ಕೊಪ್ಪಳ ಲೋಕಸಭಾ ಕ್ಷೇತ್ರ: ಕರಡಿ ಸಂಗಣ್ಣಗೆ ಕೈ..ಕ್ಯಾವಟರ್ ಗೆ ಜೈ..! ಹಿಟ್ನಾಳ್ ಗೆ ಶರಣಪ್ಪ ಪುತ್ರನ ಸವಾಲು..!

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2014 ಹಾಗೂ 2019ರ ಚುನಾವಣೆಗಳಲ್ಲಿ ಕರಡಿ ಸಂಗಣ್ಣ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಎರಡೂ ಚುನಾವಣೆಗಳಲ್ಲಿ ಕರಡಿ ಸಂಗಣ್ಣರಿಗೆ 30 ಸಾವಿರ ಮತಗಳ ಆಸುಪಾಸಿನ ಅಂತರದಿಂದ ಗೆಲುವು ದಕ್ಕಿತ್ತು. ಈ ಬಾರಿಯೂ ಅವ್ರಿಗೆ ಟಿಕೆಟ್‌ ಕೊಡ್ತಾರೆ ಅನ್ನೋ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದರು. ಆದರೆ ಬಿಜೆಪಿ ಸಂಗಣ್ಣ ಅವರ ಬದಲಿಗೆ ಕುಷ್ಟಗಿ ಮಾಜಿ ಶಾಸಕ ಕೆ. ಶರಣಪ್ಪ ಪುತ್ರ, ವೃತ್ತಿಯಿಂದ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರನ್ನ ಕಣಕ್ಕಿಳಿಸಿದೆ. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ಅವರಿಗೆ ಟಿಕೆಟ್ ನೀಡಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ರಾಜಕೀಯ ಹಿನ್ನಲೆಯಿಂದ ಬಂದಿರೋದರಿಂದ ಈ ಬಾರಿಯ ಕದನ ಕಣ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಸಧ್ಯಕ್ಕೆ ಕೊಪ್ಪಳದಲ್ಲಿ ಬಿಜೆಪಿ ತೊರೆದು ತಮ್ಮದೇ ಪಕ್ಷವನ್ನು ಕಟ್ಟಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ಜನಾರ್ಧನ ರೆಡ್ಡಿ ಬಿಜೆಪಿಗೆ ಮರಳಿದ್ದಾರೆ. ಮಾತ್ರವಲ್ಲದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ವಹಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಟಿಕೆಟ್ ವಂಚಿತ ಹಾಲಿ ಸಂಸದ ಕರಡಿ ಸಂಗಣ್ಣ ಅವರ ಕೆಲವು ಬೆಂಬಲಿಗರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಬಿಜೆಪಿಗೆ ತಲೆನೋವಾಗಿದೆ.
ಹಾಗಾದರೆ ಕೊಪ್ಪಳ ಲೋಕಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ಚಿತ್ರಣ ಹೇಗಿದೆ? ಇಲ್ಲಿ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬಲಾಬಲಗಳೇನು ಅನ್ನೋದನ್ನ ತಿಳಿಯೋದಕ್ಕಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.