ಆ ನೀರಿನಲ್ಲಿ ಮುಳುಗಿದ್ರೆ ಕಲ್ಲಾಗುತ್ವೆ ಜೀವಿಗಳು..!

ಈ ಭೂಮಿಯ (Earth) ಮೇಲೆ ಜೀವಿಗಳು ಇರೋದಕ್ಕೆ ಕಾರಣವೇ ನೀರು(Water) ಅಂತ ಹೇಳಲಾಗುತ್ತೆ. ನೀರನ್ನ ಜೀವಜಲ ಅಂತ ಕರೆಯಲಾಗುತ್ತೆ..ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಹರಿಯುವ ನದಿಗಳಲ್ಲಿನ (River) ನೀರನ್ನ ಮುಟ್ಟಿದ್ರು ನಮ್ಮ ಪಾಪಗಳು ನಿವಾರಣೆ ಆಗುತ್ವೆ ಅಂತ ಹೇಳ್ತಾರೆ. ಆದ್ರೆ ಅಲ್ಲೊಂದು ಸರೋವರ (Lake) ಇದೆ. ಆ ಸರೋವರದ ನೀರನ್ನ ಮುಟ್ಟಿದ್ರು ಸಾಕು ಪ್ರಾಣಿಗಳು ಕಲ್ಲಾಗುತ್ವೆ. ಆ ನೀರಿಗೆ ಧುಮುಕುವ ಪಕ್ಷಿಗಳು (Bird) ಮೇಲಕ್ಕೆ ಬರೋದೇ ಇಲ್ಲಾ; ಪ್ರಾಣಿಗಳು (Animal) ಮತ್ತೆ ಉಸಿರಾಡೊದೇ ಇಲ್ಲಾ! ಆ ನೀರಲ್ಲಿ ಮನುಷ್ಯ(Human) ಹೆಚ್ಚು ಹೊತ್ತು ಇರೋದಕ್ಕೆ ಸಾಧ್ಯವೇ ಇಲ್ಲ. ಇನ್ನು ಅದೇ ನೀರನ್ನ ಶತಮಾನಗಳ ಹಿಂದೆ ಈಜಿಪ್ಟ್‌ನ (Egypt) ಫೆರೋಗಳ ಶವಗಳನ್ನ ಮಮ್ಮಿಗಳನ್ನಾಗಿ ಮಾಡೋದಕ್ಕೆ ಬಳಸಲಾಗ್ತಿತ್ತು ಅಂತೆಲ್ಲಾ ಹೇಳಲಾಗುತ್ತೆ. ಆದ್ರೆ ಆಶ್ಚರ್ಯ ಅನ್ನೋ ಹಾಗೇ ಪ್ರಾಣಿಪಕ್ಷಿಗಳ ಪಾಲಿಗೆ ಜೀವಕಂಟಕವಾದ ಆ ಸರೋವರ ಅದೊಂದು ಪಕ್ಷಿ ಸಂಕುಲಕ್ಕೆ ಜೀವನದ ದಾರಿಯಾಗಿದೆ. ಅದು ತನ್ನ ಬಳಗದೊಂದಿಗೆ ಸಂತಾನಾಭವೃದ್ಧಿಗಾಗಿ ಪ್ರತಿ ವರ್ಷ ಈ ಸರೋವರಕ್ಕೆ ವಲಸೆ ಬರುತ್ತೆ.

ಈ ವಿಚಿತ್ರಗಳಿಗೆ ಸಾಕ್ಷಿಯಾಗಿರೋದು ಆಫ್ರಿಕಾ ಖಂಡದ (Africa) ತಾಂಜೇನಿಯಾದಲ್ಲಿರೋ (Tanzania) ನಾಟ್ರಾನ್(Natron) ಅನ್ನೋ ಸರೋವರ. ಇದನ್ನ ಸಾಲ್ಟ್ ಲೇಕ್ (Salt Lake) ಅಂತಲೂ ಕರೆಯಲಾಗುತ್ತೆ. ಆದ್ರೆ ಇದು ಭೂಮಿಯ ಮೇಲಿರೋ ಇತರೆ ಸಾಲ್ಟ್ ಲೇಕ್ಗಳಿಗಿಂತಳೂ ವಿಭಿನ್ನ.

ಹಾಗಾದ್ರೆ ಆ ಸರೋವರದ ವಿಶೇಷತೆಗಳೇನು? ಅಲ್ಲಿರೋ ಆ ಭಯಾನಕ ಶಕ್ತಿಯಾದ್ರು ಎಂತದ್ದು? ಆ ನೀರು ಅಷ್ಟೊಂದು ವಿಷಕಾರಿನಾ? ಅಲ್ಲಿ ಯಾವುದೇ ಜೀವಿಗಳು ಬದುಕೋದೇ ಇಲ್ಲವಾ? ಸಾವಿನ ಸರೋವರದಲ್ಲಿ ಸಂತಾನಾಭಿವೃದ್ಧಿಯನ್ನ ಮಾಡಿಕೊಳ್ತಾ ಇರೋ ಆ ಹಕ್ಕಿ ಯಾವ್ದು? ಅನ್ನೋ ಕುತೂಹಲಕರ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನ ಕ್ಲಿಕ್ ಮಾಡಿ.