ಅದೊಂದು ವಿಚಿತ್ರ ಕಾಡು. ಅಲ್ಲಿ ಹುಲಿ ಘರ್ಜನೆ ಇದೆ. ಹಕ್ಕಿಗಳ ಚಿಲಿಪಿಲಿ ಕೇಳಿ ಬರುತ್ತೆ. ಆ ಕಾಡಲ್ಲಿ ಚಿರತೆಗಳು ಹುಲಿಗಳ ಕಣ್ಣುತಪ್ಪಿಸಿ ಓಡಾಡುತ್ವೆ. ಹಾಗೇ ಅಲ್ಲಿ ಕರಡಿ ಹಾಗೂ ಹುಲಿಯ ನಡುವಿನ ಬಲಾಬಲದ ಪರೀಕ್ಷೆಗಳೂ ನಡೆಯುತ್ವೆ. ಇಂತಹ ಕಾಡಲ್ಲಿ ನರಭಕ್ಷಕ ಹುಲಿಗಳ ಕಥೆ ಕೂಡಾ ಕೇಳಿ ಬರುತ್ತೆ. ಆ ಕಾಡಿನ ಸುತ್ತಮುತ್ತ ಒಂದೇ ವರ್ಷದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಹುಲಿ ದಾಳಿಯಿಂದ ಸಾವನ್ನಪ್ಪಿರೋ ವರದಿಯಾಗಿದೆ. ಇಷ್ಟಾದ್ರು ಅಲ್ಲಿ ಜನ ನಿರ್ಭಡೆಯಿಂದ ಓಡಾಡ್ತಾರೆ. ಬೈಕ್ಗಳನ್ನ ಹುಲಿಗಳು ಅಡ್ಡಗಟ್ಟುತ್ವೆ. ಕೆಲವೊಮ್ಮೆ ಸವಾರರನ್ನು ಪ್ರದಕ್ಷಿಣೆ ಹಾಕೋ ಹುಲಿಗಳು ...
ಅದು ಐತಿಹಾಸಿಕ ಅಭಯಾರಣ್ಯ. ಭಾರತ ಹಾಗೇ ಏಷ್ಯಾದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನಗಳ ಪೈಕಿ ಒಂದು. 20ನೇ ಶತಮಾನದಲ್ಲಿ ಜೀವಿಸಿದ್ದ, ನರಭಕ್ಷಕ ಹುಲಿಬೇಟೆಗಾರನ ಕನಸಿನ ಕೂಸು ಆ ಸಂರಕ್ಷಿತಾರಣ್ಯ. ಜೀವವೈವಿದ್ಯಕ್ಕೆ ಹೆಸರುವಾಸಿಯಾದ ಆ ಅಭಯಾರಣ್ಯದಲ್ಲಿ ಸುಮಾರು 250ಕ್ಕೂ ಅಧಿಕ ಹುಲಿಗಳಿದ್ರೂ ಕೂಡಾ ಅದೃಷ್ಟವಿದ್ದೋರಿಗೆ ಮಾತ್ರ ಕಾಣಸಿಗೋದು ಅನ್ನೋ ಮಾತಿದೆ. ಅಲ್ಲಿ 700ಕ್ಕೂ ಅಧಿಕ ಆನೆಗಳಿವೆ, 5 ಸಾವಿರಕ್ಕೂ ಅಧಿಕ ಜಿಂಕೆಯಂತಹ ಪ್ರಾಣಿಗಳು ಆಹಾರ ಸರಪಳಿಯನ್ನ ಭದ್ರವಾಗಿಸಿವೆ. ಅಲ್ಲಿ ಸ್ವಾರ್ಥದ ಮರಗಳ ಕತೆ ಕೇಳಿಬರುತ್ತೆ, ಫಾರೆಸ್ಟ್ ಕ್ಯಾನ್ಸರ್ ಅನ್ನೋ ಕುಖ್ಯಾತಿಗೆ ಪಾತ್ರವಾದ ಪ್ಲೋರಾ ಕಾಣಸಿಗುತ್ತೆ. 20ನೇ ...
