ಅಬ್ಬರಿಸಲಿದೆ ಮುಂಗಾರು..! ಏನಿದು ಲಾ ನೀನಾ ಎಫೆಕ್ಟ್..?

ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ರಾಜ್ಯ ಹಾಗೂ ದೇಶದ ಜನತೆಗೆ ಈಗೊಂದಷ್ಟು ಸಮಾಧಾನ ಸಿಕ್ತಿದೆ. ಕಳೆದ ಒಂದು ವಾರದಿಂದ ವರುಣ ಕೂಡಾ ಅಬ್ಬರಿಸ್ತಿದ್ದು, ಇಳೆ ತಂಪಾಗುವಂತೆ ಮಾಡಿದ್ದಾನೆ. ಇನ್ನೇನು ಹಸಿರೆಲ್ಲ ಹೋಯ್ತು ಅನ್ನೋ ಹೊತ್ತಿಗೆ ಮಳೆ ಬಿದ್ದಿರೋದ್ರಿಂದ ಭೂಮಿಯಲ್ಲಿ ಹಸಿರು ಚಿಗುರೋದಕ್ಕೆ ಶುರುಮಾಡಿದೆ. ಕಾಡುಗಳಲ್ಲಿನ ಕಾಳ್ಗಿಚ್ಚು ಕಡಿಮೆ ಆಗಿದೆ. ದನಕರುಗಳಿಗೆ ನೀರು ಸಿಕ್ತಿದೆ. ಇಷ್ಟಾದ್ರು ಇನ್ನು ಕೆಲವು ಕಡೆಗಳಲ್ಲಿ ಮಳೆ ಬೀಳದೇ ಇರೋದು ಆ ಭಾಗದ ಜನರಲ್ಲಿ ಆತಂಕವನ್ನ ಉಂಟು ಮಾಡ್ತಾ ಇದೆ. ಈ ಹೊತ್ತಲ್ಲೇ ಭಾರತದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆ ಆಗುತ್ತೆ ಅನ್ನೋ ಮಾತುಗಳನ್ನ ಭಾರತೀಯ ಹವಾಮಾನ ಇಲಾಖೆ ಹಾಗೂ ಅಮೆರಿಕಾದ ಸಂಶೋಧಕರು ಕೂಡಾ ಹೇಳ್ತಾ ಇದ್ದಾರೆ.
ಈಗಾಗಲೇ ‘ಎಲ್ ನೀನೋ’ ಪರಿಣಾಮ ಕಡಿಮೆ ಆಗಿದ್ದು, ‘ಲಾ ನೀನಾ’ ಬಲ ಪಡೆದುಕೊಳ್ತಿದೆ. ಇದು ಭಾರತ ಉಪಖಂಡದಲ್ಲಿ ಹಾಗೂ ಆಗ್ನೇಯ ಏಷ್ಯಾ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿಸುವ ಸಾಧ್ಯತೆಯನ್ನು ಹೆಚ್ಚಿಸ್ತಾ ಇದೆ. ಈ ಬಾರಿಯ ಮುಂಗಾರು ಆಶಾದಾಯಕವಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಾರಿ ಸರಾಸರಿಗಿಂತಲೂ ಹೆಚ್ಚಿನ ಮಳೆ ಆಗಬಹುದು ಅಂತ ಹವಾಮಾನ ಇಲಾಖೆ ಹೇಳಿದೆ. ಇಲ್ಲಿವರೆಗೂ ಭಾರತ ಸೇರಿದಂತೆ ಜಗತ್ತಿನ ನಾನಾ ಭಾಗಗಳನ್ನ ಕಾಡಿದ್ದ ‘ಎಲ್ ನೀನೋ’ ಪರಿಣಾಮ ಕಡಿಮೆ ಆಗ್ತಿದ್ದು, ಈಗ ‘ಲಾ ನೀನಾ’ ಪರಿಣಾಮ ಬಲವಾಗ್ತಿರೋದೇ ಈ ಬೆಳವಣಿಗೆಗೆ ಮುಖ್ಯ ಕಾರಣ ಅಂತ ಹೇಳಲಾಗ್ತಿದೆ. ಇದು ಈ ಬಾರಿ ರೈತರ ಮುಖದಲ್ಲಿ ಹರ್ಷ ತರಿಸ್ತಿದ್ದು, ಸರ್ಕಾರಗಳು ಕೂಡಾ ನಿಟ್ಟುಸಿರು ಬಿಡುವ ಹಾಗೆ ಮಾಡ್ತಾ ಇದೆ.
ಈ ಬಾರಿಯ ಮುಂಗಾರು ಚೆನ್ನಾಗಿ ಆಗೋದಕ್ಕೆ ಕಾರಣವಾಗ್ತಿರೋ ‘ಲಾ ನೀನ’ ಬಗ್ಗೆ ಹಾಗೂ ಇಷ್ಟು ದಿನ ಜಗತ್ತನ್ನ ಕಾಡಿದ್ದ ‘ಎಲ್ ನೀನೋ’ ಅಂದರೆ ಏನು. ಈ ‘ಎಲ್ ನೀನೋ’ ಹೇಗ ಭಾರತ ಮತ್ತು ಜಗತ್ತನ್ನ ಕಾಡುತ್ತೆ ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.