ಮಾನವರ ಬೇಟೆಯ ಹುಚ್ಚಿಗೆ ಅಪರೂಪದಲ್ಲಿ ಅಪರೂಪ ಅನ್ನಿಸಿಕೊಂಡಿರೋ ಅನೇಕ ವನ್ಯಜೀವ ತಳಿಗಳು ಅಳಿವಿನ ಅಂಚಿಗೆ ತಲುಪಿವೆ. ನೀಲಗಿರಿ ಥಾರ್ಗಳು, ಏಷಿಯಾಟಿಕ್ ಲಯನ್ಸ್, ಸ್ಲೆಂಡರ್ ಲೋರೀಸ್, ಸಿಂಹಬಾಲದ ಕೋತಿಗಳು, ಬೆಂಗಾಲ್ ಟೈಗರ್ಸ್ ಸೇರಿದಂತೆ ಹಲವು ಅಪೂರ್ವ ಜೀವಿಗಳು ಬೆರಳೆಣಿಕೆಯಷ್ಟೇ ಉಳಿದುಕೊಂಡಿವೆ. ಅಳಿದುಳಿದ ಈ ಸಂಕುಲವನ್ನು ಉಳಿಸಿಕೊಳ್ಳೋದಕ್ಕೆ ಸರ್ಕಾರ ನಾನಾ ಯೋಜನೆಯನ್ನ ಹಮ್ಮಿಕೊಂಡಿದೆ. ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಲಯನ್, ಪ್ರಾಜೆಕ್ಟ್ ಕ್ರೊಕೊಡೈಲ್ ಹೀಗೆ ಕಾಲಕ್ಕನುಗುಣವಾಗಿ ನಾನಾ ಕಾರ್ಯಕ್ರಮಗಳನ್ನ ಜಾರಿಗೆ ತರುತ್ತಾ ಇದೆ. ಇಂತಹದ್ದೇ ಒಂದು ಅಳಿವಿನ ಅಂಚಿಗೆ ತಲುಪಿರುವ ಭಾರತೀಯ ಮೂಲದ ಅಪರೂಪದ ತಳಿಯ ಸಂರಕ್ಷಣೆಗಾಗಿ ಅರಣ್ಯ ...