ಮಾನವರ ಬೇಟೆಯ ಹುಚ್ಚಿಗೆ ಅಪರೂಪದಲ್ಲಿ ಅಪರೂಪ ಅನ್ನಿಸಿಕೊಂಡಿರೋ ಅನೇಕ ವನ್ಯಜೀವ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ನೀಲಗಿರಿ ಥಾರ್ಗಳು, ಏಷಿಯಾಟಿಕ್ ಲಯನ್ಸ್, ಸ್ಲೆಂಡರ್ ಲೋರೀಸ್, ಸಿಂಹಬಾಲದ ಕೋತಿಗಳು, ಬೆಂಗಾಲ್ ಟೈಗರ್ಸ್ ಸೇರಿದಂತೆ ಹಲವು ಅಪೂರ್ವ ಜೀವಿಗಳು ಬೆರಳೆಣಿಕೆಯಷ್ಟೇ ಉಳಿದುಕೊಂಡಿವೆ. ಅಳಿದುಳಿದ ಈ ಸಂಕುಲವನ್ನು ಉಳಿಸಿಕೊಳ್ಳೋದಕ್ಕೆ ಸರ್ಕಾರ ನಾನಾ ಯೋಜನೆಯನ್ನ ಹಮ್ಮಿಕೊಂಡಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಲಯನ್, ಪ್ರಾಜೆಕ್ಟ್ ಕ್ರೊಕೊಡೈಲ್ ಹೀಗೆ ಕಾಲಕ್ಕನುಗುಣವಾಗಿ ನಾನಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಾ ಇದೆ. ಇಂತಹದ್ದೇ ಒಂದು ಅಳಿವಿನ ಅಂಚಿಗೆ ತಲುಪಿರುವ ಭಾರತೀಯ ಮೂಲದ ಅಪರೂಪದ ತಳಿಯ ಸಂರಕ್ಷಣೆಗಾಗಿ ಅರಣ್ಯ ...
ನಿಮ್ಮಲ್ಲಿ ಬಹುತೇಕರು ಡಿಸ್ನಿ ವರ್ಲ್ಡ್ ನಿರ್ಮಿಸಿದ ‘ದಿ ಜಂಗಲ್ ಬುಕ್’ ಅನ್ನೋ ಸಿನೆಮಾವನ್ನ ನೋಡಿರ್ತೀರಿ. ಅಮೇರಿಕಾದ ಸಂಸ್ಥೆ ನಿರ್ಮಾಣ ಮಾಡಿದ ಈ ಸಿನೆಮಾ ಫ್ಯಾಂಟಸಿ ಸ್ಟೋರಿ ಅಂದುಕೊಂಡವರೇ ಹೆಚ್ಚು. ಆದರೆ ಇದೊಂದು ನೈಜ ಘಟನೆ ಆಧಾರಿತ ಕಥೆಯನ್ನ ಆಧರಿಸಿದ ಚಿತ್ರ. ಅ ಘಟನೆ ನಡೆದದ್ದು ನಮ್ಮ ಭಾರತದಲ್ಲಿ. ಅದರ ಮೂಲ ಕಥೆಯನ್ನ ಬರೆದವನು ವಿದೇಶಿಗನೇ ಆದ್ರೂ ಕೂಡಾ ಆತ ಹುಟ್ಟಿದ್ದು, ಬೆಳೆದದ್ದು, ಆ ಕಥೆಯನ್ನ ಬರೆದದ್ದು ನಮ್ಮ ಭಾರತದಲ್ಲಿ! ಶತಮಾನಗಳ ಹಿಂದೆ ನಡೆದುಹೋದ ಆ ಜೀವನಗಾಥೆಗೆ ತನ್ನ ಅಕ್ಷರಗಳ ಮೂಲಕ ಜೀವ ನೀಡಿದವರು ರುಡ್ಯಾರ್ಡ್ ...
ಈ ಜಗತ್ತಿನಲ್ಲಿ ಅತಿ ದೊಡ್ಡ ಹಾವು ಯಾವುದು? ಅದು ಅನಕೊಂಡನಾ ಅಥವಾ ರೆಟಿಕ್ಯುಏಟೆಡ್ ಪೈತಾನಾ? ಇಲ್ಲಿವರೆಗೂ ಈ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಆದರೆ ಇತ್ತೀಚಿಗೆ ಕೊಲಂಬಿಯಾದಲ್ಲಿ ಸಿಕ್ಕಿ 27 ಅಡಿಗಳಷ್ಟು ಉದ್ದದ ಅನಕೊಂಡ ಹೆಚ್ಚು ಸದ್ದು ಮಾಡಿತ್ತು. ಅದು ಐನೂರು ಕೆಜಿಯಷ್ಟು ತೂಗ್ತಿತ್ತು. ಹೀಗಾಗಿ ಅತೀ ಉದ್ದದ ಹಾಗೂ ಅತಿ ತೂಕದ ಹಾವು ಅನ್ನೊ ಹೆಗ್ಗಳಿಕೆ ಅದು ಪಾತ್ರ ಆಯ್ತು. ಅಲ್ಲಿವರೆಗೂ ಈ ಉದ್ದದ ಹಾವುಗಳ ಪಟ್ಟಿಯಲ್ಲಿ ಮಲಯನ್ ಪೈತಾನ್ಗಳು ಅಂದ್ರೆ ರೆಟಿಕ್ಯುಲೇಟೆಡ್ ಪೈತಾನ್ಗಳು ಕಾಣಿಸಿಕೊಳ್ತಿದ್ವು. ಹೀಗಾಗಿ ಜಗತ್ತಿನ ಅತಿ ಉದ್ದದ ಸರಿಸೃಪ ಯಾವುದು ...
