ಇತ್ತೀಚೆಗೆ ಮಲೆಯಾಳಂ ಸಿನಿಮಾ ತುಂಬಾನೇ ಸದ್ದು ಮಾಡ್ತಿದೆ. ದಶಕಗಳ ಹಿಂದೆ ಪೋಲಿ ಸಿನಿಮಾಗಳಿಗೆ ಫೇಮಸ್ ಆಗಿದ್ದ ಮಲಯಾಳಂ ಚಿತ್ರ ರಂಗ ಇಡೀ ಇಡೀ ದೇಶವನ್ನ ತನ್ನತ್ತ ತಿರುಗಿ ನೋಡುವಂತೆ ಮಾಡ್ತಿದೆ. ಸಾಕಷ್ಟು ಅತ್ಯುತ್ತಮ ಚಿತ್ರಗಳು ತೆರೆ ಕಾಣ್ತಿವೆ. ಅಷ್ಟೇ ಅಲ್ಲದೇ ಈ ವರ್ಷ ಮಲಯಾಳಂ ಚಿತ್ರವೊಂದು ಸಾವಿರ ಕೋಟಿ ಕ್ಲಬ್ಬನ್ನ ಸೇರಿದೆ. ಮತ್ತೆ ಮಲೆಯಾಳಂ ಚಿತ್ರರಂಗ ಸುದ್ದಿಯಾಗಲು ಕಾರಣವಾಗಿದ್ದು ಇತ್ತೀಚೆಗೆ ‘ಮಂಜುಮೆಲ್ ಬಾಯ್ಸ್’ ಅನ್ನೋ ಸಿನಿಮಾ! ಈ ಚಿತ್ರದಲ್ಲಿ ನೈಸರ್ಗಿಕ ಗುಹೆಯೊಂದರಲ್ಲಿ ಕಂದಕಕ್ಕೆ ಬಿದ್ದ ಸ್ನೇಹಿತನನ್ನ ಸಾವಿನದ ದವಡೆಯಿಂದ ಪಾರು ಮಾಡೋದ್ರ ಬಗ್ಗೆ ತೋರಸಲಾಗಿದೆ. ...
ಇಡೀ ಜಗತ್ತು ಅವನನ್ನು ನೆಪೋಲಿಯನ್ ಆಫ್ ಇಂಡಿಯಾ ಅಂತ ಕರೆಯುತ್ತೆ. ಆದ್ರೆ ಅವನು ನೆಪೋಲಿಯನಿಗಿಂತಲೂ ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಅವನು ತಾನು ಮಾಡಿದ ಒಂದೇ ಒಂದು ಯುದ್ಧವನ್ನು ಕೂಡಾ ಸೋತ ಉದಾಹರಣೆಗಳಿಲ್ಲ. ನೂರು ಯುದ್ದಗಳನ್ನು ಗೆದ್ದು ಅಶ್ವಮೇಧಯಾಗವನ್ನ ಮಾಡಿದ್ದ ಅವನನ್ನ ಮತ್ತಿನ್ಯಾರಿಗೋ ಹೋಲಿಸೋದು ಎಷ್ಟು ಸಮಂಜಸ ಅಲ್ವಾ! ಮೌರ್ಯರ ನಂತರ ಹರಿದು ಹಂಚಿ ಹೋಗಿದ್ದ ಭಾರತವನ್ನ ಒಗ್ಗೂಡಿಸಿ ಆಳಿದ ಕೀರ್ತಿ ಅವನಿಗೆ ಸಲ್ಲುತ್ತದೆ. ಗಾಂಧಾರದಿಂದ ಕಂಚಿಯವರೆಗೂ ಸಾಮ್ರಾಜ್ಯವನ್ನ ವಿಸ್ತರಿಸಿದ್ದ ಅವನು ಒಂದೂವರೆ ಸಾವಿರ ವರ್ಷಗಳ ಹಿಂದೆ ಈ ದೇಶದ ಇತಿಹಾಸವನ್ನೇ ಬದಲಿಸಿ ಬಿಟ್ಟಿದ್ದ ಅಂದ್ರೆ ...
