ಫಾರೆಸ್ಟ್ ಮಿಸ್ಟರಿ..! ಆ ಕಾಡಲ್ಲಿ ಅದೆಂಥಾ ವಿಸ್ಮಯಗಳು ನಡೆದಿವೆ ಗೊತ್ತಾ..?

ಪ್ರಪಂಚದ ಟೈಗರ್ ಕ್ಯಾಪಿಟಲ್, ಭಾರತದ ಹುಲಿಗಳ ರಾಜ್ಯ ಅಂತ ಕರೆಸಿಕೊಂಡ ಮಧ್ಯಪ್ರದೇಶದ ವಿಂದ್ಯ ಪರ್ವತಗಳ ತಪ್ಪಲಲ್ಲಿರೋ ಹುಲಿ ಸಂರಕ್ಷಿತಾರಣ್ಯ ಅದು. ಒಂದು ಕಾಲಕ್ಕೆ ಹುಲಿಗಳೇ ಇಲ್ಲದ ಹುಲಿ ಸಂರಾಕ್ಷಿತಾರಣ್ಯ ಅನ್ನೋ ಪರಿಸ್ಥಿತಿಯನ್ನ ಎದುರಿಸಿ, ಅಚ್ಚರಿ ಪಡೋ ಹಾಗೇ ಹುಲಿಗಳ ಅಭಿವೃದ್ಧಿಯನ್ನ ಮಾಡಿ ಜಗಮೆಚ್ಚುಗೆಗೆ ಪಾತ್ರವಾಗಿತ್ತು. ಐತಿಹಾಸಿಕ ನಗರ ಖಜುರಾಹೋದಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿರೋ ಆ ಸಂರಕ್ಷಿತಾರಣ್ಯ ಬೇರ್ಯಾವುದೂ ಅಲ್ಲ, ಮಧ್ಯಪ್ರದೇಶದ 5ನೇ ಹುಲಿ ಸಂರಕ್ಷಿತ ಪ್ರದೇಶ ಅನ್ನಿಸಿಕೊಂಡಿರೋ ಪನ್ನಾ ಸಂರಕ್ಷಿತಾರಣ್ಯ.
ಪನ್ನಾ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶದ ಪನ್ನಾ ಹಾಗೂ ಛತರ್ಪುರ ಜಿಲ್ಲೆಗಳಲ್ಲಿದೆ. 1981ರಲ್ಲಿ ಸ್ಥಾಪನೆಯಾದ ಈ ಸಂರಕ್ಷಿತ ಪ್ರದೇಶ ಸುಮಾರು 542.67 ಚದರ ಕಿಲೋಮಿಟರ್ನಷ್ಟು ವ್ಯಾಪ್ತಿಯನ್ನ ಹೊಂದಿದೆ. 1994ರಲ್ಲಿ ವೈಲ್ಡ್ಲೈಫ್ ಪ್ರೊಟೆಕ್ಷನ್ ಅಕ್ಟ್ 1972/ ವನ್ಯಜೀವಿ ಸಂರಕ್ಷಣಾ ಕಾಯ್ದೆ 1072ರ ಅನ್ವಯ ಇದನ್ನ ಹುಲಿ ಸಂರಕ್ಷಿತಾರಣ್ಯವಾಗಿ ಸ್ಥಾಪನೆ ಮಾಡ್ಲಾಯ್ತು. ಸ್ವತಂತ್ರ ಭಾರತದ 22ನೇ ಹುಲಿ ಸಂರಕ್ಷಿತಾರಣ್ಯ ಈ ಪನ್ನಾ ಟೈಗರ್ ರಿಸರ್ವ್. ಈ ಹುಲಿ ಸಂರಕ್ಷಿತಾರಣ್ಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.