ಸ್ನೇಹಿತರೇ ನೇರವಾಗಿ ಯುದ್ದಭೂಮಿಯಲ್ಲಿ ಅಲ್ಲದೇ ಇದ್ರೂ ಟಿವಿಗಳಲ್ಲಿ, ಸಿನೆಮಾ, ಸಾಕ್ಷ್ಯ ಚಿತ್ರಗಳಲ್ಲಿ ನೀವು ಯುದ್ದಗಳ ಬಗ್ಗೆ ನೋಡಿರ್ತೀರಾ. ಅಲ್ಲಿ ನಡೆಯೋ ರಣಭೀಕರ ಘಟನೆಗಳ ಬಗ್ಗೆ ನಿಮಗೆಲ್ಲರಿಗೂ ಕಿಂಚಿತ್ತಾದ್ರೂ ಅರಿವು ಇದ್ದೇ ಇರುತ್ತೆ. ಅಲ್ಲೆಲ್ಲಾ ನಿಮಗೆ ಸಾಮಾನ್ಯ ಅನ್ನೋ ತರ ನೋಡೋಕೆ ಸಿಗೋದು ಸೈನಿಕರ ಕೈಯಲ್ಲಿನ ಬಂದೂಕು ಹಾಗೂ ಯುದ್ದ ಟ್ಯಾಂಕರ್‌ಗಳು. ಮೊದಲ ಹಾಗೂಎರಡನೇ ಮಹಾಯುದ್ದದ ಸಂದರ್ಭದಲ್ಲಿ ಸಹಸ್ರಾರು ಯುದ್ದ ಟ್ಯಾಂಕರ್‌ಗಳು ಯುದ್ದಭೂಮಿಯಲ್ಲಿ ಕಾದಾಡಿದ್ದವು. ಟ್ಯಾಂಕರ್ಸ್‌ ಕ್ಯಾನ್‌ ವಿನ್‌ ದಿ ವಾರ್‌ ಅನ್ನೋದು ಸೈನ್ಯದಲ್ಲಿರೋ ಸಹಜವಾದ ನಂಬಿಕೆ.  ಯುದ್ದಗಳ ಸಂದರ್ಭದಲ್ಲಿ ಟ್ಯಾಂಕರ್‌ಗಳು ಅಷ್ಟೊಂದು ಮಹತ್ವದ ಪಾತ್ರ ...

ಸ್ನೇಹಿತರೇ ಒಮ್ಮೆ ರಣರಂಗಕ್ಕೆ ಇಳಿದ ಮೇಲೆ ಸೋಲು, ಗೆಲುವು ಶತಸಿದ್ದ. ಯುದ್ದವೆಂದ ಮೇಲೆ ಸೋತವನು ಗೆದ್ದವನಿಗೆ ಶರಣಾಗಬೇಕು, ಸೋಲನ್ನು ಒಪ್ಪಿಕೊಳ್ಳಲೇಬೇಕು. ಹಾಗಂತ ಎಲ್ಲಾ ಯುದ್ದಗಳಲ್ಲಿ ಗೆದ್ದವನೇ ಗೆಲ್ಲಬೇಕು ಎನ್ನುವ ನಿಯಮವೇನೂ ಇಲ್ಲ. ಜಗತ್ತು ಕಂಡ ಅತ್ಯಂತ ಪರಾಕ್ರಮಿಗಳು ಕೂಡ ಒಂದಲ್ಲಾ ಒಂದು ಕಡೆ ಸೋಲನ್ನು ಅನುಭವಿಸಿರುವ ಅನೇಕ ಉದಾಹರಣೆಗಳಿವೆ. ಹಾಗೆ ಸೋಲಿನ ಕಹಿ ಅನುಭವಿಸಿದವರು ಅದಕ್ಕೆ ಪ್ರತಿಕಾರವಾಗಿ ಮರಳಿ ಗೆಲುವು ಸಾಧಿಸಿದ್ದೂ ಇದೆ. ಇನ್ನು ನೂರಾರು ಯುದ್ದಗಳನ್ನ ಮಾಡಿ ಯಾವುದರಲ್ಲೂ ಸೋಲನ್ನೇ ಅನುಭವಿಸದ ಮಹಾವೀರರು ಜಗತ್ತಿನಲ್ಲಿ ಕೆಲವೇ ಕೆಲವರು ಇದ್ದಾರೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ...

ಜಲಾಶಯಗಳು ನಾಗರಿಕ ಸಮಾಜದ ದೇಗುಲಗಳಿದ್ದಂತೆ. ಜನ ಜಾನುವಾರುಗಳ ದಾಹ ಇಂಗಿಸೋ ಜೊತೆಗೆ ಬರಡು ಭೂಮಿಯನ್ನ ಸಸ್ಯ ಸಂಪದ್ಭರಿತವನ್ನಾಗಿ ಮಾಡುವ ದಿವ್ಯ ಶಕ್ತಿ ಅದರದ್ದು. ಒಂದು ಪ್ರದೇಶದ ಆರ್ಥಿಕ, ಭೌಗೋಳಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಜಲಾಶಯಗಳು  ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತವೆ. ಹೀಗಾಗಿ ಹರಿಯುವ ನೀರಿಗೆ ಒಡ್ಡು ಕಟ್ಟುವುದರಿಂದ ಹಿಡಿದು ಕೆರೆ ಕಟ್ಟೆಗಳು, ಜಲಾಶಯಗಳ ನಿರ್ಮಾಣದ ವಿಚಾರದಲ್ಲಿ ಕ್ರಾಂತಿಕಾರಿ ಕೆಲಸಗಳು ಆಗಿವೆ. ಇನ್ನು ನಮ್ಮ ಕರ್ನಾಟಕದಲ್ಲಿಯೂ ಸಹ ರಾಜ ಮಹಾರಾಜರ ಕಾಲದಿಂದದಲೂ ಮಹತ್ವದ ನೀರಾವರಿ ಯೋಜನಗೆಳು ಜಾರಿಗೆ ಬಂದಿವೆ. ಇಲ್ಲಿನ ಅತ್ಯಂತ ಶ್ರೇಷ್ಟ ವಾಸ್ತು ...

ಸ್ನೇಹಿತರೆ ಭಾರತದ ಪುಣ್ಯ ನೆಲದ ಮೇಲೆ ಹಾಗು ಭಾರತೀಯ ಭಾವನೆಗಳ ಮೇಲೆ ಪರಕೀಯರ ದಾಳಿ ನಡೆದದ್ದು, ಇಲ್ಲಿಯ ಸಂಸ್ಕೃತಿಯನ್ನ ಹಾಳು ಮಾಡುವ ಕೆಲಸ ಮಾಡಿದ್ದು ಇತಿಹಾಸದ ಪುಟ ಪುಟಗಳೂ ಹೇಳುತ್ತವೆ. ವ್ಯಾಪಾರಿಗಳ ಸೋಗಿನಲ್ಲಿ ಬಂದ ಪರಕೀಯರು ಭಾರತದ ಶ್ರೀಮಂತಿಕೆಯನ್ನ ದೋಚಿ, ಬಾರತೀಯರನ್ನೇ ಗುಲಾಮರನ್ನಾಗಿಸಿಕೊಂಡ ಬಗ್ಗೆ ಅನೇಕ ಸಾಕ್ಷ್ಯಿಗಳಿವೆ. ಅದೇ ರೀತಿ ಬ್ರಿಟೀಷರು ಭಾರತದಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಸಾಮಾಜಿಕ ಕ್ಷೇತ್ರಕ್ಕೂ ಒಂದಷ್ಟು ಕೊಡುಗೆಗಳನ್ನ ಕೊಟ್ಟಿದ್ದಾರೆ ಅನ್ನೋದನ್ನು ಕೂಡ ನಾವು ಓದಿ ತಿಳಿದುಕೊಂಡಿದ್ದೇವೆ. ಹೀಗೆ ಇತಿಹಾಸದ ಪುಟಗಳನ್ನ ತಿರುವಿ ಹಾಕುತ್ತಾ ಹೋದ್ರೆ ಭಾರತೀಯ ವಾಸ್ತು ...

ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು ಅದೊಂದು ಆಘಾತಕಾರಿ ಅಂಶ. “ ಸಾವಿನ ವ್ಯಾಪಾರಿಯ ಸಾವು..!! ” ಅನ್ನೋ ಶಿರೋನಾಮೆಯ ಜೊತೆಗೆ ಪುಟಗಟ್ಟಲೆ ವರದಿ. ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಆತನ ಕಣ್ಣುಗಳು ಮಂಜಾದವು. ಒಂದರೆಕ್ಷಣ ತಾನು ಗಳಿಸಿದ್ದ ಮಿಲಿಯನ್‌ಗಟ್ಟಲೆ ಆಸ್ತಿಪಾಸ್ತಿ, ಬಂದು ಬಳಗ, ಗೆಳೆಯರು ಎಲ್ಲವೂ ಆತನ ಕಣ್ಣ ಮುಂದೆ ಹಾದು ಹೋದಂತಾಯಿತು. ಆತನ ಸಹೋದರ ಮೃತಪಟ್ಟಿರುವುದನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದ ಪತ್ರಿಕೆಗಳು ಆತನೇ ಮೃತಪಟ್ಟಿದ್ದಾನೆ ಎಂಬರ್ಥದಲ್ಲಿ ಸುದ್ದಿ ಪ್ರಕಟಿಸಿದ್ದವು. ಪತ್ರಿಕೆಗಳ ತುಂಬೆಲ್ಲಾ ಆತನ ರಂಗು ರಂಗಾದ ಪೊಟೋಗಳು. ಸಹೋದರನ ಅಗಲುವಿಕೆಯಿಂದ ನೊಂದಿದ್ದ ಆತನ ಮನಸ್ಸು ಮತ್ತಷ್ಟು ವೇದನೆ ...

ಸ್ನೇಹಿತರೇ.., ಈ ಜಗತ್ತಿನಲ್ಲಿರುವ ಅತ್ಯಂತ ಪ್ರಾಚೀನ ಭಾಷೆ ಯಾವುದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ, ಅದು ನಮ್ಮ ಕನ್ನಡಾನಾ..? ತಮಿಳಾ..? ಸಂಸ್ಕೃತನಾ..? ಪಾಲಿ, ಗ್ರೀಕ್, ಹೀಬ್ರೂ ಈಜಿಪ್ಷಿಯನ್ ಭಾಷೆ ಹೀಗೆ ಒಂದಾ ಎರಡಾ..?. ಈ ಭಾಷೆಗಳ ಬಗ್ಗೆ ಇರೋ ಗೊಂದಲ, ಜಗಳನಾ ಪರಿಹರಿಸೋಕೆ ಬಹುಷಃ ದೇವರಿಂದಲೂ ಸಾಧ್ಯ ಇಲ್ಲವೇನೋ. ಹೀಗಿದ್ರೂ ಕೂಡ ಜಗತ್ತಿನ ಒಂದಷ್ಟು ಪ್ರಾಚೀನ ಭಾಷೆಗಳ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಾದ ಅಗತ್ಯವಂತೂ ಖಂಡಿತ ಇದ್ದೇ ಇದೆ. ಜಗತ್ತಿನ ಇಂದಿನ ಈ ಬೆಳವಣಿಗೆಗೆ ನಾಗರಿಕತೆಯ ತೊಟ್ಟಿಲುಗಳೇ ಕಾರಣ. ಅಂತಹ ನಾಗರಿಕತೆಯ ತೊಟ್ಟಿಲುಗಳಲ್ಲಿ ...

ಗೆಳೆಯರೇ, ಭಾರತೀಯರು ಸಮುದ್ರ ವ್ಯಾಪಾರಗಳನ್ನ ಮಾಡೋದಕ್ಕೆ ಶುರ ಆಡಿದ್ದು ಯಾವಾಗ..? ಈ ಪ್ರಶ್ನೆಗೆ ಖಚಿತವಾದ ಉತ್ತರವನ್ನ ಹುಡುಕೋದು ತುಂಬಾ ಕಷ್ಟ.. ಅರಬ್ ವ್ಯಾಪಾರಿಗಳ ಮೇಲೆ ಭಾರತದ ಸಮುದ್ರ ವ್ಯಾಪಾರ ಸಂಪೂರ್ಣವಾಗಿ ಅವಲಂಬಿತವಾಗಿತ್ತು ಅನ್ನೋದನ್ನ ನಾವು ಪದೇ ಪದೇ ಓದ್ತಾ ಇರ್ತೀವಿ.. ಅರಬರು ತಂದು ಕೊಡೋ ಕುದುರೆಗಳಿಗಾಗಿ ವಿಜಯ ನಗರ ಸಾಮ್ರಾಟ ಶ್ರೀ ಕೃಷ್ಣ ದೇವರಾಯ ಕಾಯ್ತಿದ್ದ. ಆ ಕುದುರೆಗಳನ್ನ ಅವರು ಬಿಜಾಪುರ ಹಾಗೂ ಇನ್ನಿತರ ಮುಸ್ಲಿಂ ಸುಲ್ತಾನರಿಗೆ ಕೊಡ್ತಿದಾರೆ ಅನ್ನೋ ಕಾರಣಕ್ಕಾಗಿನೇ, ಮೂರೂ ಸಮುದ್ರಗಳ ಮೇಲೆ ರಾಯ ಹಿಡಿತ ಸಾಧಿಸಿದ್ದ. ಪೋರ್ಚುಗೀಸರನ್ನ ಕೃಷ್ಣದೇವರಾಯ, ಗೋವಾ ...

ಇದನ್ನ ಹೆಣ್ಣಿನ ದ್ವೇಷಕ್ಕೆ ತುತ್ತಾಗಿ ಪ್ರಾಣ ಕಳಕೊಂಡ ದಾಳಿಕೋರನೊಬ್ಬನ ಕತೆ ಅನ್ನಬೇಕಾ..? ಅಥವಾ, ತಮ್ಮ ದೇಶವನ್ನ ಕೊಳ್ಳೆಹೊಡೆದು ತಮ್ಮವರ ಸಾವಿಗೆ ಕಾರಣವಾದವನ ಜೀವ ತೆಗೆದ ಭಾರತೀಯ ವೀರ ನಾರಿಯರ ಕತೆ ಅನ್ನಬೇಕಾ ಗೊತ್ತಿಲ್ಲಾ.. ದುರಂತ ಅಂದ್ರೆ, ಒಂದು ಅತಿದೊಡ್ಡ ತ್ಯಾಗ ಮಾಡಿದ ಆ ಹೆಣ್ಣು ಮಕ್ಕಳ ಹೆಸರು ಕೂಡಾ ನಮ್ಮ ಇತಿಹಾಸದ ಯಾವ ಪುಟಗಳಲ್ಲೂ ನಿಮಗೆ ಸಿಗೋದಕ್ಕೆ ಸಾಧ್ಯಾನೇ ಇಲ್ಲ.. ಹಾಗಾದ್ರೆ ಯಾರು ಆ ಹೆಣ್ಣುಮಕ್ಕಳು  ಹೇಳ್ತೀನಿ ಕೇಳಿ. ಭಾರತದ ಮೇಲೆ ಮೊಟ್ಟಮೊದಲ ಬಾರಿಗೆ ದಂಡೆತ್ತಿ ಬಂದ  ಮುಸ್ಲಿಂ  ದಾಳಿಕೋರ ಯಾರು..? ಈ ಪ್ರಶ್ನೆಯನ್ನ ಯಾರಿಗಾದ್ರೂ ...