ಈ ಜಗತ್ತಿನಲ್ಲಿ ಅತಿ ಪುರಾತನ ನಾಗರೀಕತೆ ಯಾವುದು ಅನ್ನೋದು ಇವತ್ತಿಗೂ ಚರ್ಚೆಯಲ್ಲಿರೋ ವಿಷಯ. ಕೆಲವರು ಈಜಿಪ್ಟಿಯನ್ ನಾಗರೀಕತೆ ಅಂತಂದ್ರೆ ಮತ್ತು ಕೆಲವರು ಮೆಸಪಟೋಮಿಯ ಅಂತಾರೆ. ಆದ್ರೆ ನಮ್ಮ ಸಿಂಧೂ ಹಾಗೂ ಸರಸ್ವತಿ ನದಿಗಳ ನಾಗರೀಕತೆ ಈ ಜಗತ್ತಿನ ಅತಿ ಹಳೆಯ ನಾಗರೀಕತೆ ಅಂತ ಗುರುತಿಸಿಕೊಳ್ತಿದೆ. ಈ ನಾಗರೀಕತೆಗಳಿಗೆ ಸಾವಿರಾರು ವರ್ಷಗಳಷ್ಟು ಹಿಂದಿನ ಪುರಾವೆಗಳು ಸಿಕ್ತಿವೆ ಅಂತ ಸಂಶೋಧಕರು ಹೇಳ್ತಿದ್ದಾರೆ. ಅಲ್ಲದೇ ಈ ಬಗ್ಗೆ ಸಂಶೋಧನೆಗಳೂ ಕೂಡ ನಡೀತಿದ್ದು, ಮುಂದಿನ ದಿನಗಳಲ್ಲಿ ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಲಿದೆ ಅನ್ನೊ ವಿಶ್ವಾಸ ಅವರದ್ದಾಗಿದೆ. ಸಿಂಧು ...
ಭಾರತ ಹಲವಾರು ವೈಜ್ಞಾನಿಕ ವಿಸ್ಮಯಗಳನ್ನು, ವಾಸ್ತುಶಿಲ್ಪದ ಅದ್ಭುತ ನಿರ್ಮಾಣಗಳನ್ನು ಹೊಂದಿದೆ. ಅಂತಹ ಅದ್ಭುತಗಳ ಪೈಕಿ ಒಂದು ದೆಹಲಿಯಲ್ಲಿ ಕುತುಬ್ ಮಿನಾರ್ ಅಂತಹ ಕರೆಸಿಕೊಳ್ಳೋ ವಿಷ್ಣು ಸ್ತಂಭದ ಬಳಿ ಇರುವಂತಹ ಕಬ್ಬಿಣದ ಸ್ತಂಭ. ಆ ಕಬ್ಬಿಣದ ಸ್ತಂಭ ಭಾರತದ ತಂತ್ರಜ್ಞಾನ ಹೇಗಿತ್ತು ಅನ್ನೋದಕ್ಕೆ ಸಾಕ್ಷಿಯಾಗಿ ನಿಂತಿದೆ. ಯಾಕಂದರೆ ಇತಿಹಾಸಕಾರ ಪ್ರಕಾರ ಈ ಸ್ತಂಭ ನಿರ್ಮಾಣ ಆಗಿರೋದು ಮೂರರಿಂದ ನಾಲ್ಕನೇ ಶತಮಾನದ ಕಾಲದಲ್ಲಿ! ಈ ಕಬ್ಬಿಣದ ಸ್ತಂಭವನ್ನು ಗುಪ್ತರ ದೊರೆ ಎರಡನೇ ಚಂದ್ರಗುಪ್ತ ನಿರ್ಮಿಸಿದ್ದ. ಮೊದಲಿಗೆ ಇದು ಮಧ್ಯ ಪ್ರದೇಶದ ವಿಧಿಶಾ ದಲ್ಲಿರೋ ಉದಯಗಿರಿ ಗುಹೆಗಳ ಬಳಿಯಲ್ಲಿ ...
ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಎಡಕ್ಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ತೋರಿಸಲಾದ ಎಡಕಲ್ಲು ಗುಡ್ಡ ಮತ್ತು ಅದರ ಮೇಲಿನ ಗುಹೆ ನೆನಪಿರಬಹುದು. ನಿಮ್ಮಲ್ಲಿ ಸಾಕಷ್ಟು ಜನ ಈ ವೈನಾಡಿನ ಈ ಸುಂದರ ತಾಣಕ್ಕೆ ಹೋಗಿ ಬಂದಿರಲೂ ಬಹುದು. ಆ ಎಡಕ್ಕಲ್ಲು ಗುಡ್ಡ ಕೇವಲ ಒಂದು ಪಿಕ್ ನಿಕ್ ಸ್ಪಾಟ್ ಅಲ್ಲ! ಬದಲಾಗಿ ಅದು ಭಾರತದ ಇತಿಹಾಸಕ್ಕೆ ಒಂದು ಸಾಕ್ಷಿ! ಭಾರತದಲ್ಲಿ ಶಿಲಾಯುಗದ ಕಾಲದಿಂದಲೂ ಕೂಡಾ ಜನವಸತಿ ಇತ್ತು ಅನ್ನೋದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ವೆ.. ಅದರಲ್ಲೂ ದಕ್ಷಿಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಈ ಬಗ್ಗೆ ...
