ಕಾರ್ಗಿಲ್‌ ವಿಜಯ್‌ ದಿವಸ್‌

ಇಂದು ಭಾರತಕ್ಕೆ, ಭಾರತೀಯರಿಗೆ ಮರೆಯಲಾರದ ದಿನ. ನಂಬಿಕೆ ದ್ರೋಹಕ್ಕೆ ಗುಂಡಿನ ಉತ್ತರವನ್ನ ನೀಡಿ, ದೇಶದ ಸಾರ್ವಭೌಮತೆಯನ್ನ ಎತ್ತಿ ಹಿಡಿದ ಯೋಧರ ಶೌರ್ಯಕ್ಕೆ ಫಲ ಸಿಕ್ಕ ದಿನ.
ದಶಕಗಳ ದುಶ್ಮನಿಯನ್ನ ಮರೆತು ಸ್ನೇಹದ ಹಸ್ತ ಚಾಚಿದ್ದ ಭಾರತಕ್ಕೆ, ಪಾಕಿಸ್ತಾನ ನಂಬಿಕೆ ದ್ರೋಹ ಮಾಡಿತ್ತು. ಒಪ್ಪಂದಗಳನ್ನ ಮುರಿದ ಪಾಕ್ ಸೇನೆ, ಕಾರ್ಗಿಲ್ ಅನ್ನ ಏರಿ ಅಲ್ಲಿ ಠಿಕಾಣಿ ಹೂಡಿತ್ತು. ಮಳೆ ಚಳಿಯೆನ್ನದೇ ಕಾರ್ಯಾಚರಣೆಗೆ ಇಳಿದ ಭಾರತೀಯರ ಯೋಧರು, ಶತ್ರುಗಳ ನಡು ಮುರಿದು, ವಿಜಯಪತಾಕೆಯನ್ನ ಹಾರಿಸಿ ಇಂದಿಗೆ 24 ವರ್ಷಗಳೇ ಕಳೆದು ಹೋದ್ವು.
ಮೇ 3, 1999ರಂದು ಶುರುವಾದ ಕಾರ್ಗಿಲ್ ಕದನದ ಚಟುವಟಿಕೆ, ಜುಲೈ 26, 1999ರಂದು ಪಾಕಿಗಳನ್ನ ಸಂಪೂರ್ಣವಾಗಿ ಓಡಿಸಿ ವಿಜಯ ಧ್ವಜ ಹಾರಿಸುವುದರೊಂದಿಗೆ ಮುಕ್ತಾಯವಾಯ್ತು. ಬರೋಬ್ಬರಿ 24 ವರ್ಷಗಳ ಹಿಂದೆ ನಡೆದ ಆ ಘಟನೆ ಇಂದಿಗೂ ಹಚ್ಚ ಹಸಿರು. ಆ ಎಂಭತ್ನಾಲ್ಕು ದಿನಗಳ ಕಾಲ ಭಾರತ ಅನುಭವಿಸಿದ ವೇದನೆ, ಬಲಿದಾನ ಮಾಡಿದ ವೀರ ಯೋಧರ ಕುಟುಂಬಗಳ ಆಕ್ರಂದನ ನೋವು ಇವನ್ನೆಲ್ಲಾ ಯಾವತ್ತಿಗಾದ್ರೂ ಈ ದೇಶ ಮರೆಯೋದಕ್ಕೆ ಸಾಧ್ಯಾನಾ?
ಅಂದು ಕಾರ್ಗಿಲ್ನಲ್ಲಿ ಏನು ನಡೀತು? ಪಾಕಿಸ್ತಾನದ ನಂಬಿಕೆ ದ್ರೋಹದ ಹಿಂದಿರುವ ರೂವಾರಿ ಯಾರು? ಮೋಸಗಾರರಿಗೆ ಭಾರತೀಯ ಯೋಧರು ಕೊಟ್ಟ ಉತ್ತರ ಹೇಗಿತ್ತು? ಅಂದು ಆಪರೇಶನ್ ವಿಜಯ್ ಹೇಗೆ ನಡೀತು ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನ ಕ್ಲಿಕ್ ಮಾಡಿ.