ಪ್ರಪಂಚದ ಟೈಗರ್ ಕ್ಯಾಪಿಟಲ್, ಭಾರತದ ಹುಲಿಗಳ ರಾಜ್ಯ ಅಂತ ಕರೆಸಿಕೊಂಡ ಮಧ್ಯಪ್ರದೇಶದ ವಿಂದ್ಯ ಪರ್ವತಗಳ ತಪ್ಪಲಲ್ಲಿರೋ ಹುಲಿ ಸಂರಕ್ಷಿತಾರಣ್ಯ ಅದು. ಒಂದು ಕಾಲಕ್ಕೆ ಹುಲಿಗಳೇ ಇಲ್ಲದ ಹುಲಿ ಸಂರಾಕ್ಷಿತಾರಣ್ಯ ಅನ್ನೋ ಪರಿಸ್ಥಿತಿಯನ್ನ ಎದುರಿಸಿ, ಅಚ್ಚರಿ ಪಡೋ ಹಾಗೇ ಹುಲಿಗಳ ಅಭಿವೃದ್ಧಿಯನ್ನ ಮಾಡಿ ಜಗಮೆಚ್ಚುಗೆಗೆ ಪಾತ್ರವಾಗಿತ್ತು. ಐತಿಹಾಸಿಕ ನಗರ ಖಜುರಾಹೋದಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿರೋ ಆ ಸಂರಕ್ಷಿತಾರಣ್ಯ ಬೇರ್ಯಾವುದೂ ಅಲ್ಲ, ಮಧ್ಯಪ್ರದೇಶದ 5ನೇ ಹುಲಿ ಸಂರಕ್ಷಿತ ಪ್ರದೇಶ ಅನ್ನಿಸಿಕೊಂಡಿರೋ ಪನ್ನಾ ಸಂರಕ್ಷಿತಾರಣ್ಯ. ಪನ್ನಾ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶದ ಪನ್ನಾ ಹಾಗೂ ಛತರ್ಪುರ ಜಿಲ್ಲೆಗಳಲ್ಲಿದೆ. 1981ರಲ್ಲಿ ಸ್ಥಾಪನೆಯಾದ ...
ಮನುಷ್ಯನಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳ ಪೈಕಿ ಒಂದು ನೀರು. ಈ ನೀರು ಭೂಮಿ ಮೇಲೆ ಇರೋದ್ರಿಂದಲೇ ಮನುಷ್ಯ ಸೇರಿದಂತೆ ಜೀವ ಸಂಕುಲ ಇಲ್ಲಿ ಬದುಕಿ ಉಳಿದಿರೋದು. ನೀರಿದ್ದರೆ ಹಸಿರು. ನೀರಿದ್ದರೇ ಜೀವ. ಈ ಹಿಂದೆ ಅದೆಷ್ಟೊ ಅತ್ಯದ್ಭುತ ನಾಗರೀಕತೆಗಳು ನೀರಿನಿಂದಲೇ ಹುಟ್ಟಿವೆ. ನೀರಿನಿಂದಲೇ ಅವಸಾನಗೊಂಡಿದೆ. ಈಜಿಪ್ಟ್ ಅನ್ನೋ ಮರಳುಗಾಡಿನಲ್ಲಿ ನೈಲ್ ಅನ್ನೋ ನದಿ ಅತ್ಯದ್ಭುತವಾದ ನಾಗರೀಕತೆಯನ್ನ ಹುಟ್ಟು ಹಾಕಿತ್ತು. ಯುಪ್ರೆಟೀಸ್ ಮತ್ತು ಟೈಗ್ರೀಸ್ಗಳ ಬದಿಯಲ್ಲಿ ಮೆಸಪಟೋಮಿಯ ತಲೆ ಎತ್ತಿದ್ರೆ, ಗಂಗಾ, ಸಿಂಧೂ, ಸರಸ್ವತಿಯರ ಕಾರಣದಿಂದ ಭಾರತದ ನಾಗರೀಕತೆ ಹುಟ್ಟಿಕೊಂಡಿತ್ತು. ಇದಿಷ್ಟೇ ಅಲ್ಲಾ. ಮಾನವನ ...
