ಹಾವೇರಿ ಲೋಕಸಭಾ ಕ್ಷೇತ್ರ: ಮಾಜಿ ಸಿಎಂ ಸಂಸದರಾಗೋಕೆ ಟಿಕೆಟ್ ವಂಚಿತರೇ ಅಡ್ಡಿ?

ರಾಜ್ಯದಲ್ಲಿ ಎರಡನೆ ಹಂತದಲ್ಲಿ ನಡೀತಿರೋ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಭರಿತ ಕ್ಷೇತ್ರಗಳಿವೆ. ಒಂದೆರಡು ಲೋಕಸಭಾ ಕ್ಷೇತ್ರಗಳನ್ನ ಹೊರತು ಪಡಿಸಿದ್ರೆ ಇನ್ನು ಮಿಕ್ಕ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಕಣ ಏರ್ಪಟ್ಟಿದೆ. ಅದರಲ್ಲೂ ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣವನ್ನಿಟ್ಟುಕೊಂಡು, ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡ್ತಿದ್ದಾರೆ. ಈ ಮೂಲಕ ಶಿವಮೊಗ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಹಾಗೂ ಯಡಿಯೂರಪ್ಪನವ್ರ ದೊಡ್ಡ ಮಗ ಬಿವೈ ರಾಘವೇಂದ್ರ ಅವ್ರ ಗೆಲುವಿಗೆ ತೊಡಕಾಗುವ ಉಮೇದಿನಲ್ಲಿದ್ದಾರೆ.
ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್‌ ಉದಾಸಿ ಅವ್ರೇ ನಿರಂತರವಾಗಿ ಗೆದ್ದು ಬಂದಿದ್ದಾರೆ. ಆದರೆ ಈ ಬಾರಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸೋ ಹುಮ್ಮಸ್ಸಿಲ್ಲ! ಹೀಗಾಗಿ ಬಿಜೆಪಿ ಪಕ್ಷ ಈ ಬಾರಿ ಅಳೆದು ತೂಗಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಶಿಗ್ಗಾವಿ ಕ್ಷೇತ್ರದ ಹಾಲಿ ಎಂಎಲ್ಎ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಳಿಸಿದೆ. ಅಲ್ಲಿಂದ ಕಣಕ್ಕಿಳಿಯೋದಕ್ಕೆ ಬಯಸಿದ್ದ, ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್, ಬಿ.ಸಿ. ಪಾಟೀಲ್ ಸೇರಿದ ಹಾಗೇ ಹಲವರಿಗೆ ನಿರಾಸೆ ಆಗಿದೆ. ಇದು ಈಗ ಬಿಜೆಪಿಯಲ್ಲಿ ಕಿಚ್ಚನ್ನ ಹೊತ್ತಿಸಿದ್ದು ಅದ್ರ ಕಾವು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ತಿದೆ. ಇನ್ನು ಕಾಂಗ್ರೆಸ್ ಮಾಜಿ ಸಿಎಂ ಎದುರು ಆನಂದಸ್ವಾಮಿ ಗಡ್ಡದೇವರ ಮಠ ಅವರನ್ನು ಕಣಕ್ಕಿಳಿಸಿದೆ. ಇವರೂ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯೇ ಆಗಿದ್ದಾರೆ.
ಹಾಗಾದ್ರೆ ಹಾವೇರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಪರಿಸ್ಥಿತಿ ಹೇಗಿದೆ? ಈ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎದುರಿಸಿರೋ ಸವಾಲುಗಳೇನು? ಒಳ ಜಗಳಗಳೂ ಇಲ್ಲಿ ಅಭ್ಯರ್ಥಿಗಳ ಗೆಲುವಿನ ಮೇಲೆ ಪರಿಣಾಮವನ್ನ ಬೀರುತ್ತಾ ಅನ್ನೋ ಕುರಿತಾದ ಒಂದಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.