ದಾವಣಗೆರೆ ಲೋಕಸಭಾ ಕ್ಷೇತ್ರ: ಕುಟುಂಬದ ಕದನದಲ್ಲಿ ಗೆಲ್ಲೋದ್ಯಾರು..ಸೋಲೋದ್ಯಾರು..?

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಮೊದಲಿನಿಂದಲೂ ಸವಾಲಾಗಿ ನಿಂತಿರೋದು ದಾವಣಗೆರೆ ಲೋಕಸಭಾ ಕ್ಷೇತ್ರ. ಈ ಕ್ಷೇತ್ರ ಕಾಂಗ್ರೆಸ್ಗೆ ಕಬ್ಬಿಣದ ಕಡಲೆಯಂತೆ. ಯಾಕೆಂದರೆ 1996ರಿಂದ ಒಂದು ಸಾರಿ ಜಯಿಸಿದ್ದು ಬಿಟ್ಟರೆ ಸತತ 25 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಇನ್ನು 2004ರಿಂದ ಈ ಕ್ಷೇತ್ರದಲ್ಲಿನ ನಾಲ್ಕು ಬಾರಿ ಸತತವಾಗಿ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಗೆದ್ದಿದ್ದಾರೆ. ಆದರೆ ಈ ಬಾರಿ ಬಿಜೆಪಿಯ ಒಳಜಗಳದಿಂದಾಗಿ ಸಿದ್ದೇಶ್ವರ್ಗೆ ಟಿಕೆಟ್ ಕೈತಪ್ಪಬಹುದು ಎನ್ನಲಾಗಿತ್ತು. ಅದೇ ರೀತಿ ಅವ್ರಿಗೆ ಟಿಕೆಟ್ ತಪ್ಪಿದೆ. ಆದ್ರೆ ಸಿದ್ದೇಶ್ವರ್ ತಮ್ಮ ಟಿಕೆಟ್ ಅನ್ನು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕೂಡ ದಾವಣೆಗೆರೆ ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣ ಆಗಿದ್ದು ರೇಣುಕಾಚಾರ್ಯ , ರವೀಂದ್ರನಾಥ್ ಮೊದಲಾದ ನಾಯಕರು ಬಹಿರಂಗವಾಗೇ ವಿರೋಧವನ್ನ ವ್ಯಕ್ತ ಪಡಿಸ್ತಾ ಇದ್ದಾರೆ.
ಕಾಂಗ್ರೆಸ್ ಇಲ್ಲಿಂದ ಶಾಮನೂರು ಮಲ್ಲಿಕಾರ್ಜುನ್ ಅವ್ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಳಿಸಿದೆ. ಹೀಗಾಗಿ ಮತ್ತೆ ಕ್ಷೇತ್ರದಲ್ಲಿ ಶಾಮನೂರು ವರ್ಸಸ್ ಸಿದ್ದೇಶ್ವರ್ ಕುಟುಂಬ ಅನ್ನೋ ವಾತಾವಾರಣ ಇದೆ. ಈ ಕ್ಷೇತ್ರದಿಂದ ಸಚಿವ ಮಲ್ಲಿಕಾರ್ಜುನ್ ಅವರನ್ನೇ ಕಣಕ್ಕಿಳಿಸಲಾಗುತ್ತೆ ಅಂತ ಹೇಳಲಾಗಿತ್ತು. ಆದರೆ ಈ ಬಾರಿ ಮಹಿಳೆಯರಿಗೆ ಟಿಕೆಟ್ ಕೊಟ್ಟರೆ ಗೆಲುವು ಪಕ್ಕ ಅಂದು ಕೊಂಡಿರೋ ಕಾಂಗ್ರೆಸ್ ಇಲ್ಲಿಂದ ಮಲ್ಲಿಕಾರ್ಜುನ್ ಅವ್ರ ಪತ್ನಿಯನ್ನ ಕಣಕ್ಕಿಳಿಸಿದೆ. ಶಾಮನೂರು ಅವ್ರ ಸೊಸೆ ಹಾಗೂ ವೈದ್ಯಕೀಯ ವೃತ್ತಿಯಿಂದ ಕ್ಷೇತ್ರದಲ್ಲಿ ಹೆಸ್ರು ಮಾಡಿರೋ ಪ್ರಭಾ ಮಲ್ಲಿಕಾರ್ಜುನ್ ಅವ್ರು ಈ ಬಾರಿ ಬಿಜೆಪಿ ಗೆಲುವಿನ ಓಟಕ್ಕೆ ತಡೆಯಾಗುವ ಎಲ್ಲಾ ಸಾಧ್ಯತೆಗಳೂ ಇದೆ. ಹೀಗಾಗಿ ಈ ಕ್ಷೇತ್ರದಲ್ಲೂ ಕೂಡಾ ಸಮಬಲದ ಮುಖಾಮುಖಿಯನ್ನು ನಿರೀಕ್ಷಿಸಲಾಗುತ್ತಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳು ಹೇಗಿವೆ ಅನ್ನೋ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.