ಅವಳನ್ನ ವರ್ಣಿಸೋದಾದ್ರು ಹೇಗೆ. ಆಕೆ ಎರಡು ಸಾವಿರ ವರ್ಷಗಳ ಹಿಂದಿನ ಕಥೆಯ ನಾಯಕಿ. ರೂಪದಲ್ಲಿ ಜಗದೇಕ ಸುಂದರಿ. ಅವಳಿಲ್ಲದೇ ಹೋದ್ರೆ ಆ ಇತಿಹಾಸ ಅಷ್ಟೊಂದು ರೋಚಕವಾಗಿ ಇರುತ್ತಿರಲಿಲ್ಲ. ಯುದ್ಧ, ದ್ವೇಷಗಳ ನಡುವೆ ಮರುಭೂಮಿಯಲ್ಲಿ ಓಯಸಿಸ್ ಇದ್ದ ಹಾಗೆ ಆಕೆಯ ಪರಿಸ್ಥಿತಿ ಅಲ್ಲಿ ಕಾಣಿಸುಕೊಳ್ಳುತ್ತೆ. ಸಾಮ್ರಾಜ್ಯ ವಿಸ್ತರಣೆಯ ಕಾಲದಲ್ಲಿ ಅವಳ ಕಥೆ ಅದ್ಭುತವಾಗಿ ಗೋಚರಿಸುತ್ತೆ. ಹಾಗೆನೆ ಅವಳ ಅಂತ್ಯ ಅಷ್ಟೇ ಭೀಕರವಾಗಿ ಕೂಡ ಇತ್ತು ಅನ್ನೋದನ್ನ ಈ ಜಗತ್ತು ಮರೆತೇ ಬಿಟ್ಟಿದೆ. ಅವತ್ತಿನ ಕಾಲದಲ್ಲಿ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ಸಾಮ್ರಾಜ್ಯ ಒಂದರ ಅಧಿನಾಯಕಿ. ...
ಅದೊಂದು ಪ್ರೀ ಹಿಸ್ಟಾರಿಕ್ ಆರ್ಕಿಯಾಲಜಿಕಲ್ ಸೈಟ್. ಅಲ್ಲಿ ಸಂಶೋಧನೆ ನಡೆಸ್ತಿದ್ದ ವಿಜ್ಞಾನಿಗಳಿಗೆ ಮಣ್ಣಿನ ಮಡಿಕೆಗಳ ಮಧ್ಯದಲ್ಲಿ ಒಂದು ವೃತ್ತಾಕಾರದ ವಸ್ತು ಸಿಕ್ಕಿತ್ತು. ಆ ವಸ್ತು ಮಣ್ಣಿನ ಮೇಲ್ಮೈನ ಹೊಂದಿತ್ತು. ಹೀಗಾಗಿ ಮೊದಲಿಗೆ ಅದನ್ನ ಮಣ್ಣಿನಿಂದ ಮಾಡಿದ್ದ ವಸ್ತು ಅಂತ ಅಂದುಕೊಳ್ಳಲಾಯ್ತು. ಹೀಗಿರೋವಾಗಲೇ ಅದರ ಮಧ್ಯ ಭಾಗದಲ್ಲಿ ಬೆರಳುಗಳಿಂದ ಪ್ರೆಸ್ ಮಾಡಿರೋ ರೀತಿಯ ಗುರುತು ಪತ್ತೆ ಆಯ್ತು. ಅಷ್ಟೇ ಅಲ್ಲದೇ ಆ ವೃತ್ತಾಕಾರದ ವಸ್ತು ಒಡೆದು ಹೋಯ್ತು. ಅದು ಎರಡು ಮೂರು ಭಾಗಗಳಾಯ್ತು. ಅಲ್ಲಿವರೆಗೂ ಅದೊಂದು ಮಣ್ಣಿನ ಆಕೃತಿ ಅಂದುಕೊಳ್ತಿದ್ದ ಸಂಶೋಧಕರಿಗೆ ಆ ಬಳಿಕ ಅದು ...
