ಕಳೆದ ಆಗಸ್ಟ್ ತಿಂಗಳಿಗೂ ಮೊದಲು ಬಾಂಗ್ಲಾ ದೇಶದಲ್ಲಿ ಅಲ್ಲಿನ ಪ್ರಧಾಣಿ ಷೇಕ್ ಹಸೀನಾ ವಿರುದ್ದ ದೊಡ್ಡ ಮಟ್ಟದ ಪ್ರತಿಭಾನೆಗಳಾದ್ವು. ಆ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳ ಹೆಸರಿನ ಗೂಂಡಾಗಳಿದ್ರು. ಮತೀಯ ಸಂಘಟನೆಗಳಿದ್ವು. ಉಗ್ರರಿದ್ರು. ಪಾಕಿಸ್ತಾನದ ಬೆಂಬಲಿಗರಿದ್ರು. ಅಮೆರಿಕಾದ ಹಣ ಇತ್ತು.. ಅದೊಂಥರಾ ಅಲ್ಲಿನ ಚುನಾಯಿತ ಸರ್ಕಾರವನ್ನ ಪಪದಚ್ಯುತ ಗೊಳಿಸೋದಕ್ಕೆ ಶುರುವಾಗಿದ್ದ ಅಸಂವಿಧಾನಿಕ ಪ್ರತಿಭಟನೆ. ಅದನ್ನ ನಿಗ್ರಹಿಸೋದಕ್ಕೆ ಶೇಖ್ ಹಸೀನಾ ಅಲ್ಲಿನ ಪೊಲೀಸರಿಗೆ ಆದೇಶ ಕೊಟ್ರು ಆ ಸಂದರ್ಭದಲ್ಲಿ ಒಂದಷ್ಟು ಸಾವು ನೋವೂಗಳೂ ಸಂಭವಿಸಿದ್ವು. ಮುಂದೆ ಹಸೀನಾ ಸರ್ಕಾರ ಪತನವಾಯ್ತು. ಈಗ ಹಸೀನಾ ವಿರುದ್ದ ಅಲ್ಲಿ ನರಹತ್ಯೆಯ ಪ್ರಕರಣ ...

ಲೋಕಸಭಾ ಚುನಾವಣೆಗಳ ಭಹಿರಂಗ ಪ್ರಚಾರ ಅಂತ್ಯ ಆದ ನಂತರ ಧ್ಯಾನಕ್ಕೆ ಹೋಗುವ ಪರಿಪಾಠವನ್ನ ಬೆಳೆಸಿಕೊಂಡಿರೋ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೇ 30 ರಿಂದ ಜೂನ್ 1ರ ವರೆಗೂ ಅವ್ರು ಅಲ್ಲೇ ತಂಗಲಿದ್ದು, ಮೂರು ದಿನಗಳ ಕಾಲ ಧ್ಯಾನಸ್ಥರಾಗಿರುತ್ತಾರೆ. 2019ರ ಲೋಕಸಭಾ ಚುನಾವಣೆಗಳು ಪೂರ್ಣಗೊಂಡ ಸಂದರ್ಭದಲ್ಲಿ ಕೇದಾರನಾಥಕ್ಕೆ ಭೇಟಿಕೊಟ್ಟಿದ್ದ ಮೋದಿ, ಅಲ್ಲಿನ ಗುಹೆಯೊಂದರಲ್ಲಿ ಧ್ಯಾನಕ್ಕೆ ಕೂತಿದ್ರು. ಅಲ್ಲವತ್ತು ಅವ್ರು ಧ್ಯಾನಕ್ಕೆ ಕೂತಿದ್ದ ವಿಷಯ, ಅವುಗಳ ಫೊಟೋಗಳು ಹೊರಗೆ ಬಂದಿದ್ದು, ಆ ಧ್ಯಾನ ಗುಹೆಯಲ್ಲಿ ಮೊಬೈಲ್ ...

ಮಾನವ ಜಗತ್ತಿನ ಮಹಾ ಅದ್ಭುತಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳೋದು ವಿಮಾನಗಳು. ಸಹಸ್ರಾರು ಕಿಲೋಮೀಟರ್ಗಳಷ್ಟು ದೂರವನ್ನು ಕೆಲವೇ ಗಂಟೆಗಳಲ್ಲಿ ತಲುಪೋ ಈ ವಿಮಾನಗಳು ಇವತ್ತು ಜಗತ್ತನ್ನು ತುಂಬಾ ಹತ್ತಿರಕ್ಕೆ ತಂದು ಬಿಟ್ಟಿವೆ. ಇಂತಹ ವಿಮಾನಗಳು ಎಂತಹದ್ದೇ ಪರ್ವತಗಳನ್ನು ಕೂಡಾ ದಾಟುತ್ತವೆ. ಮಹಾಸಾಗರಗಳನ್ನು ಕ್ರಾಸ್ ಮಾಡುತ್ತವೆ. ಹೀಗಾಗಿ ಅವುಗಳ ಶಕ್ತಿಗೆ ತಲೆದೂಗದವರೇ ಇಲ್ಲ. ಹೀಗಿದ್ದರೂ ಕೂಡಾ ಕೆಲವೊಮ್ಮೆ ವಿಮಾನಗಳು ಹಾಗೂ ಅವುಗಳ ಪೈಲೆಟ್ಗಳು ತುಂಬಾನೇ ವಿಚಿತ್ರವಾಗಿ ವರ್ತಿಸ್ತಾರೆ. ನೇರವಾಗಿ ಹೋದರೆ ಕೆಲವೇ ನಿಮಿಷಗಳಲ್ಲಿ ಸೇರುವ ಜಾಗಗಳನ್ನು ಕೂಡಾ ಸುತ್ತಿ ಬಳಸಿ ಗಂಟೆಗಳ ಕಾಲ ಆಕಾಶದಲ್ಲೇ ರೌಂಡ್ ಹೊಡೆಸಿ ...

ಮಾನವರ ಬೇಟೆಯ ಹುಚ್ಚಿಗೆ ಅಪರೂಪದಲ್ಲಿ ಅಪರೂಪ ಅನ್ನಿಸಿಕೊಂಡಿರೋ ಅನೇಕ ವನ್ಯಜೀವ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ನೀಲಗಿರಿ ಥಾರ್ಗಳು, ಏಷಿಯಾಟಿಕ್ ಲಯನ್ಸ್, ಸ್ಲೆಂಡರ್ ಲೋರೀಸ್, ಸಿಂಹಬಾಲದ ಕೋತಿಗಳು, ಬೆಂಗಾಲ್ ಟೈಗರ್ಸ್ ಸೇರಿದಂತೆ ಹಲವು ಅಪೂರ್ವ ಜೀವಿಗಳು ಬೆರಳೆಣಿಕೆಯಷ್ಟೇ ಉಳಿದುಕೊಂಡಿವೆ. ಅಳಿದುಳಿದ ಈ ಸಂಕುಲವನ್ನು ಉಳಿಸಿಕೊಳ್ಳೋದಕ್ಕೆ ಸರ್ಕಾರ ನಾನಾ ಯೋಜನೆಯನ್ನ ಹಮ್ಮಿಕೊಂಡಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಲಯನ್, ಪ್ರಾಜೆಕ್ಟ್ ಕ್ರೊಕೊಡೈಲ್ ಹೀಗೆ ಕಾಲಕ್ಕನುಗುಣವಾಗಿ ನಾನಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಾ ಇದೆ. ಇಂತಹದ್ದೇ ಒಂದು ಅಳಿವಿನ ಅಂಚಿಗೆ ತಲುಪಿರುವ ಭಾರತೀಯ ಮೂಲದ ಅಪರೂಪದ ತಳಿಯ ಸಂರಕ್ಷಣೆಗಾಗಿ ಅರಣ್ಯ ...

ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ರಾಜ್ಯ ಹಾಗೂ ದೇಶದ ಜನತೆಗೆ ಈಗೊಂದಷ್ಟು ಸಮಾಧಾನ ಸಿಕ್ತಿದೆ. ಕಳೆದ ಒಂದು ವಾರದಿಂದ ವರುಣ ಕೂಡಾ ಅಬ್ಬರಿಸ್ತಿದ್ದು, ಇಳೆ ತಂಪಾಗುವಂತೆ ಮಾಡಿದ್ದಾನೆ. ಇನ್ನೇನು ಹಸಿರೆಲ್ಲ ಹೋಯ್ತು ಅನ್ನೋ ಹೊತ್ತಿಗೆ ಮಳೆ ಬಿದ್ದಿರೋದ್ರಿಂದ ಭೂಮಿಯಲ್ಲಿ ಹಸಿರು ಚಿಗುರೋದಕ್ಕೆ ಶುರುಮಾಡಿದೆ. ಕಾಡುಗಳಲ್ಲಿನ ಕಾಳ್ಗಿಚ್ಚು ಕಡಿಮೆ ಆಗಿದೆ. ದನಕರುಗಳಿಗೆ ನೀರು ಸಿಕ್ತಿದೆ. ಇಷ್ಟಾದ್ರು ಇನ್ನು ಕೆಲವು ಕಡೆಗಳಲ್ಲಿ ಮಳೆ ಬೀಳದೇ ಇರೋದು ಆ ಭಾಗದ ಜನರಲ್ಲಿ ಆತಂಕವನ್ನ ಉಂಟು ಮಾಡ್ತಾ ಇದೆ. ಈ ಹೊತ್ತಲ್ಲೇ ಭಾರತದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆ ಆಗುತ್ತೆ ...

ನಮ್ಮ ಪುರಾಣಗಳಲ್ಲಿ ಏಳು ನಗರಿಗಳನ್ನ ಅತ್ಯಂತ ಪುರಾತನ ನಗರಿಗಳನ್ನಾಗಿ ಗುರುತಿಸಲಾಗಿದೆ. “ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ| ಪುರೀ ಧ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ||” ಉತ್ತರಪ್ರದೇಶದಲ್ಲಿರೋ ಅಯೋಧ್ಯೆ, ಮಥುರಾ ಹಾಗೂ ಕಾಶಿ, ಉತ್ತರಾಕಾಂಡ್ನಲ್ಲಿರೋ ಹರಿದ್ವಾರ, ತಮಿಳುನಾಡಿನ ಕಾಂಚಿ , ಮಧ್ಯಪ್ರದೇಶದಲ್ಲಿರೋ ಅವಂತಿಕಾ ಅಂದ್ರೆ ಇಂದಿನ ಉಜ್ಜೈನಿ, ಗುಜರಾತ್ನ ದ್ವಾರಾವತಿ ಅಂದ್ರೆ ದ್ವಾರಕೆಗಳನ್ನ ಸಪ್ತ ಪುರಿಗಳು, ಸಪ್ತ ನಗರಿಗಳು ಅಂದ್ರೆ ಅತ್ಯಂತ ಪ್ರಮುಖವಾದ ಅತ್ಯಂತ ಹಳೆಯ ನಗರಗಳು ಅಂತ ಗುರುತಿಸಲಾಗುತ್ತೆ. ಈ ಏಳೂ ನಗರಗಳು ಪುರಾಣಗಳಲ್ಲಿ ಮಾತ್ರವಲ್ಲದೇ ಐತಿಹಾಸಿಕವಾಗಿಯೂ ತನ್ನದೇ ಆದ ಮಹತ್ವವನ್ನ ಹೊಂದಿವೆ. ...

ರಸ್ತೆಗಳನ್ನು ದೇಶದ ನರನಾಡಿಗಳು ಅಂತ ಕರೆಯಲಾಗುತ್ತೆ. ಆದ್ರೆ ಅಂತಹ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿಗಳು ಅಥವಾ ಪಾಟ್ ಹೋಲ್ಗಳು ಸಾರ್ವಜನಿಕರ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತವೆ. ಅದು ಯಾವುದೇ ರಸ್ತೆ ಆಗಿರಬಹುದು, ಅಲ್ಲೊಂದು ಗುಂಡಿ ಬಿತ್ತು ಅಂದ್ರೆ ಅದನ್ನ ಗಮನಿಸದೇ ಹೋದ್ರೆ ಅಲ್ಲೊಂದಷ್ಟು ಸಾವು ನೋವು ಕಟ್ಟಿಟ್ಟ ಬುತ್ತಿ! ಈ ಪಾಟ್ ಹೋಲ್ಗಳ ಕಾರಣದಿಂದ 2022ರಲ್ಲಿ ಸರಿ ಸುಮಾರು 4446 ಅಫಘಾತಗಳು ಸಂಭವಿಸಿವೆ. ಅದರಲ್ಲಿ 1856 ಮಂದಿ ಸಾವನ್ನಪ್ಪಿದ್ರೆ, ಇನ್ನುಳಿದ ನಾಗರೀಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಕೇವಲ ಉದಾಹರಣೆ ಅಷ್ಟೆ! ಇಂತಹ ಅದೆಷ್ಟೊ ಘಟನೆಗಳು ಗೊತ್ತೂ ಆಗದಂತೆ ...

ಕೇರಳದ ತಿರುವನಂತಪುರಂನಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ತಿಳಿಯದವರೇ ಕಡಿಮೆ. ಲಕ್ಷಾಂತರ ಕೋಟಿ ಚಿನ್ನಾಭರಣಗಳನ್ನ ಹೊಂದಿರೋ ಅನಂತ ಪದ್ಮನಾಭ ಸ್ವಾಮಿ, ತಿರುಪತಿಯ ತಿಮ್ಮಪ್ಪನನ್ನು ಹಿಂದಿಕ್ಕಿದ್ದ ದೇವರಾಗಿದ್ದ. ಹೀಗಾಗೀ ಆ ದೇವಾಲಯಕ್ಕೆ ಹೆಚ್ಚಿನ ಭದ್ರತೆಯನ್ನ ಕೊಡಲಾಗಿತ್ತು. ಎಲ್ಲಿ ನೋಡಿದರೂ ಸಿಸಿ ಕೆಮೆರಾಗಳು, ಸಿಂಪಲ್ಲಾಗಿ ಪಂಚೆಯುಟ್ಟು ದೇವಾಲಯದ ಒಳಗೆ ಕಾವಲು ಕಾಯ್ತಿದ್ದ ಮಿಲಿಟರಿ; ಯಾವ ಅಧಿಕಾರಿಯ ಸೊಂಟದಲ್ಲಿ ನೋಡಿದ್ರು ಅತ್ಯಾಧುನಿಕ ಆಯುಧಗಳು! ಇದು ಅನಂತ ಪದ್ಮನಾಭನ ದೇವಾಲಯದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯಗಳು. ಆ ದೇವಾಲಯನ್ನು ಸಂಪೂರ್ಣವಾಗಿ ಮಿಟಲಿರಿ ಆವರಿಸಿಕೊಂಡು ಬಿಟ್ಟಿದೆ. ಅದಕ್ಕೆ ಕಾರಣ ಅಲ್ಲಿರೋ ...

ಚಪ್ಪರವನ್ನ ಅಪ್ಪಿಕೊಂಡಿರುವ ಈ ಸೊಪ್ಪು ಬಹು ಉಪಯೋಗಿ ಹಸಿರು ತರಕಾರಿ. ಅಷ್ಟೇ ಅಲ್ಲ ಹಲವು ಸಮಸ್ಯೆಗಳಿಗೆ ಮನೆಮದ್ದು ಕೂಡಾ ಹೌದು. ಈ ಸೊಪ್ಪು ತರಕಾರಿಯ ಮದ್ದಿನ ಗುಣಗಳ ಬಗ್ಗೆ ಅದೆಷ್ಟು ಮಂದಿಗೆ ತಿಳಿದಿದೆ ಗೊತ್ತಿಲ್ಲ! ಆದ್ರೆ ತರಕಾರಿಯಾಗಿ ಇದು ಕರಾವಳಿ ಭಾಗದಲ್ಲಿ ಸಿಕ್ಕಾಪಟ್ಟೆ ಫೇಮಸ್. ಅದ್ರಲ್ಲೂ ಇದ್ರ ಖಾದ್ಯಗಳಂತೂ ಬಾಯಲ್ಲಿ ನೀರುರಿಸುತ್ವೆ. ಆ ಸೊಪ್ಪು ತರಕಾರಿಯ ಹೆಸರು ಬಸಳೆ. ಈ ಬಸಳೆಯ ಸೊಪ್ಪು ಹಾಗೂ ದಂಟನ್ನ ನಾನಾ ಖಾದ್ಯಗಳಿಗೆ, ಪದಾರ್ಥಗಳ ತಯಾರಿಗೆ ಬಳಸಲಾಗುತ್ತೆ. ಪಲ್ಯ ಮಾಡ್ಬಹುದು, ತೊವ್ವೆ, ರಸಂಗಳನ್ನ ಮಾಡಬಹುದು, ಹೆಸರುಕಾಳು ಅಥವಾ ಹಲಸಿನ ...

ಇಡೀ ಜಗತ್ತು ಅವನನ್ನು ನೆಪೋಲಿಯನ್ ಆಫ್ ಇಂಡಿಯಾ ಅಂತ ಕರೆಯುತ್ತೆ. ಆದ್ರೆ ಅವನು ನೆಪೋಲಿಯನಿಗಿಂತಲೂ ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಅವನು ತಾನು ಮಾಡಿದ ಒಂದೇ ಒಂದು ಯುದ್ಧವನ್ನು ಕೂಡಾ ಸೋತ ಉದಾಹರಣೆಗಳಿಲ್ಲ. ನೂರು ಯುದ್ದಗಳನ್ನು ಗೆದ್ದು ಅಶ್ವಮೇಧಯಾಗವನ್ನ ಮಾಡಿದ್ದ ಅವನನ್ನ ಮತ್ತಿನ್ಯಾರಿಗೋ ಹೋಲಿಸೋದು ಎಷ್ಟು ಸಮಂಜಸ ಅಲ್ವಾ! ಮೌರ್ಯರ ನಂತರ ಹರಿದು ಹಂಚಿ ಹೋಗಿದ್ದ ಭಾರತವನ್ನ ಒಗ್ಗೂಡಿಸಿ ಆಳಿದ ಕೀರ್ತಿ ಅವನಿಗೆ ಸಲ್ಲುತ್ತದೆ. ಗಾಂಧಾರದಿಂದ ಕಂಚಿಯವರೆಗೂ ಸಾಮ್ರಾಜ್ಯವನ್ನ ವಿಸ್ತರಿಸಿದ್ದ ಅವನು ಒಂದೂವರೆ ಸಾವಿರ ವರ್ಷಗಳ ಹಿಂದೆ ಈ ದೇಶದ ಇತಿಹಾಸವನ್ನೇ ಬದಲಿಸಿ ಬಿಟ್ಟಿದ್ದ ಅಂದ್ರೆ ...