ಎಡಕಲ್ಲು ಗುಡ್ಡದ ಮೇಲಿನ ಗುಹೆಗಳಿಗಿದೆ ಐತಿಹಾಸಿಕ ನಂಟು..!

ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಎಡಕ್ಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ತೋರಿಸಲಾದ ಎಡಕಲ್ಲು ಗುಡ್ಡ ಮತ್ತು ಅದರ ಮೇಲಿನ ಗುಹೆ ನೆನಪಿರಬಹುದು. ನಿಮ್ಮಲ್ಲಿ ಸಾಕಷ್ಟು ಜನ ಈ ವೈನಾಡಿನ ಈ ಸುಂದರ ತಾಣಕ್ಕೆ ಹೋಗಿ ಬಂದಿರಲೂ ಬಹುದು. ಆ ಎಡಕ್ಕಲ್ಲು ಗುಡ್ಡ ಕೇವಲ ಒಂದು ಪಿಕ್ ನಿಕ್ ಸ್ಪಾಟ್ ಅಲ್ಲ! ಬದಲಾಗಿ ಅದು ಭಾರತದ ಇತಿಹಾಸಕ್ಕೆ ಒಂದು ಸಾಕ್ಷಿ!
ಭಾರತದಲ್ಲಿ ಶಿಲಾಯುಗದ ಕಾಲದಿಂದಲೂ ಕೂಡಾ ಜನವಸತಿ ಇತ್ತು ಅನ್ನೋದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ವೆ.. ಅದರಲ್ಲೂ ದಕ್ಷಿಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಈ ಬಗ್ಗೆ ಒಂದಷ್ಟು ಸಾಕ್ಷಿಗಳು ಸಿಗುತ್ತವೆ. ಎಂಟು ಸಾವಿರ ವರ್ಷಗಳ ಹಿಂದೆ ನಮ್ಮ ಕರ್ನಾಟಕ ಕೇರಳ, ತಮಿಳುನಾಡು ಭಾಗದಲ್ಲೂ ಕೂಡಾ ಮನುಷ್ಯರಿದ್ರು; ಅವ್ರು ಒಂದಷ್ಟು ಚಿತ್ರಗಳನ್ನ ಬರೆಯೋದಕ್ಕೆ ಕಲಿತಿದ್ರು. ಹೀಗಾಗಿ ನಮ್ಮಲ್ಲಿ ಸಿಂಧೂನದಿ ನಾಗರೀಕತೆಗೂ ಮುನ್ನವೇ ಜನವಸತಿ ಇತ್ತು ಅನ್ನೋದನ್ನ ಈ ಗುಹೆಗಳು ನಮಗೆ ತಿಳಿಸುತ್ತವೆ. ಅಷ್ಟೇ ಅಲ್ಲದೇ ನಮ್ಮ ಕದಂಬ ಕಾಲದಲ್ಲಿ ಈ ಎಡಕಲ್ಲು ಗುಹೆಗಳಲ್ಲಿ ಒಂದಷ್ಟು ಶಾಸನಗಳನ್ನು ಬರೆಸಿದ್ರು ಅನ್ನೋದನ್ನ ಈ ಗುಹೆಗಳು ಹೊರ ಹಾಕಿವೆ. ಹಾಗಾದ್ರೆ ಈ ಗುಹೆಗಳ ಮಹತ್ವ ಎಂಥದ್ದು? ಅಲ್ಲಿ ಸಿಕ್ಕಿರೋದಾದ್ರು ಏನು..ಈ ಗುಹೆಗಳಲ್ಲಿದ್ದ ಜನರಿಗೂ, ಈಗ ತಮಿಳುನಾಡು, ಕೇರಳ ಹಾಗು ಕರ್ನಾಟಕದಲ್ಲಿ ವಾಸ ಮಾಡುವ ಜನರಿಗೂ ಏನಾದ್ರೂ ಸಂಬಂಧ ಇದ್ಯಾ ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.