ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗಳು ನಡೆಯಲಿರುವ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲಕ್ಕೆ ಕಾರಣವಾಗ್ತಿರೋ ಕ್ಷೇತ್ರಗಳ ಪೈಕಿ ಬೆಳಗಾವಿ ಕೂಡಾ ಒಂದು. ಬೆಳಗಾವಿ ಅಂದ ಕೂಡಲೇ ನೆನೆಪಾಗೊದು ಗಡಿ ಗಲಾಟೆ. ಕನ್ನಡಿಗ ಹಾಗೂ ಮರಾಠಿಗ ಅನ್ನೋ ಸಂಘರ್ಷ ಅಲ್ಲಿ ಇದ್ದೇ ಇರುತ್ತೆ. ಆದ್ರೆ ಅಲ್ಲಿನ ರಾಜಕಾರಣಿಗಳು ಮಾತ್ರ ಈ ಗಲಾಟೆಯನ್ನೇ ಬಂಡವಾಳ ಮಾಡ್ಕೊಂಡು ಗೆದ್ದು ಬರ್ತಿದ್ದಾರೆ. ಬೆಂಗಳೂರಿನ ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರೋದು ಬೆಳಗಾವಿ ಜಿಲ್ಲೆ. ಹಾಗಾಗಿನೇ ಈ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಬೆಳಗಾವಿ ಹಾಗು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಸೇರಿರೋದಲ್ಲದೇ ...
ಕುಟುಂಬ ರಾಜಕಾರಣದಿಂದಾಗಿ ಗಮನಸೆಳೆದಿರೋ ಲೋಕಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಕೂಡಾ ಒಂದು. ಇಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ನಾ ಸಾಹೇಬ್ ಜೊಲ್ಲೆ ಕಣದಲ್ಲಿದ್ರೆ, ಕಾಂಗ್ರೆಸ್ನಿಂದ ಸಚಿವ ಸತೀಶ್ ಜಾರಕಿಹೊಳಿ ಅವ್ರ ಪುತ್ರಿ ಪ್ರಿಯಾಂಕರನ್ನ ಕಣಕ್ಕಿಳಿಸಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಟ ಏರ್ಪಡ್ತಾ ಇದ್ದು ಗೆಲವು ಯಾರ ಕೊರಳಿಗೆ ಅನ್ನೋ ಕುತೂಹಲ ಹೆಚ್ಚಾಗ್ತಾ ಇದೆ. ಬೆಳಗಾವಿಯಲ್ಲಿ ಲಿಂಗಾಯತ ವರ್ಸಸ್ ಲಿಂಗಾಯತ ಆದ್ರೆ ಇಲ್ಲಿ ಜಾರಕಿಹೊಳಿ ವರ್ಸಸ್ ಲಿಂಗಾಯತ ಅನ್ನೋ ಪರಿಸ್ಥಿತಿ ಇದೆ. ಈ ಕ್ಷೇತ್ರದ ವ್ಯಾಪ್ತಿಗೆ ಅಥಣಿ, ಚಿಕ್ಕೋಡಿ ಸದಗಲ, ನಿಪ್ಪಾಣಿ, ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷರ ಸೋಲಿನ ಕಾರಣದಿಂದಾಗಿ ಗಮನೆ ಸೆಳೆದಿದ್ದ ಕ್ಷೇತ್ರ ಕಲಬುರಗಿ. ಕಾಂಗ್ರೆಸ್ನ ಭದ್ರ ಕೋಟೆ ಅನ್ನಿಸಿಕೊಂಡಿದ್ದ ಈ ಕ್ಷೇತ್ರವನ್ನು 2019ರಲ್ಲಿ ಬಿಜೆಪಿ ಕಿತ್ತುಕೊಳ್ತು. ಅವತ್ತು ಬಿಜೆಪಿ, ಮಲ್ಲಿಕಾರ್ಜು ಖರ್ಗೆ ಅವ್ರ ವಿರುದ್ಧ ಕಾಂಗ್ರೆಸ್ನಲ್ಲಿ ಶಾಸಕರಾಗಿದ್ದು ಬಿಜೆಪಿಗೆ ಬಂದಿದ್ದ ರಮೇಶ್ ಜಾದವ್ ಅವರನ್ನು ಕಣಕ್ಕಿಳಿಸಿ ಚುನಾವಣೆಯಲ್ಲಿ ಖರ್ಗೆ ಅವ್ರನ್ನ ಸೋಲಿಸಿತ್ತು. ಈಗ ಕಾಂಗ್ರೆಸ್ ಪಕ್ಷ ಮತ್ತೆ ಕಲಬುರಗಿ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳೋದಕ್ಕೆ ನಿರ್ಧಾರ ಮಾಡಿದಂತಿದೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವ್ರಿಗೆ ಟಿಕೆಟ್ ಕೊಟ್ಟಿದೆ. ಇಲ್ಲಿ ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಅಂತರದಲ್ಲಿ ಗೆದ್ದಿದ್ದ ಕ್ಷೇತ್ರಗಳ ಪೈಕಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಕೂಡಾ ಒಂದು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅನಂತ್ ಕುಮಾರ್ ಹೆಗಡೆ ಸುಮಾರು 4,79,649 ಮತಗಳ ಅಂತರದಿಂದ ಗೆದ್ದು, ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಆ ಮೂಲಕ ಮತ್ತೊಮ್ಮೆ ಬಿಜೆಪಿ, ಇದು ತನ್ನ ಭದ್ರಕೋಟೆ ಅನ್ನೋದನ್ನೂ ನಿರೂಪಿಸಿತ್ತು. ಈ ಬಾರಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಬದಲಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಕಣದಲ್ಲಿದ್ದಾರೆ. ಸತತವಾಗಿ ರಾಜ್ಯವಿಧಾನಸಭೆಗೆ ಅವರನ್ನ ಆರಿಸಿ ...
