ಯುಗದ ಆದಿ ಯುಗಾದಿ ಮತ್ತೆ ಬಂದಿದೆ. ಹೊಸ ವರುಷವನ್ನು ಹೊತ್ತು ತಂದಿದೆ. ಈ ಕ್ರೋಧ ನಾಮ ಸಂವತ್ಸರದಲ್ಲಿ ಯಾರು ಹೆಚ್ಚು ಕೋಪ ಮಾಡಿಕೊಳ್ಳದೇ ಖುಷಿಖುಷಿಯಾಗಿ ಇರಿ ಅಂತ ಹಾರೈಸ್ತಾ ಮೀಡಿಯಾ ಮಾಸ್ಟರ್ಸ್ನ ಸಮಸ್ತ ಅಭಿಮಾನಿಗಳಿಗೆ, ರಾಜ್ಯದ ಜನತೆಗೂ ಯುಗಾದಿ ಹಬ್ಬದ ಹಾಗೂ ಹಿಂದೂ ಸಂಸ್ಕತಿಯ ಹೊಸ ವರ್ಷದ ಶುಭಾಶಯಗಳು. ಸನಾತನ ಧರ್ಮದಲ್ಲಿ ಈ ಹಿಂದಿನಿಂದಲೂ ಯುಗಾದಿಯನ್ನ ಹೊಸ ವರ್ಷದ ಪ್ರಾರಂಭ ಅಂತಲೇ ನಂಬಲಾಗಿದೆ. ಯುಗಾದಿಯ ದಿನ ಕೆಲವ್ರು ಪಂಚಾಂಗ ಶ್ರವಣವನ್ನ ಮಾಡ್ತಾ ಈ ವರ್ಷದಲ್ಲಿ ಮಳೆ ಬೆಳೆ ಆರೋಗ್ಯ ಹೇಗಿದೆ ಅನ್ನೋದನ್ನು ತಿಳಿದುಕೊಳ್ತಾರೆ. ಜನ ...