ಬಂಗಾಳ ಕೊಲ್ಲಿ ಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತಿತವಾಗಿದೆ. ಡಿ.3 ಅಥವಾ 4 ರಂದು ಆಂಧ್ರ ತೀರ ಪ್ರದೇಶಗಳಿಗೆ ಈ ಸೈಕ್ಲೂನ್ ಅಪ್ಪಳಿಸಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ ಮಿಚಾಂಗ್ ಅಂತ ಹೆಸರಿಸಲಾಗಿದ್ದು, ಆಂಧ್ರ ಪ್ರದೇಶದ ಮಚಲೀಪಟ್ಟಣಂ ಬಳಿ ಲ್ಯಾಂಡ್ ಫಾಲ್ ಆಗಲಿದೆ ಅಂತ ಐಎಂಡಿ ಮೂಲಗಳು ತಿಳಿಸಿವೆ. ಈ ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ರೂಪುಗೊಂಡಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ...
ಈ ಭೂಮಿಯ (Earth) ಮೇಲೆ ಜೀವಿಗಳು ಇರೋದಕ್ಕೆ ಕಾರಣವೇ ನೀರು(Water) ಅಂತ ಹೇಳಲಾಗುತ್ತೆ. ನೀರನ್ನ ಜೀವಜಲ ಅಂತ ಕರೆಯಲಾಗುತ್ತೆ..ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಹರಿಯುವ ನದಿಗಳಲ್ಲಿನ (River) ನೀರನ್ನ ಮುಟ್ಟಿದ್ರು ನಮ್ಮ ಪಾಪಗಳು ನಿವಾರಣೆ ಆಗುತ್ವೆ ಅಂತ ಹೇಳ್ತಾರೆ. ಆದ್ರೆ ಅಲ್ಲೊಂದು ಸರೋವರ (Lake) ಇದೆ. ಆ ಸರೋವರದ ನೀರನ್ನ ಮುಟ್ಟಿದ್ರು ಸಾಕು ಪ್ರಾಣಿಗಳು ಕಲ್ಲಾಗುತ್ವೆ. ಆ ನೀರಿಗೆ ಧುಮುಕುವ ಪಕ್ಷಿಗಳು (Bird) ಮೇಲಕ್ಕೆ ಬರೋದೇ ಇಲ್ಲಾ; ಪ್ರಾಣಿಗಳು (Animal) ಮತ್ತೆ ಉಸಿರಾಡೊದೇ ಇಲ್ಲಾ! ಆ ನೀರಲ್ಲಿ ಮನುಷ್ಯ(Human) ಹೆಚ್ಚು ಹೊತ್ತು ಇರೋದಕ್ಕೆ ಸಾಧ್ಯವೇ ಇಲ್ಲ. ...
ಭಾರತದ(India) ಮೇಲೆ ಮುನಿಸಿಕೊಂಡಿದ್ದ ಮಳೆರಾಯ (Rain) ಈಗ ಅಬ್ಬರಿಸ್ತಿದ್ದಾನೆ. ರಾಜ್ಯದಲ್ಲಿ(Karnataka) ಮಳೆ ಬಗ್ಗೆ ತಲೆ ಕೆಡಿಸಿಕೊಂಡಿದ್ದ ರೈತರ ಮುಖದಲ್ಲಿ ಸಂತಸ ಮೂಡ್ತಿದ್ರೆ, ಅತ್ತ ಉತ್ತರ ಭಾರತದಲ್ಲಿ(North India) ಮಳೆರಾಯನ ರೌದ್ರತೆಯ ದರ್ಶನ ಆಗ್ತಿದೆ. ಅಲ್ಲಿನ ಕೆಲವು ರಾಜ್ಯಗಳು ಕೇವಲ ಒಂದೇ ತಿಂಗಳಲ್ಲಿ ಐದಾರು ಸಾವಿರ ಕೋಟಿಯಷ್ಟು ನಷ್ಟವನ್ನ ಅನುಭವಿಸಿವೆ. ನೂರಾರು ಮನೆಗಳು ನಾಮಾವಶೇಷವಾಗಿದ್ರೆ ಸಹಸ್ರಾರು ಮನೆಗಳು ಮಳೆಯ ಅಬ್ಬರಕ್ಕೆ ನಡುಗಿ ಹೋಗಿವೆ. ರಾಜ್ಯದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗ್ತಿದ್ದು ಈ ಭಾಗದಲ್ಲಿ ಮುಂದಿನ ಇಪ್ಪತ್ತ ನಾಲ್ಕು ಗಂಟೆಗಳಲ್ಲಿ 180 ರಿಂದ ...