ಬಿಜೆಪಿಯ ಅಚ್ಚರಿಯ ನಡೆಗೆ ಕಾರಣವಾಗಿರುವ ಕ್ಷೇತ್ರಗಳ ಪೈಕಿ ಒಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರ. ಸದ್ಯಕ್ಕೆ ಇಲ್ಲಿ ಹಾಲಿ ಸಂಸದರಾಗಿದ್ದಿದ್ದು ಪ್ರತಾಪ್ ಸಿಂಹ. ಆದರೆ ಈ ಬಾರಿ ಬಿಜೆಪಿ ಅವ್ರಿಗೆ ಟಿಕೆಟ್ ನಿರಾಕರಿಸಿದೆ. ಪ್ರತಾಪ್ ಸಿಂಹ ಬದಲಾಗಿ ಅಲ್ಲಿ ಯದುವೀರ್ ಒಡೆಯರ್ ಅವ್ರಿಗೆ ಟಿಕೆಟ್ ನೀಡಲಾಗಿದೆ. ಪ್ರತಾಪ್ ಸಿಂಹ ಕೂಡಾ ಪಕ್ಷ ನಿಷ್ಟರಂತೆ ಯದುವೀರ್ ಒಡೆಯರ್ ಪರವಾಗಿ ಕೆಲಸ ಮಾಡ್ತಿದ್ದಾರೆ. ಯದುವೀರ್ ಅವ್ರು ರಾಜ ಮನೆತನಕ್ಕೆ ಸೇರಿದವರು ಅನ್ನೋ ಹೆಗ್ಗಳಿಕೆಯ ಜೊತೆಗೆ ಉತ್ತಮ ಹಾಗೂ ಸರಳ ವ್ಯಕ್ತಿತ್ವದವ್ರು ಅನ್ನೋ ಬಲ ಅವರಿಗಿದೆ. ಮೈಸೂರು ಕೊಡಗು ...
ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳ ಪೈಕಿ ಒಂದು. ಇಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಇನ್ನು ರಂಗೇರುತ್ತಾ ಇದೆ. ಅದಕ್ಕೆ ಕಾರಣವಾಗಿರುವುದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸ್ಪರ್ಧೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಸಿಎಂ ಎದುರು ಕಾಂಗ್ರೆಸ್ ಪಕ್ಷ ಸ್ಟಾರ್ ಚಂದ್ರು ಅನ್ನೋ ಉದ್ಯಮಿಯನ್ನ ಕಣಕ್ಕಿಳಿಸಿದೆ. ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತ ಪಕ್ಷೇತರರಾಗಿ ಕಣಕ್ಕಿಳಿದರೆ ಹೆಚ್.ಡಿ.ಕೆ. ಗೆಲುವು ಕಷ್ಟವಾಗಬಹುದು ಅನ್ನೋ ಮಾತುಗಳು ಕೇಳಿಬರುತ್ತಾ ಇತ್ತು. ಆದ್ರೆ ಸುಮಲತಾ ಸ್ಪರ್ಧೆಯಿಂದ ಹಿಂದೆ ಸರಿದು, ಬಿಜೆಪಿಗೆ ಬೆಂಬಲವನ್ನು ...
