ಭಾರತದ(India) ಮೇಲೆ ಮುನಿಸಿಕೊಂಡಿದ್ದ ಮಳೆರಾಯ (Rain) ಈಗ ಅಬ್ಬರಿಸ್ತಿದ್ದಾನೆ. ರಾಜ್ಯದಲ್ಲಿ(Karnataka) ಮಳೆ ಬಗ್ಗೆ ತಲೆ ಕೆಡಿಸಿಕೊಂಡಿದ್ದ ರೈತರ ಮುಖದಲ್ಲಿ ಸಂತಸ ಮೂಡ್ತಿದ್ರೆ, ಅತ್ತ ಉತ್ತರ ಭಾರತದಲ್ಲಿ(North India) ಮಳೆರಾಯನ ರೌದ್ರತೆಯ ದರ್ಶನ ಆಗ್ತಿದೆ. ಅಲ್ಲಿನ ಕೆಲವು ರಾಜ್ಯಗಳು ಕೇವಲ ಒಂದೇ ತಿಂಗಳಲ್ಲಿ ಐದಾರು ಸಾವಿರ ಕೋಟಿಯಷ್ಟು ನಷ್ಟವನ್ನ ಅನುಭವಿಸಿವೆ. ನೂರಾರು ಮನೆಗಳು ನಾಮಾವಶೇಷವಾಗಿದ್ರೆ ಸಹಸ್ರಾರು ಮನೆಗಳು ಮಳೆಯ ಅಬ್ಬರಕ್ಕೆ ನಡುಗಿ ಹೋಗಿವೆ.
ರಾಜ್ಯದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗ್ತಿದ್ದು ಈ ಭಾಗದಲ್ಲಿ ಮುಂದಿನ ಇಪ್ಪತ್ತ ನಾಲ್ಕು ಗಂಟೆಗಳಲ್ಲಿ 180 ರಿಂದ 200 ಮಿಲಿಮೀಟರ್ನಷ್ಟು ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ತುಂಗಭದ್ರ ಹಾಗೂ ಕೃಷ್ಣ ನದಿಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರೀತಿದೆ. ಕೆಆರ್ಎಸ್ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ಗೂ ಅಧಿಕ ನೀರು ಹರಿದು ಬರ್ತಿದ್ದು ಜಲಾಶಯದ ನೀರಿನ ಮಟ್ಟ 108 ಅಡಿಗಳಿಗೆ ತಲುಪಿದೆ. ಮುರ್ನಾಲ್ಕು ದಿನಗಳ ಹಿಂದೆ ನೀರಿಲ್ಲದೇ ಬರಿದಾಗಿದ್ದ ಕಾವೇರಿ ನದಿ ಪಾತ್ರದಲ್ಲಿರೋ ಶಿವನ ಸಮುದ್ರ , ಗಗನಚುಕ್ಕಿ ಭರಚುಕ್ಕಿ ಜಲಾಪಾತಗಳು ಮೈದುಂಬಿವೆ. ಇದೇ ಸಮಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ಬೆಂಗಳೂರಿನಲ್ಲಿ ಮಳೆ ಕೊಂಚ ಬಿಡುವನ್ನ ಕೊಟ್ಟಿದೆ.
ಹೀಗೆ ರಾಜ್ಯದಲ್ಲಿ ಸುಭೀಕ್ಷ ಮಳೆಯಾಗ್ತಿದ್ರೆ, ಮಹಾರಾಷ್ಟ್ರ (Maharashtra), ಗುಜರಾತ್ (Gujarath), ದೆಹಲಿ (Dehli), ಉತ್ತರ ಪ್ರದೇಶ (Uttar Pradesh), ಹಿಮಾಚಲ್ ಪ್ರದೇಶ (Himachal Pradesh) ಹಾಗೂ ಉತ್ತರಖಂಡದಲ್ಲಿ(Uttarakhand) ಮಹಾ ಮಳೆಯಾಗ್ತಿದೆ. ಅದ್ರಲ್ಲೂ ಹಿಮಾಚಲ್ ಪ್ರದೇಶ ಕಳೆದ ಒಂದು ತಿಂಗಳಿಂದಲೂ ಭಾರಿ ಮಳೆಗೆ ತುತ್ತಾಗಿದ್ದು ಅಲ್ಲಿ ಹರಿಯುವ ಪ್ರತಿಯೊಂದು ನದಿಯೂ ಸಾಕಷ್ಟು ಆಪೋಷಣವನ್ನ ತೆಗದುಕೊಂಡಿವೆ.
ಅದರಲ್ಲೂ ಹಿಮಾಚಲ ಪ್ರದೇಶದ ಕತೆಯನ್ನ ನೋಡೊದದ್ರೆ ಅಲ್ಲಿ ಮೇಘ ಸ್ಪೋಟಗಳಿಗೆ(Cloud bursting) ಲೆಕ್ಕವೇ ಇಲ್ಲದಂತಾಗಿದೆ. ಈ ಮೂವತ್ತು ದಿನಗಳಲ್ಲಿ ಕಡಿಮೆ ಅಂದ್ರು ಹತ್ತಕ್ಕೂ ಹೆಚ್ಚು ಮೇಘಸ್ಪೋಟಗಳು ಸಂಭವಿಸಿದೆ. ಆ ಕಾರಣದಿಂದ ರಾವಿ (Ravi), ಬಿಯಾಸ್ (Beas), ಹಾಗೂ ಯುಮುನಾ (Yamuna) ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಆಗ್ತಲೇ ಇದೆ. ಇನ್ನು ಕುಲು, ಮನಾಲಿ ಹಾಗೂ ಸಿಮ್ಲಾದಂತಹ ಪ್ರವಾಸಿ ತಾಣಗಳು ಮಳೆಯ ಕಾರಣದಿಂದಾಗಿ ಅವಶೇಷದಂತೆ ಕಾಣ್ತಿವೆ. ಅಷ್ಟರ ಮಟ್ಟಿಗೆ ಮಳೆ ಹಿಮಾಚಲವನ್ನ ಕಾಡ್ತಾ ಇದೆ.
ಹಾಗಾದ್ರೆ ಏನಿದು ಉತ್ತರ ಭಾರತದಲ್ಲಿನ ಮಹಾಮಳೆಯ ಕಥೆ? ಅಲ್ಲಿ ಇದ್ದಕ್ಕಿದ್ದಂತೆ ಮೇಘಸ್ಫೋಟಗಳು ಆಗ್ತಿರೋದ್ಯಾಕೆ. ಇಷ್ಟುಕ್ಕೂ ಮೇಘಸ್ಫೋಟ ಅಂತಂದ್ರೆ ಏನು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನ ಕ್ಲಿಕ್ ಮಾಡಿ.





Leave a Reply