ಚಂದ್ರನ್ನ ಕಬ್ಜ ಮಾಡಿಕೊಳ್ಳೋದಕ್ಕೆ ರಶ್ ಶುರುವಾಗಿ ಐವತ್ತೈದು ವರ್ಷಗಳು ಕಳೆದು ಹೋಗ್ತಿವೆ. ಇಂತಹ ಹೊತ್ತಲ್ಲಿ ನಾಸಾದ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಒಂದು ಭಯಾನಕ ಮಾಹಿತಿಯನ್ನ ಹೊರ ಹಾಕಿದ್ದಾರೆ. 2030ರ ಹೊತ್ತಿಗೆ ಚೈನಾ ಚಂದ್ರನನ್ನು ತನ್ನ ಮುಷ್ಟಿಗೆ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಅಂತ ಅವ್ರು ಹೇಳ್ತಾ ಇದ್ದಾರೆ. ಅದಕ್ಕೆ ಅವ್ರು ಸಾಕಷ್ಟು ಕಾರಣಗಳನ್ನು ಕೂಡಾ ಕೊಡ್ತಿದ್ದು, ಇದನ್ನ ಏನಾದ್ರು ಮಾಡಿ ತಡೀಬೇಕು ಅಂತ ಅವ್ರು ಹೇಳ್ತಿದ್ದಾರೆ.
ಚಂದಿರ. ಹುಣ್ಣಿಮೆಯ ದಿನ ಬಾನಲ್ಲಿ ರಾತ್ರಿ ಹೊತ್ತು ಮಿನುಗುವ ಚಂದ್ರನನ್ನ ನೋಡಿದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ! ಅಮ್ಮ ಮಕ್ಕಳಿಗೆ ಊಟ ಮಾಡಿಸುವಾಗ ಚಂದ ಮಾಮನನ್ನ ತೋರಿಸ್ತಾಳೆ..ಅವನ್ನ ಹಿಡಿದುಕೊಡ್ತಿನಿ ಅಂತಾಳೆ. ಆದರೆ ಈಗ ಚೈನಾ ನಿಜವಾಗಿಯೂ ಚಂದ್ರನನ್ನ ಹಿಡಿಯುವ ಪ್ರಯತ್ನಕ್ಕೆ ಕೈ ಹಾಕಿದೆ! ಅವ್ರು ಚಂದ್ರನ್ನ ಮೇಲೊಂದು ಮಿಲಿಟರಿ ಮಿಷನ್ನ ಶುರುಮಾಡಿದ್ದು, ಆ ಪ್ರಯತ್ನ ಏನಾದ್ರು ಯಶಸ್ವಿಯಾದ್ರೆ ಇಡೀ ಜಗತ್ತಿಗೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಅಡ್ಮಿನಿಸ್ಟ್ರೇಟರ್ Bill Nelson ಬಿಲ್ ನೆಲ್ಸನ್ ಈ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.
ಇಲ್ಲಿ ನೆಲ್ಸನ್ ಈ ಮಾಹಿತಿಯನ್ನ ಹೊರ ಹಾಕೋದಕ್ಕೆ ಕಾರಣ ಆಗಿರೋದು ಏನು? ಚೈನಾ ಈ ಕೆಲಸಕ್ಕೆ ಮಾಡಿಕೊಳ್ತಿರೋ ತಯಾರಿ ಹೇಗಿದೆ? ನಾಸ ಮತು ಭಾರತಗಳು ಸೇರಿ ಚೈನಾದ ಓಟಕ್ಕೆ ಕಡಿವಾಣ ಹಾಕುತ್ವಾ? ರಷ್ಯಾ ಏನಾದ್ರೂ ಚೈನಾದ ಜೊತೆ ಕೈ ಜೋಡಿಸಿದ್ದೇ ಆದ್ರೆ ಗತಿ ಏನು? ಚಂದ್ರನ್ನ ತನ್ನ ಹಿಡಿತಕ್ಕೆ ತಗೆದುಕೊಳ್ಳೋದಕ್ಕೆ ಚೈನಾ ಎಷ್ಟು ಹಣವನ್ನ ಮೀಸಲಿಡ್ತಿದೆ ಅನ್ನೋನ ಕುರಿತಾದ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.
ಚಂದ್ರನನ್ನೇ ‘ಕಬ್ಜಾ’ ಮಾಡಿಕೊಳ್ಳಲು ಮುಂದಾದ ಚೈನಾ..!

What’s your reaction?
Love0
Sad0
Happy0
Sleepy0
Angry0
Dead0
Wink0




Leave a Reply