ತುಮಕೂರು ಲೋಕಸಭಾ ಕ್ಷೇತ್ರ ಸದಾ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಗಮನ ಸೆಳೆಯುತ್ತೆ. ಇದು ಚಿಕ್ಕನಾಯಕನ ಹಳ್ಳಿ ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು ನಗರ ಹಾಗೂ ಗ್ರಾಮಾಂತರ ಕೊರಟಗೆರೆ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳನ್ನ ಹೊಂದಿದೆ ಈ ಬಾರಿ ಇಲ್ಲಿ ಬಿಜೆಪಿಯಿಂದ ಮಾಜಿ ಸಚಿವ ವಿ ಸೋಮಣ್ಣ ಕಣದಲ್ಲಿದ್ರೆ, ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡರನ್ನ ಕಣಕ್ಕಿಳಿಸಿದೆ. ಹಾಗೆ ನೋಡಿದ್ರೆ ಕ್ಷೇತ್ರದಲ್ಲಿ ಸೋಮಣ್ಣ ಮೇಲ್ನೊಟಕ್ಕೆ ಗೆಲ್ಲುವ ಕುದುರೆ ಅನ್ನಿಸಿಕೊಳ್ತಾರೆ. ರಾಜಕಾರಣದಲ್ಲಿ ಬಹಳಷ್ಟು ಪಳಗಿರುವ ಸೋಮಣ್ಣಗೆ ಸ್ಪಪಕ್ಷೀಯರೇ ಕಾಟ ಕೊಡದೇ ಇದ್ರೆ ಅವ್ರ ಗೆಲುವು ...
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸಧ್ಯದ ಮಟ್ಟಿಗೆ ಬಿಜೆಪಿ ಕೈಯಲ್ಲಿ ಇದೆಯಾದ್ರೂ ಕಾಂಗ್ರೆಸ್ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದೆ. ಎಸ್ಸಿ ಮೀಸಲು ಕ್ಷೇತ್ರವಾಗಿರೋ ಈ ಲೋಕಸಭಾ ಕ್ಷೇತ್ರ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಸಿರಾ ಹಾಗೂ ಪಾವಗಡ ಅನ್ನೋ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿದ್ದು ಈ ಪೈಕಿ 7ರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ರೆ ಹೊಳಲ್ಕೆರೆ ಒಂದು ಮಾತ್ರ ಬಿಜೆಪಿ ಹಿಡಿತದಲ್ಲಿದೆ. ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಇಲ್ಲಿನ ಸಂಸದರಾಗಿದ್ರು, ಆದ್ರೆ ಬಿಜೆಪಿ ಹೈ ಕಮಾಂಡ್ ಈ ಬಾರಿ ನಾರಾಯಣ ಸ್ವಾಮಿ ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶವನ್ನ ನೀಡಿದ ಕ್ಷೇತ್ರಗಳ ಪೈಕಿನ ಚಾಮರಾಜ ನಗರ ಲೋಕಸಭಾ ಕ್ಷೇತ್ರ ಕೂಡಾ ಒಂದು. ಇಲ್ಲಿ ಈ ಬಾರಿ ಬಿಜೆಪಿಯಿಂದ ಮಾಜಿ ಶಾಸಕ ಬಾಲರಾಜ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಳೆದು ತೂಗಿ ಸಚಿವ ಹೆಚ್ಸಿ ಮಹದೇವಪ್ಪ ಮಗ ಸುನೀಲ್ ಬೋಸ್ಗೆ ಟಿಕೆಟ್ ಕೊಟ್ಟಿದೆ. ಇಬ್ಬರು ಕೂಡಾ ಇಲ್ಲಿ ಗೆಲ್ಲಬೇಕು ಅಂತ ಹೊರಟಿದ್ದಾರೆ. ಇಲ್ಲಿ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವ್ರ ಕುಟುಂಬಕ್ಕೆ ಟಿಕೆಟ್ ಸಿಗಬಹುದು ಅಂತಾ ಹೇಳಲಾಗ್ತಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವ್ರಿಗೆ ಟಿಕೆಟ್ ಮಿಸ್ ಆಗಿದ್ದು ಕೊಳ್ಳೇಗಾಲದ ಮಾಜಿ ಶಾಸಕ, ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತ್ಯಂತ ಅಚ್ಚರಿಯ ಫಲಿತಾಂಶವನ್ನ ನೀಡಿದ್ದು ಕೋಲಾರ ಲೋಕಸಭಾ ಕ್ಷೇತ್ರ. ಕಾಂಗ್ರೆಸ್ನ ಭದ್ರ ಕೋಟೆ ಅನ್ನಿಸಿಕೊಂಡಿದ್ದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮತದಾರರು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್ ಮುನಿಸ್ವಾಮಿ ಗೆಲುವನ್ನ ಸಾಧಿಸಿದ್ರು. ಅದು ಕೂಡಾ ಕಾಂಗ್ರೆಸ್ ನ ಘಟಾನುಘಟಿ ನಾಯಕ ಅನ್ನಿಸಿಕೊಂಡಿದ್ದ ಕೆ ಎಚ್ ಮುನಿಯಪ್ಪ ಅವರ ವಿರುದ್ಧ ಸುಮಾರು 2 ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಭೇರಿಯನ್ನ ಸಾಧಿಸಿದ್ರು. ಇನ್ನು ಇದು ಎಸ್ಸಿ ಮೀಸಲು ಕ್ಷೇತ್ರವಾಗಿದ್ದು ಈ ಬಾರಿ ಕಾಂಗ್ರೆಸ್ನಿಂದ ಗೌತಮ್ ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ...