ರ್ನಾಟಕದ ಇತಿಹಾಸವನ್ನು ಓದ್ತಾ ಹೋದ ಹಾಗೆ ಅನೇಕ ರೋಮಾಂಚಕಾರಿ ಸಂಗತಿಗಳು ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತೆ. ಅದ್ರಲ್ಲೂ ಈ ಕಪ್ಪು ಮಣ್ಣಿನ ಚರಿತ್ರೆಯನ್ನ ನೆನಪು ಮಾಡ್ಕೊಳ್ಳೋವಾಗ ಅವನೊಬ್ಬನನ್ನ ಮರೆಯೋ ಹಾಗೇ ಇಲ್ಲಾ. ಕನ್ನಡಿಗರಿಗಾಗಿ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಿದ ಮಹಾವೀರ ಅವನು. ಇವತ್ತಿಗೂ ಮಾಸದ ಅದ್ಭುತ ಕಲಾಕೃತಿಗಳನ್ನ ನಮಗಾಗಿ ಬಿಟ್ಟು ಹೋಗಿರೋ ಆ ವೀರಾಗ್ರಣಿ ಕರ್ನಾಟಕ ಹಾಗೇ ದಕ್ಷಿಣ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಅದು ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯ. ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ...
ಇಂದು ಭಾರತಕ್ಕೆ, ಭಾರತೀಯರಿಗೆ ಮರೆಯಲಾರದ ದಿನ. ನಂಬಿಕೆ ದ್ರೋಹಕ್ಕೆ ಗುಂಡಿನ ಉತ್ತರವನ್ನ ನೀಡಿ, ದೇಶದ ಸಾರ್ವಭೌಮತೆಯನ್ನ ಎತ್ತಿ ಹಿಡಿದ ಯೋಧರ ಶೌರ್ಯಕ್ಕೆ ಫಲ ಸಿಕ್ಕ ದಿನ. ದಶಕಗಳ ದುಶ್ಮನಿಯನ್ನ ಮರೆತು ಸ್ನೇಹದ ಹಸ್ತ ಚಾಚಿದ್ದ ಭಾರತಕ್ಕೆ, ಪಾಕಿಸ್ತಾನ ನಂಬಿಕೆ ದ್ರೋಹ ಮಾಡಿತ್ತು. ಒಪ್ಪಂದಗಳನ್ನ ಮುರಿದ ಪಾಕ್ ಸೇನೆ, ಕಾರ್ಗಿಲ್ ಅನ್ನ ಏರಿ ಅಲ್ಲಿ ಠಿಕಾಣಿ ಹೂಡಿತ್ತು. ಮಳೆ ಚಳಿಯೆನ್ನದೇ ಕಾರ್ಯಾಚರಣೆಗೆ ಇಳಿದ ಭಾರತೀಯರ ಯೋಧರು, ಶತ್ರುಗಳ ನಡು ಮುರಿದು, ವಿಜಯಪತಾಕೆಯನ್ನ ಹಾರಿಸಿ ಇಂದಿಗೆ 24 ವರ್ಷಗಳೇ ಕಳೆದು ಹೋದ್ವು. ಮೇ 3, 1999ರಂದು ಶುರುವಾದ ...
ಸ್ನೇಹಿತರೆ.., ವಿಜ್ಞಾನಕ್ಕೆ ಸವಾಲೆಸಗೋ ಹಲವಾರು ಘಟನೆಗಳು ನಮ್ಮ ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಬಂದಿದೆ, ಈಗಲೂ ನಡೆಯುತ್ತಲೇ ಇದೆ. ಬಹಳಷ್ಟು ಸಂದರ್ಭದಲ್ಲಿ ಮಾನವ ನಿರ್ಮಿತ ಎಷ್ಟೋ ವಸ್ತುಗಳು ಇಡೀ ಜಗತ್ತನ್ನೇ ಅಚ್ಚರಿಗೊಳ್ಳುವಂತೆ ಮಾಡಿವೆ. ನಮ್ಮ ಪುಣ್ಯನೆಲ ಭಾರತದಲ್ಲಿ ಅಂತಹ ಸಹಸ್ರಾರು ಅಚ್ಚರಿಗಳಿರುವುದು ನಿಜಕ್ಕೂ ನಮ್ಮ ಪಾಲಿನ ಹೆಮ್ಮೆಯ ಸಂಗತಿ, ನಾವು ಈ ಸಂಚಿಕೆಯಲ್ಲಿ ಅದೊಂದು ಅರಮನೆಯಲ್ಲಿ ಸಂರಕ್ಷಿಸಿ ಇಡಲಾಗಿರೋ ಕನ್ನಡದ ಮಹರಾಜನ ಕೈ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ೧೮ ನೇ ಶತಮಾನದ ಆರಂಭ ಕಾಲದಲ್ಲಿ ಬ್ರಿಟೀಷ್ ದೌರ್ಜನ್ಯದ ವಿರುದ್ದ ಸಿಡಿದೆದ್ದ ರಾಜ ಆತ. ಪುಣ್ಯಕ್ಷೇತ್ರ ತಿರುಪತಿಯ ...












