ನಿಮ್ಮಲ್ಲಿ ಬಹುತೇಕರು ಡಿಸ್ನಿ ವರ್ಲ್ಡ್ ನಿರ್ಮಿಸಿದ ‘ದಿ ಜಂಗಲ್ ಬುಕ್’ ಅನ್ನೋ ಸಿನೆಮಾವನ್ನ ನೋಡಿರ್ತೀರಿ. ಅಮೇರಿಕಾದ ಸಂಸ್ಥೆ ನಿರ್ಮಾಣ ಮಾಡಿದ ಈ ಸಿನೆಮಾ ಫ್ಯಾಂಟಸಿ ಸ್ಟೋರಿ ಅಂದುಕೊಂಡವರೇ ಹೆಚ್ಚು. ಆದರೆ ಇದೊಂದು ನೈಜ ಘಟನೆ ಆಧಾರಿತ ಕಥೆಯನ್ನ ಆಧರಿಸಿದ ಚಿತ್ರ. ಅ ಘಟನೆ ನಡೆದದ್ದು ನಮ್ಮ ಭಾರತದಲ್ಲಿ. ಅದರ ಮೂಲ ಕಥೆಯನ್ನ ಬರೆದವನು ವಿದೇಶಿಗನೇ ಆದ್ರೂ ಕೂಡಾ ಆತ ಹುಟ್ಟಿದ್ದು, ಬೆಳೆದದ್ದು, ಆ ಕಥೆಯನ್ನ ಬರೆದದ್ದು ನಮ್ಮ ಭಾರತದಲ್ಲಿ!
ಶತಮಾನಗಳ ಹಿಂದೆ ನಡೆದುಹೋದ ಆ ಜೀವನಗಾಥೆಗೆ ತನ್ನ ಅಕ್ಷರಗಳ ಮೂಲಕ ಜೀವ ನೀಡಿದವರು ರುಡ್ಯಾರ್ಡ್ ಕಿಪ್ಲಿಂಗ್. ಸಾಹಿತ್ಯಕ್ಕಾಗಿ ನೋಬೆಲ್ ಪುರಸ್ಕಾರವನ್ನ ಪಡೆದ ಮೊದಲ ಇಂಗ್ಲಿಷ್ ಸಾಹಿತಿ. ರುಡ್ಯಾರ್ಡ್ ಕಿಪ್ಲಿಂಗ್ ಹುಟ್ಟಿದ್ದು 30 ಡಿಸೆಂಬರ್ 1865, ಬಾಂಬೆ ಪ್ರೆಸಿಡೆನ್ಸಿಯ ಮಲಬಾರ್ ಹಿಲ್ ನಲ್ಲಿ. ತಂದೆ ಜಾನ್ ಲಾಕ್ವುಡ್ ಕಿಪ್ಲಿಂಗ್, ವೃತ್ತಿಯಲ್ಲಿ ಕಲಾ ಶಿಕ್ಷಕ. ತಾಯಿ ಅಲೈಸ್ ಮೆಕ್ಡೊನಾಲ್ಡ್. ಇಂಗ್ಲೆಂಡ್ನಲ್ಲಿ ವಿದ್ಯಾಭ್ಯಾಸ ಮುಗಿಸಿ 1882ರಲ್ಲಿ ಭಾರತಕ್ಕೆ ಮರಳಿದ ರುಡ್ಯಾರ್ಡ್, ಪತ್ರಿಕೆಗಳಲ್ಲಿ ಸಹಾಯಕ ಸಂಪಾದಕನಾಗಿ ಕೆಲಸವನ್ನ ಶುರು ಮಾಡಿದರು. ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿ, ವಿವಿಧ ಹುದ್ದೆಗಳನ್ನ ಕೂಡಾ ನಿರ್ವಹಣೆ ಮಾಡಿದ ಕಿಪ್ಲಿಂಗ್. ನಿರಂತರವಾಗಿ ಲೇಖನಗಳನ್ನ, ಕವನಗಳನ್ನ ಬರೆದು ಪ್ರಕಟಿಸಿದರು. ನಿಧಾನವಾಗಿ ಸಣ್ಣ ಕಥೆಗಳನ್ನ ಬರೆಯೋದಿಕ್ಕೆ, ಬರವಣಿಗೆಗೆ ವಸ್ತುಗಳಿಗಾಗಿ ಅನೇಕ ಪ್ರದೇಶಗಳನ್ನ ಸುತ್ತಾಡಿದರು. ಅಪರಿಚಿತ ಜನರನ್ನ ಮಾತನಾಡಿಸಿ, ಇಲ್ಲಿ ಪ್ರಚಲಿತದಲ್ಲಿರೋ ದಂತಕಥೆಗಳನ್ನ ಆಲಿಸಿ, ಅವುಗಳನ್ನ ನೆನಪಿಗೆ ಸೀಮಿತ ಮಾಡದೆ ಅಕ್ಷರದ ರೂಪ ನೀಡಿ ಪತ್ರಿಕೆಗಳಲ್ಲಿ ಪ್ರಕಟ ಮಾಡಿದ್ರು. ತಾನು ಬರೆದು ಪ್ರಕಟಿಸಿ ಕವನ, ಲೇಖನ ಕಥೆಗಳನ್ನ ಪುಸ್ತಕ ರೂಪದಲ್ಲಿ ಪ್ರಕಟಿಸಿದ. ಅವುಗಳ ಪೈಕಿ ಅತ್ಯಂತ ಗಮನ ಸೆಳೆದ್ದು 1894ರಲ್ಲಿ ಪ್ರಕಟವಾದ ‘ದಿ ಜಂಗಲ್ ಬುಕ್’ ಹಾಗೂ ‘ದಿ ಸೆಕೆಂಡ್ ಜಂಗಲ್ ಬುಕ್’.
