ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನ ನೋಡೋದಾದ್ರೆ ಸ್ಥಳಿಯ ನಾಯಕರ ವಿರೋಧವನ್ನ ಲೆಕ್ಕಿಸದೇ ಇಲ್ಲಿ ಹಾಲಿ ಸಂಸದ ಭಗವಂತ್ ಖೂಬಾ ಅವರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡಿದೆ. ಭಗವಂತ್ ಖೂಬಾ, ಬಾಬಾ ರಾಮ್ ದೇವ್ ಹಾಗೂ RSS ಮೂಲಕ ಟಿಕೆಟ್ ಪಡೆಯೋದ್ರಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಮಾತುಗಳಿವೆ. ಅವರು ಮೊದಲ ಬಾರಿ ಸ್ಪರ್ಧೆ ಮಾಡಿದಾಗಲೂ ಕೂಡಾ ಅವರ ಬೆನ್ನಿಗೆ ಬಾಬಾ ರಾಮ್ ದೇವ್ ನಿಂತಿದ್ರು. ಹೀಗಾಗಿ ಈ ಬಾರಿ ಕೂಡಾ ಅವರಿಗೆ ಟಕೆಟ್ ಸಿಕ್ಕಿದೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಏನಾದ್ರೂ ಮಾಡಿ ಭಗವಂತ್ ಖೂಬಾರನ್ನ ಕಟ್ಟಿ ಹಾಕ್ಬೇಕು ಅನ್ಕೊಂಡ ಕಾಂಗ್ರೆಸ್ ಅಲ್ಲಿ ಸಚಿವ ಈಶ್ವರ್ ಖಂಡ್ರೆ ಅವ್ರನ್ನ ಮತ್ತೆ ಕಣಕ್ಕಳಿಸೋ ಪ್ಲಾನ್ ಮಾಡಿತ್ತು. ಆದ್ರೆ ಖಂಡ್ರೆ ಹೈಕಮಾಂಡನ್ನು ಒಪ್ಪಿಸಿ, ತಮ್ಮ ಪುತ್ರ 26 ವರ್ಷದ ಸಾಗರ್ ಖಂಡ್ರೆ ಅವ್ರನ್ನ ಕಣಕ್ಕಿಳಿ ಸಿದ್ದಾರೆ. ಒಂದು ವೇಳೆ ಇಲ್ಲೇನಾದ್ರು ಸಾಗರ್ ಖಂಡ್ರೆ ಗೆದ್ದು ಬಿಟ್ರೆ ಅತ್ಯಂತ ಕಿರಿಯ ಸಂಸದ ಅನ್ನೋ ಹೆಗ್ಗಳಿಕೆಗೆ ಪಾತ್ರ ಆಗ್ತಾರೆ. ಆದ್ರೆ ಇಲ್ಲಿ ಗೆಲುವು ಅನ್ನೋದು ಎರಡು ಪಕ್ಷಗಳಿಗೂ ಅಷ್ಟೊಂದು ಸುಲಭವಾಗೇನು ಇಲ್ಲ. ಈ ಕ್ಷೇತ್ರದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.





Leave a Reply