ಮನುಷ್ಯನಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳ ಪೈಕಿ ಒಂದು ನೀರು. ಈ ನೀರು ಭೂಮಿ ಮೇಲೆ ಇರೋದ್ರಿಂದಲೇ ಮನುಷ್ಯ ಸೇರಿದಂತೆ ಜೀವ ಸಂಕುಲ ಇಲ್ಲಿ ಬದುಕಿ ಉಳಿದಿರೋದು. ನೀರಿದ್ದರೆ ಹಸಿರು. ನೀರಿದ್ದರೇ ಜೀವ. ಈ ಹಿಂದೆ ಅದೆಷ್ಟೊ ಅತ್ಯದ್ಭುತ ನಾಗರೀಕತೆಗಳು ನೀರಿನಿಂದಲೇ ಹುಟ್ಟಿವೆ. ನೀರಿನಿಂದಲೇ ಅವಸಾನಗೊಂಡಿದೆ. ಈಜಿಪ್ಟ್ ಅನ್ನೋ ಮರಳುಗಾಡಿನಲ್ಲಿ ನೈಲ್ ಅನ್ನೋ ನದಿ ಅತ್ಯದ್ಭುತವಾದ ನಾಗರೀಕತೆಯನ್ನ ಹುಟ್ಟು ಹಾಕಿತ್ತು. ಯುಪ್ರೆಟೀಸ್ ಮತ್ತು ಟೈಗ್ರೀಸ್ಗಳ ಬದಿಯಲ್ಲಿ ಮೆಸಪಟೋಮಿಯ ತಲೆ ಎತ್ತಿದ್ರೆ, ಗಂಗಾ, ಸಿಂಧೂ, ಸರಸ್ವತಿಯರ ಕಾರಣದಿಂದ ಭಾರತದ ನಾಗರೀಕತೆ ಹುಟ್ಟಿಕೊಂಡಿತ್ತು. ಇದಿಷ್ಟೇ ಅಲ್ಲಾ. ಮಾನವನ ಪ್ರತಿಯೊಂದು ವಾಸಸ್ಥಾನ ಇದ್ದದ್ದು ಕೂಡಾ ಆ ನದಿಗಳ ಪಕ್ಕದಲ್ಲೇ!
ಆದರೆ ಇಂದು ಈ ನೀರಿನ ಕಾರಣಕ್ಕೆ ಹಲವು ನಗರಗಳು ಸಂಕಷ್ಟಕ್ಕೆ ಸಿಲುಕಿವೆ. ಅಧ್ಯಯನಗಳ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಆರು ಮಹಾನಗರಗಳು ನೀರಿಲ್ಲದೇ ಬಣಗುಡುತ್ತವೆ ಅಂತ ಹೇಳಲಾಗುತ್ತಿದೆ. ಈಗಾಗಲೇ ಜಗತ್ತಿನಲ್ಲಿ ಶುದ್ಧ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಪ್ರಪಂಚಲ್ಲಿರುವ ಒಟ್ಟು ಎಂಟು ಬಿಲಿಯನ್ ಜನಸಂಖ್ಯೆಯಲ್ಲಿ ಸರಿ ಸುಮಾರು 2 ಬಿಲಿಯನ್ ಜನ ಶುದ್ಧ ಕುಡಿಯುವ ನೀರಿನ ಅಭಾವವನ್ನ ಎದುರಿಸುತ್ತಿದ್ದಾರೆ. ಕಲುಶಿತ ನೀರಿನ ಸೇವನೆಯ ಕಾರಣದಿಂದ ಜಗತ್ತಿನಲ್ಲಿ ಕಾಲರ, ಟೈಫಾಯಿಡ್, ಡೀಸೆಂಟ್ರಿ, ಡಯೇರಿಯಾ ಮತ್ತು ಪೋಲಿಯೋದಂತ ಪ್ರಕರಣಗಳು ಹೆಚ್ಚಾಗುತ್ತಿವೆ. ಶುದ್ದ ಕುಡಿಯುವ ನೀರಿನ ಲಭ್ಯತೆ ಇಲ್ಲದೇ ಪ್ರತಿ ವರ್ಷ ಈ ಜಗತ್ತಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ತಿದ್ದಾರೆ ಅನ್ನೋ ಮಾಹಿತಿಯನ್ನ ವಿಶ್ವ ಆರೋಗ್ಯ ಸಂಸ್ಥೆ ಹಂಚಿಕೊಂಡಿದ್ದು ಬೆಚ್ಚಿಬೀಳುವಂತೆ ಮಾಡಿದೆ. ಇದೇ ಸಮಸ್ಯೆ ಇಂದು ಭಾರತದ ಹಲವು ನಗರಗಳ ಪಾಲಿಗೆ, ಕಂಟಕವಾಗಿ ಪರಿಣಮಿಸಿದೆ.
ಹಾಗಾದ್ರೆ ಭಾರತದಲ್ಲಿನ ಯಾವೆಲ್ಲ ನಗರಗಳು ನೀರಿನ ಸಮಸ್ಯೆಗೆ ಗುರಿಯಾಗಲಿವೆ? ಆ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಲೂರು ಇದೆಯಾ? ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲು ಕಾರಣ ಯಾರು ಅನ್ನೋದ್ರ ಕುರಿತಾದ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ
ನೀರಿಲ್ಲಾ..ನೀರಿಲ್ಲಾ..! ರಾಜಧಾನಿಯನ್ನ ಕಾಡಲಿದೆಯಾ ಜಲಕ್ಷಾಮ..?

What’s your reaction?
Love0
Sad0
Happy0
Sleepy0
Angry0
Dead0
Wink0






Leave a Reply