ಕೇಂದ್ರ ಸಚಿವೆ ವಿರುದ್ಧ ಪ್ರೊಫೆಸರ್..! ರಾಜ್ಯ ಅತೀ ದೊಡ್ಡ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋರ್ಯಾರು..?

ಎಪ್ರಿಲ್ 26ರಂದು ಸಾರ್ವರ್ತಿಕ ಚುನಾವಣಾ ಮತದಾನ ನಡೆಯಲಿರುವ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಬೆಂಗಳೂರು ಉತ್ತರ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಶರೀಫ್ ಅಂತವರು ಸ್ಪರ್ಧಿಸಿ ಸತತವಾಗಿ ಗೆದ್ದಿದ್ದಂತ ಕ್ಷೇತ್ರ ಬೆಂಗಳೂರು ಉತ್ತರ. ಇದು ಯಶವಂತಪುರ, ದಾಸರಹಳ್ಳಿ, ಬ್ಯಾಟರಾಯನ ಪುರ, ಹೆಬ್ಬಾಳ, ಪುಲಕೇಶಿ ನಗರ , ಮಲ್ಲೇಶ್ವರಂ , ಮಹಾಲಕ್ಷ್ಮೀ ಲೇಔಟ್ ಹಾಗೂ ಕೆಆರ್ ಪುರಂ ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಇಲ್ಲಿ ಐದರಲ್ಲಿ ಬಿಜೆಪಿ ಶಾಸಕರು ಹಾಗೂ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಈ ಬಾರಿ ಬಿಜೆಪಿ, ಹಾಲಿ ಸಂಸದ ಸದಾನಂದ ಗೌಡರಿಗೆ ಟಿಕ್ ಮಿಸ್ ಮಾಡಿ, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಟಿಕೆಟ್ ಕೊಟ್ಟಿದೆ. ಇನ್ನು ಕಾಂಗ್ರೆಸ್ ಪ್ರೊ. ರಾಜೀವ್ ಗೌಡ ಅವ್ರನ್ನ ಕಣಕ್ಕಿಳಿಸಿ ಜಯಕ್ಕಾಗಿ ಪ್ರಯತ್ನ ಪಡ್ತಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರ ಕೋಟೆಯಾಗಿದ್ದ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಜನತಾದಳ ಗೆದ್ದಿತ್ತು. ಆದ್ರೆ 2004ರಿಂದ ಈ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಹೀಗಾಗಿ ಈಗ ಇದು ಬಿಜೆಪಿಯ ಭದ್ರಕೊಟೆ ಆಗಿದೆ.
ಹಾಗಾದ್ರೆ ರಾಜ್ಯದಲ್ಲೇ ಅತೀ ಹೆಚ್ಚು ಮತದಾರರನ್ನ ಹೊಮದಿರುವ ಲೋಕಸಭಾ ಕ್ಷೇತ್ರ ಬೆಂಗಳೂರು ಉತ್ತರದಲ್ಲಿ ಈ ಬಾರಿಯ ಚುನಾವಣಾ ಕಣ ಹೇಗಿದೆ? ಇಲ್ಲಿನ ಅಭ್ಯರ್ಥಿಗಳ ಬಲಾಬಲಗಳೇನು ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕಿಗೆ ಭೇಟಿ ನೀಡಿ.