ಕಾಡಿನ ಜೀವಿಗಳು ಮಾನವರ ಜೊತೆ ಮಾತನಾಡುವ ಕಥೆಗಳು. ಅವರ ನಡುವಿನ ಸಂಬಂಧವನ್ನ ತಿಳಿಸೋ ಈ ಕತೆಗಳು ಭಾರತದಲ್ಲಿ ಪ್ರಚಲಿತದಲ್ಲಿರುವ ಪಂಚತಂತ್ರ ಹಾಗೂ ಜಾತಕ ಕತೆಗಳಿಂದ, ಜಾನಪದ ಕತೆಗಳಿಂದ ಪ್ರೇರಣೆ ಗೊಂಡಿವೆ ಅಂತ ಹೇಳಲಾಗುತ್ತೆ. ಈ ‘ದಿ ಜಂಗಲ್ ಬುಕ್’ನಲ್ಲಿ ಬರೋ ಕಥೆಗಳಲ್ಲಿ ಅತ್ಯಂತ ಗಮನ ಸೆಳೆದ್ದದ್ದು ಮೌಗ್ಲಿಯ ಕಥೆ. ತೋಳವೊಂದು ಕಾಡಿನಲ್ಲಿ ಅನಾಥವಾಗಿ ಸಿಕ್ಕ ಮಗುವನ್ನ ತಾಯಿ ಪ್ರೀತಿ ನೀಡಿ ಸಾಕಿದ ಕಥೆ.
ಶತಮಾನಗಳ ಹಿಂದೆ ಮಧ್ಯ ಪ್ರದೇಶದ ಕಾಡುಗಳಲ್ಲಿ ಈ ಘಟನೆ ನಡೆದಿತ್ತು ಅಂತ ಹೇಳಲಾಗುತ್ತೆ. ಇನ್ನು ಕೆಲವು ಮಂದಿ ಇದು ಶಿಮ್ಲಾದಲ್ಲಿ ನಡೆದಿತ್ತು, ಅಲ್ಲಲ್ಲ ಒಡಿಸ್ಸಾದ ಕಾಡಲ್ಲಿ ನಡೆದದ್ದು ಅಂತ ವಾದಗಳಿವೆ, ಗೊಂದಲ ಖಂಡಿತಾ ಇದೆ. ಆದ್ರೆ ಹೆಚ್ಚು ಒಪ್ಪಿಕೊಂಡ ವಾದ ಹಾಗೂ ಕಿಪ್ಲಿಂಗ್ ಬರೆದ ಕತೆಗಳಲ್ಲಿ ಸಿಗೋ ಸುಳಿಹುಗಳ ಪ್ರಕಾರ ಈ ಘಟನೆ ನಡೆದದ್ದು ಮಧ್ಯಪ್ರದೇಶದ ಸಿವ್ನಿ Seonee/ Seoni, ಕಾಡುಗಳಲ್ಲಿ. ಅಂದು ಮೌಗ್ಲಿಗೆ ಬದುಕು ನೀಡಿದ್ದ ಕಾಡೇ ಇಂದಿನ ಪೇಂಚ್ ಅಭಯಾರಣ್ಯ ಅಂತ ಹೇಳಲಾಗುತ್ತೆ.
ಹಾಗಾದ್ರೆ ರುಡ್ಯಾರ್ಡ್ ಕಿಪ್ಲಿಂಗ್ ಗೆ ಮೊಗ್ಲಿ ಎಲ್ಲಿ ಸಿಕ್ಕ? ಅವನು ಕತೆ ರಚನೆ ಮಾಡಿದ್ದು ಎಲ್ಲಿ, ಮೊಗ್ಲಿ ಓಡಾಡಿದ ಆ ಕಾಡು ಎಲ್ಲಿದೆ? ಶೇರ್ ಖಾನ್, ರಕ್ಷಾ, ಬಾಲೂ, ಭಗೀರರ ವಂಶಸ್ಥರು ಇನ್ನೂ ಆ ಕಾಡಲ್ಲಿ ಕಾಣಸಿಗ್ತಾರ? ಆ ಕಾಡಿನ ವಿಶೇಷತೆ ಏನು ಅನ್ನೋ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.
‘ದಿ ಜಂಗಲ್ ಬುಕ್’ನ ಮೋಗ್ಲಿ ಲ್ಯಾಂಡ್ ಎಲ್ಲಿದೆ ಗೊತ್ತಾ..?

What’s your reaction?
Love0
Sad0
Happy0
Sleepy0
Angry0
Dead0
Wink0




Leave a Reply