ಯುಗದ ಆದಿ ಯುಗಾದಿ ಮತ್ತೆ ಬಂದಿದೆ. ಹೊಸ ವರುಷವನ್ನು ಹೊತ್ತು ತಂದಿದೆ. ಈ ಕ್ರೋಧ ನಾಮ ಸಂವತ್ಸರದಲ್ಲಿ ಯಾರು ಹೆಚ್ಚು ಕೋಪ ಮಾಡಿಕೊಳ್ಳದೇ ಖುಷಿಖುಷಿಯಾಗಿ ಇರಿ ಅಂತ ಹಾರೈಸ್ತಾ ಮೀಡಿಯಾ ಮಾಸ್ಟರ್ಸ್ನ ಸಮಸ್ತ ಅಭಿಮಾನಿಗಳಿಗೆ, ರಾಜ್ಯದ ಜನತೆಗೂ ಯುಗಾದಿ ಹಬ್ಬದ ಹಾಗೂ ಹಿಂದೂ ಸಂಸ್ಕತಿಯ ಹೊಸ ವರ್ಷದ ಶುಭಾಶಯಗಳು.
ಸನಾತನ ಧರ್ಮದಲ್ಲಿ ಈ ಹಿಂದಿನಿಂದಲೂ ಯುಗಾದಿಯನ್ನ ಹೊಸ ವರ್ಷದ ಪ್ರಾರಂಭ ಅಂತಲೇ ನಂಬಲಾಗಿದೆ. ಯುಗಾದಿಯ ದಿನ ಕೆಲವ್ರು ಪಂಚಾಂಗ ಶ್ರವಣವನ್ನ ಮಾಡ್ತಾ ಈ ವರ್ಷದಲ್ಲಿ ಮಳೆ ಬೆಳೆ ಆರೋಗ್ಯ ಹೇಗಿದೆ ಅನ್ನೋದನ್ನು ತಿಳಿದುಕೊಳ್ತಾರೆ. ಜನ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಯುಟ್ಟು, ಹಿರಿಯರಿಗೆ ನಮಿಸಿ, ಬೇವು ಬೆಲ್ಲ ತಿಂದು, ಸಿಹಿ ಅಡುಗೆ ಮಾಡಿ ಈ ಹಬ್ಬವನ್ನು ಸಂಭ್ರಮಿಸ್ತಾರೆ. ಇದು ಶತಮಾನಗಳಿಂದಲು ನಡೆದುಕೊಂಡು ಬಂದಿರೋ ಪದ್ದತಿ.
ಈ ಯುಗಾದಿಯ ಆದಿ ಯಾವುದು ಅನ್ನೋದನ್ನ ನೋಡಿದ್ರೆ ಸನಾತನ ಧರ್ಮದ ಆರಂಭಿಕ ಕಾಲದ ವರೆಗೂ ಇದು ಹೋಗುತ್ತೆ. ಈ ಯುಗಾದಿಯಂದೇ ಸೃಷ್ಟಿಕರ್ತ ಬ್ರಹ್ಮ ತನ್ನ ಸೃಷ್ಟಿ ಕಾರ್ಯವನ್ನ ಆರಂಭಿಸಿದ ಅನ್ನೋ ಉಲ್ಲೇಖವೂ ಇದೆ. ಇನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ, “ವಸಂತ ಋತು ತನ್ನ ವಿಭೂತಿಯಾಗಿದೆ..!” ಅಂತ ಹೇಳ್ತಾನೆ. ವಸಂತ ಋತುವಿನ ಪ್ರಾರಂಭದಲ್ಲಿ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳಾಗುತ್ವೆ. ಮರ-ಗಿಡಗಳು ಹೂಬಿಟ್ಟು ನಲಿಯುತ್ತವೆ. ಹೊಸತರ ಆರಂಭ ಆಗುತ್ತೆ. ವಾತಾವರಣ ಆಹ್ಲಾದಕರವಾಗಿರುತ್ತೆ. ಹೀಗಾಗಿ ಯುಗಾದಿ ಅನ್ನೋದು ಹೊಸತನ ಪ್ರಾರಂಭ ಆಗಿರುತ್ತೆ. ಇನ್ನು ಐತಿಹಾಸಿಕವಾಗಿ ಶಾತವಾಹನರ ಕಾಲದಲ್ಲಿ ಈ ಯುಗಾದಿಯನ್ನ ಆಚರಿಸಲಾಗ್ತಿತ್ತು ಅನ್ನೋ ಮಾಹಿತಿ ಲಭ್ಯ. ಅವರ ಶಾಸನಗಳಲ್ಲಿ ಈ ಹಬ್ಬರ ಬಗ್ಗೆ ಉಲ್ಲೇಖಗಳು ಸಿಗುತ್ವೆ.
ಹೀಗೆ ಹಿಂದೂ ಸಂಸ್ಕೃತಿಯ ಹೊಸವರ್ಷದ ದಿನವಾದ ಯುಗಾದಿ ಅನೇಕ ಪೌರಾಣಿಕ, ಐತಿಹಾಸಿಕ ಹಾಗೇ ವೈಜ್ಞಾನಿಕ ವಿಶೇಷತೆಗಳನ್ನ ಹೊಂದಿದೆ. ಯುಗಾದಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಲಿಂಕಿಗೆ ಭೇಟಿ ನೀಡಿ.
ಯುಗಾದಿಯ ವಿಶೇಷತೆಗಳೇನು ಗೊತ್ತಾ..?

What’s your reaction?
Love0
Sad0
Happy0
Sleepy0
Angry0
Dead0
Wink0







Leave a Reply