ರ್ನಾಟಕದ ಇತಿಹಾಸವನ್ನು ಓದ್ತಾ ಹೋದ ಹಾಗೆ ಅನೇಕ ರೋಮಾಂಚಕಾರಿ ಸಂಗತಿಗಳು ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತೆ. ಅದ್ರಲ್ಲೂ ಈ ಕಪ್ಪು ಮಣ್ಣಿನ ಚರಿತ್ರೆಯನ್ನ ನೆನಪು ಮಾಡ್ಕೊಳ್ಳೋವಾಗ ಅವನೊಬ್ಬನನ್ನ ಮರೆಯೋ ಹಾಗೇ ಇಲ್ಲಾ. ಕನ್ನಡಿಗರಿಗಾಗಿ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಿದ ಮಹಾವೀರ ಅವನು. ಇವತ್ತಿಗೂ ಮಾಸದ ಅದ್ಭುತ ಕಲಾಕೃತಿಗಳನ್ನ ನಮಗಾಗಿ ಬಿಟ್ಟು ಹೋಗಿರೋ ಆ ವೀರಾಗ್ರಣಿ ಕರ್ನಾಟಕ ಹಾಗೇ ದಕ್ಷಿಣ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ಅದು ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯ. ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಿದ್ದ ವಂಶ ಅದು. ರಾಜಾಧಿರಾಜರೂ ಆಹೋಮಲ್ಲರಿದ್ದ ಭೂಮಿ ಅದು. ಕರ್ನಾಟಕದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ತಮ್ಮ ಆಡಳಿತದಿಂದಲೇ ಇಂದಿಗೂ ತಮ್ಮ ಹೆಸರನ್ನ ಜೀವಂತವಾಗಿ ಉಳ್ಸೊಂಡಿರೋ ಅತಿದೊಡ್ಡ ಸಾಮ್ರಾಜ್ಯ ಅದು. ಅಂತಹ ಸಾಮ್ರಾಜ್ಯಕ್ಕೆ ಮುಕುಟ ಪ್ರಾಯದಂತಿದ್ದವನು ಆ ಸಾಮ್ರಾಟ. ಅವ್ನೇ ದಕ್ಷಿಣಾಪಥೇಶ್ವರ ಪರಮೇಶ್ವರ ಬಿರುದಾಂಕಿತ, ಬಾದಾಮಿ ಚಾಲುಕ್ಯರ ಸಾಮ್ರಾಟ ಇಮ್ಮಡಿ ಪುಲಕೇಶಿ.
ಅವನ್ನ ಇತಿಹಾಸಕಾರರು ರಣ ವಿಕ್ರಮ ಅಂತ ಕರೀತಾರೆ. ಸಾಮ್ರಾಜ್ಯ ವಿಸ್ತರಣಾಕಾಂಕ್ಷಿ ಅಂತ ಗುರುತಿಸ್ತಾರೆ. ಅಂತಹ ಇಮ್ಮಡಿ ಪುಲಿಕೇಶಿ ತನ್ನ ಸಾಮ್ರಾಜ್ಯವನ್ನ ಕಟ್ಟಿ ಬೆಳೆಸಿದ್ದು ಹೇಗೆ?, ಅವನ್ನ ದಕ್ಷಿಣಾಪಥೇಶ್ವರ, ಪರಮೇಶ್ವರ ಅನ್ನೋ ಬಿರುದುಗಳು ಯಾಕೆ ಬಂತು? ಇಮ್ಮಡಿ ಪುಲಿಕೇಶಿ ಯಾಕೆ ಮಹತ್ವವನ್ನ ಪಡೆದುಕೊಳ್ತಾನೆ ಅನ್ನೋದನ್ನ ತಿಳಿಯೀಓದಕ್ಕಾಗಿ ಈ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.
ಉತ್ತರದ ರಾಜರಿಂದ ʼಭೇಷ್ʼ ಅನ್ನಿಸಿಕೊಂಡ ಆ ಅರಿಭಯಂಕರ ಯಾರು ಗೊತ್ತಾ..?

What’s your reaction?
Love1
Sad0
Happy0
Sleepy0
Angry0
Dead0
Wink0






Leave a Reply