮೂಲಕ ಟಿಕೆಟ್ ಪಡೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಮಾತುಗಳಿವೆ. ಅವರು ಮೊದಲ ಬಾರಿ ಸ್ಪರ್ಧೆ ಮಾಡಿದಾಗಲೂ ಕೂಡಾ ಅವರ ಬೆನ್ನಿಗೆ ಬಾಬಾ ರಾಮ್ ದೇವ್ ನಿಂತಿದ್ರು. ಹೀಗಾಗಿ ಈ ಬಾರಿ ಕೂಡಾ ಅವರಿಗೆ ಟಕೆಟ್ ಸಿಕ್ಕಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಏನಾದ್ರೂ ಮಾಡಿ ಭಗವಂತ್ ಖೂಬಾರನ್ನ ಕಟ್ಟಿ ...

ಬಿಜೆಪಿ ತೆಕ್ಕೆಯಲ್ಲಿರುವ ಮತ್ತೊಂದು ಲೋಕಸಭಾ ಕ್ಷೇತ್ರ ಬಾಗಲಕೋಟೆ. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನ ನೀಡಿದ ಹಾಗೂ 4 ಸಿಎಂಗಳಿಗೆ ರಾಜಕೀಯ ನೆಲೆ ಕಲ್ಪಿಸಿದ ಹೆಗ್ಗಳಿಕೆ ಬಾಗಲಕೋಟೆ ಜಿಲ್ಲೆಗಿದೆ. ಮೊದಲೆನೆಯದ್ದಾಗಿ ಎಸ್. ನಿಜಲಿಂಗಪ್ಪ ಅವರು ಇಲ್ಲಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಮುಖ್ಯಮಂತ್ರಿ ಕೂಡಾ ಆಗಿದ್ದರು. ಅವರ ಬಳಿಕ ವೀರೇಂದ್ರ ಪಾಟೀಲ್ ಅವರು 1980ರಲ್ಲಿ ಸ್ವಕ್ಷೇತ್ರ ಕಲಬುರಗಿ ಬಿಟ್ಟು ಬಾಗಲಕೋಟೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇದಾದ ನಂತರ ಕಣಕ್ಕೆ ಇಳಿದವರು ರಾಮಕೃಷ್ಣ ಹೆಗಡೆ. ಇಲ್ಲಿನ ಕೆಲವು ಆತ್ಮೀಯರ ಮಾತಿಗೆ ಕಟ್ಟು ಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸಿದ್ದು ...

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಮೊದಲಿನಿಂದಲೂ ಸವಾಲಾಗಿ ನಿಂತಿರೋದು ದಾವಣಗೆರೆ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ಕಾಂಗ್ರೆಸ್ಗೆ ಕಬ್ಬಿಣದ ಕಡಲೆಯಂತೆ. ಯಾಕೆಂದರೆ 1996ರಿಂದ ಒಂದು ಸಾರಿ ಜಯಿಸಿದ್ದು ಬಿಟ್ಟರೆ ಸತತ 25 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಇನ್ನು 2004ರಿಂದ ಈ ಕ್ಷೇತ್ರದಲ್ಲಿನ ನಾಲ್ಕು ಬಾರಿ ಸತತವಾಗಿ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಗೆದ್ದಿದ್ದಾರೆ. ಆದರೆ ಈ ಬಾರಿ ಬಿಜೆಪಿಯ ಒಳಜಗಳದಿಂದಾಗಿ ಸಿದ್ದೇಶ್ವರ್ಗೆ ಟಿಕೆಟ್ ಕೈತಪ್ಪಬಹುದು ಎನ್ನಲಾಗಿತ್ತು. ಅದೇ ರೀತಿ ಅವ್ರಿಗೆ ಟಿಕೆಟ್ ತಪ್ಪಿದೆ. ಆದ್ರೆ ಸಿದ್ದೇಶ್ವರ್ ತಮ್ಮ ಟಿಕೆಟ್ ಅನ್ನು ತಮ್ಮ ಪತ್ನಿ ಗಾಯತ್ರಿ ...

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2014 ಹಾಗೂ 2019ರ ಚುನಾವಣೆಗಳಲ್ಲಿ ಕರಡಿ ಸಂಗಣ್ಣ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಎರಡೂ ಚುನಾವಣೆಗಳಲ್ಲಿ ಕರಡಿ ಸಂಗಣ್ಣರಿಗೆ 30 ಸಾವಿರ ಮತಗಳ ಆಸುಪಾಸಿನ ಅಂತರದಿಂದ ಗೆಲುವು ದಕ್ಕಿತ್ತು. ಈ ಬಾರಿಯೂ ಅವ್ರಿಗೆ ಟಿಕೆಟ್‌ ಕೊಡ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದರು. ಆದರೆ ಬಿಜೆಪಿ ಸಂಗಣ್ಣ ಅವರ ಬದಲಿಗೆ ಕುಷ್ಟಗಿ ಮಾಜಿ ಶಾಸಕ ಕೆ. ಶರಣಪ್ಪ ಪುತ್ರ, ವೃತ್ತಿಯಿಂದ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರನ್ನ ಕಣಕ್ಕಿಳಿಸಿದೆ. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ...

ರಾಜ್ಯದಲ್ಲಿ ಎರಡನೆ ಹಂತದಲ್ಲಿ ನಡೀತಿರೋ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಭರಿತ ಕ್ಷೇತ್ರಗಳಿವೆ. ಒಂದೆರಡು ಲೋಕಸಭಾ ಕ್ಷೇತ್ರಗಳನ್ನ ಹೊರತು ಪಡಿಸಿದ್ರೆ ಇನ್ನು ಮಿಕ್ಕ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಕಣ ಏರ್ಪಟ್ಟಿದೆ. ಅದರಲ್ಲೂ ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣವನ್ನಿಟ್ಟುಕೊಂಡು, ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡ್ತಿದ್ದಾರೆ. ಈ ಮೂಲಕ ಶಿವಮೊಗ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಹಾಗೂ ಯಡಿಯೂರಪ್ಪನವ್ರ ದೊಡ್ಡ ಮಗ ಬಿವೈ ರಾಘವೇಂದ್ರ ಅವ್ರ ಗೆಲುವಿಗೆ ತೊಡಕಾಗುವ ಉಮೇದಿನಲ್ಲಿದ್ದಾರೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್‌ ಉದಾಸಿ ಅವ್ರೇ ನಿರಂತರವಾಗಿ ಗೆದ್ದು ...

ಮಾಜಿ ಮುಖ್ಯಮಂತ್ರಿಗಳ ಕುಟುಂಬ ರಾಜಕಾರಣದಿಂದಾಗಿ ಸದಾ ಗಮನ ಸೆಳೆಯೋ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರ. ಈ ಬಾರಿ ಈ ಲೋಕಸಭಾ ಕ್ಷೇತ್ರ ಬಿ. ಎಸ್. ಯಡಿಯೂರಪ್ಪ ವರ್ಸಸ್ ಕೆ. ಎಸ್. ಈಶ್ವರಪ್ಪ ಅನ್ನೋ ಕಾರಣದಿಂದಾಗಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಸಮಾಜವಾದಿ ಸಿದ್ದಾಂಥದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯವನ್ನ ಸಾಧಿಸಿತ್ತು. ಆದರೆ ಕಳೆದ ಎರಡು ದಶಕಗಳಿಂದ ಇದು ಬಿಜೆಪಿ ಭದ್ರಕೋಟೆ ಅನ್ನಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಸಾಗರ ವಿಧಾನಸಭಾ ಕ್ಷೇತ್ರಗಳ ಜೊತೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ...