ಮರಳುಗಾಡಿನ ಆ ಜಗದೇಕ ಸುಂದರಿ ಸಮಾಧಿ ಎಲ್ಲಿದೆ ಗೊತ್ತಾ?

ಅವಳನ್ನ ವರ್ಣಿಸೋದಾದ್ರು ಹೇಗೆ. ಆಕೆ ಎರಡು ಸಾವಿರ ವರ್ಷಗಳ ಹಿಂದಿನ ಕಥೆಯ ನಾಯಕಿ. ರೂಪದಲ್ಲಿ ಜಗದೇಕ ಸುಂದರಿ. ಅವಳಿಲ್ಲದೇ ಹೋದ್ರೆ ಆ ಇತಿಹಾಸ ಅಷ್ಟೊಂದು ರೋಚಕವಾಗಿ ಇರುತ್ತಿರಲಿಲ್ಲ. ಯುದ್ಧ, ದ್ವೇಷಗಳ ನಡುವೆ ಮರುಭೂಮಿಯಲ್ಲಿ ಓಯಸಿಸ್ ಇದ್ದ ಹಾಗೆ ಆಕೆಯ ಪರಿಸ್ಥಿತಿ ಅಲ್ಲಿ ಕಾಣಿಸುಕೊಳ್ಳುತ್ತೆ. ಸಾಮ್ರಾಜ್ಯ ವಿಸ್ತರಣೆಯ ಕಾಲದಲ್ಲಿ ಅವಳ ಕಥೆ ಅದ್ಭುತವಾಗಿ ಗೋಚರಿಸುತ್ತೆ. ಹಾಗೆನೆ ಅವಳ ಅಂತ್ಯ ಅಷ್ಟೇ ಭೀಕರವಾಗಿ ಕೂಡ ಇತ್ತು ಅನ್ನೋದನ್ನ ಈ ಜಗತ್ತು ಮರೆತೇ ಬಿಟ್ಟಿದೆ.
ಅವತ್ತಿನ ಕಾಲದಲ್ಲಿ ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ಸಾಮ್ರಾಜ್ಯ ಒಂದರ ಅಧಿನಾಯಕಿ. ಅವಳ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಕೈ ತಪ್ಪಿ ಹೋಗಿದ್ದ ತನ್ನ ಸಾಮ್ರಾಜ್ಯವನ್ನ, ತನ್ನ ಸೌಂದರ್ಯವನ್ನೇ ಮುಂದಿಟ್ಟುಕೊಂಡು ಉಳಿಸಿಕೊಂಡವಳನ್ನು ಬುದ್ದಿವಂತೆ ಅನ್ನಬೇಕಾ, ಕುತಂತ್ರಿ ಅನ್ನಬೇಕಾ ಗೊತ್ತಾಗೋದೇ ಇಲ್ಲಾ! ಅಂತಹ ಚೆಲುವಿನ ಗಣಿಯ ಬಾಳಲ್ಲಿ ನಡೆದದ್ದಲ್ಲೆವು ಅಚಾನಕ್ಕಾದ ಘಟನೆಗಳೇ! ಅವಳು ಸಾಮ್ರಾಜ್ಯಕ್ಕಾಗಿ ತನ್ನ ತಮ್ಮನನ್ನೇ ಮದುವೆಯಾಗ ಬೇಕಾಗಿ ಬಂದಿತ್ತು!
ಸಾಮ್ರಾಜ್ಯ ಉಳಿಸಿಕೊಳ್ಳೋದಕ್ಕಾಗಿ ಹೂಡಿದ ತಂತ್ರ ಅವಳನ್ನ ಸಾಮ್ರಾಟನೊಬ್ಬನ ಮನದರಸಿಯನ್ನಾಗಿ ಮಾಡಿತ್ತು. ಆದಾದ ನಂತ್ರ ಆ ಸಾಮ್ರಾಟನ ಸಾವಿನ ಬಳಿಕ ಅವಳ ಮೇಲೆ ಮತ್ತೊಬ್ಬನ ಕಣ್ಣು ಬಿತ್ತು. ಅವಳು ಅದನ್ನೂ ಸ್ವೀಕರಿಸಿದ್ಲು. ಕಡೆಗೆ ಮಗನ ಸಮಾನನಾದವನೇ ಅವಳನ್ನ ಸೋಲಿಸಿ ಸೆರೆ ಹಿಡಿಯೋದಕ್ಕೆ ಪ್ರಯತ್ನ ಪಟ್ಟ ಅನ್ನೋ ಕಾರಣಕ್ಕಾಗಿ ಹಾವುಗಳಿಂದ ಕಚ್ಚಿಸಿಕೊಂಡು ಸಾಯಬೇಕಾದ ಪರಿಸ್ಥಿತಿ ಅವಳಿಗೆ ಎದುರಾಯಿತು. ಹೀಗೆ ಚಿತ್ರ ವಿಚಿತ್ರ ಕಥೆಗಳು ಕೇಳಿ ಬರೋ ಆವಳ ಬದುಕಲ್ಲಿ ಸಾವಿನ ಕತೆಯೇ ಕೊನೆಯ ಅಧ್ಯಾಯ.
ಹಾಗಾದ್ರೆ ಇತಿಹಾಸದ ಆ ರೋಚಕ ಪರ್ವಕ್ಕೆ ಕಾರಣಳಾದ ಆ ಸುಂದರಿ ಯಾರು? ಅಷ್ಟೊಂದು ಮೆರೆದ ಆಕೆ ಸಾವಿನ ನಂತರ ಏನಾದ್ಲು. ಅವಳ ದೇಹವನ್ನ ಎಲ್ಲಿ ಹೂಳಲಾಯ್ತು? ಅವಳ ಸಮಾಧಿ ಎಷ್ಟು ಹುಡುಕಿದ್ರು ಸಿಗದೇ ಇರೋದ್ಯಾಕೆ? ಅವಳು ಇತಿಹಾಸನಾ..ದಂತಕತೆನಾ? ಜಗತ್ತಲ್ಲಿ ಅಚ್ಚಳಿಯದೇ ಉಳಿದವಳ ಸಮಾಧಿಯ ನಿಗೂಢತೆ ಇವತ್ತಿಗೂ ಉಳಿದಿರೋದೇಕೆ ಅನ್ನೋದ್ರ ಕುತೂಹಲಕರ ಮಾಹಿತಿಗಾಗಿ ಈ ಲಿಂಕನ್ನ ಒತ್ತಿ.