ಸುತ್ತಲೂ ಮೈಚಾಚಿ ನಿಂತಿರುವ ಸಸ್ಯಶ್ಯಾಮಲೆ. ಅದರ ತಪ್ಪಲಲ್ಲಿ ಮಲಗಿರುವ ವಿಶಾಲವಾದ ವಾರಧಿ . ಈ ಕೆರೆಯ ನಡುವಿನಲ್ಲಿ ನಕ್ಷತ್ರದಂತೆ ಕಂಗೊಳಿಸುತ್ತ ನಿಂತಿದೆ ಒಂದು ಪುಟ್ಟ ಬಸದಿ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ವರಂಗ ಅನ್ನೋ ಸ್ಥಳವಿದೆ. ಈ ಜಾಗ ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಸದಾ ಪ್ರವಾಸಿಗರನ್ನ ಆಕರ್ಷಿಸುತ್ತೆ. ಈ ವರಂಗ ಅನ್ನೋ ಪ್ರದೇಶ ಜೈನರ ಪ್ರಮುಖ ಆರಾಧನಾ ಕೇಂದ್ರಗಳನ್ನ ಕೂಡಾ ಹೊಂದಿದೆ. ಇಲ್ಲಿ ಹೊಯ್ಸಳ ಹಾಗೂ ಚಾಲುಕ್ಯ ವಾಸ್ತುಶಿಲ್ಪಗಳ ಸಮ್ಮಿಶ್ರನದಲ್ಲಿ ನಿರ್ಮಾಣವಾದ ಅನೇಕ ಬಸದಿಗಳನ್ನ ಕಾಣ್ಬಹುದು. ಅವುಗಳಲ್ಲಿ ವರಂಗದ ಪ್ರಖ್ಯಾತ ಕೆರೆ ಬಸದಿಯೂ ಒಂದು. ...

ನಮ್ಮ ಪುರಾಣಗಳಲ್ಲಿ ಏಳು ನಗರಿಗಳನ್ನ ಅತ್ಯಂತ ಪುರಾತನ ನಗರಿಗಳನ್ನಾಗಿ ಗುರುತಿಸಲಾಗಿದೆ. “ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ| ಪುರೀ ಧ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ||” ಉತ್ತರಪ್ರದೇಶದಲ್ಲಿರೋ ಅಯೋಧ್ಯೆ, ಮಥುರಾ ಹಾಗೂ ಕಾಶಿ, ಉತ್ತರಾಕಾಂಡ್ನಲ್ಲಿರೋ ಹರಿದ್ವಾರ, ತಮಿಳುನಾಡಿನ ಕಾಂಚಿ , ಮಧ್ಯಪ್ರದೇಶದಲ್ಲಿರೋ ಅವಂತಿಕಾ ಅಂದ್ರೆ ಇಂದಿನ ಉಜ್ಜೈನಿ, ಗುಜರಾತ್ನ ದ್ವಾರಾವತಿ ಅಂದ್ರೆ ದ್ವಾರಕೆಗಳನ್ನ ಸಪ್ತ ಪುರಿಗಳು, ಸಪ್ತ ನಗರಿಗಳು ಅಂದ್ರೆ ಅತ್ಯಂತ ಪ್ರಮುಖವಾದ ಅತ್ಯಂತ ಹಳೆಯ ನಗರಗಳು ಅಂತ ಗುರುತಿಸಲಾಗುತ್ತೆ. ಈ ಏಳೂ ನಗರಗಳು ಪುರಾಣಗಳಲ್ಲಿ ಮಾತ್ರವಲ್ಲದೇ ಐತಿಹಾಸಿಕವಾಗಿಯೂ ತನ್ನದೇ ಆದ ಮಹತ್ವವನ್ನ ಹೊಂದಿವೆ. ...

ಕೇರಳದ ತಿರುವನಂತಪುರಂನಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ತಿಳಿಯದವರೇ ಕಡಿಮೆ. ಲಕ್ಷಾಂತರ ಕೋಟಿ ಚಿನ್ನಾಭರಣಗಳನ್ನ ಹೊಂದಿರೋ ಅನಂತ ಪದ್ಮನಾಭ ಸ್ವಾಮಿ, ತಿರುಪತಿಯ ತಿಮ್ಮಪ್ಪನನ್ನು ಹಿಂದಿಕ್ಕಿದ್ದ ದೇವರಾಗಿದ್ದ. ಹೀಗಾಗೀ ಆ ದೇವಾಲಯಕ್ಕೆ ಹೆಚ್ಚಿನ ಭದ್ರತೆಯನ್ನ ಕೊಡಲಾಗಿತ್ತು. ಎಲ್ಲಿ ನೋಡಿದರೂ ಸಿಸಿ ಕೆಮೆರಾಗಳು, ಸಿಂಪಲ್ಲಾಗಿ ಪಂಚೆಯುಟ್ಟು ದೇವಾಲಯದ ಒಳಗೆ ಕಾವಲು ಕಾಯ್ತಿದ್ದ ಮಿಲಿಟರಿ; ಯಾವ ಅಧಿಕಾರಿಯ ಸೊಂಟದಲ್ಲಿ ನೋಡಿದ್ರು ಅತ್ಯಾಧುನಿಕ ಆಯುಧಗಳು! ಇದು ಅನಂತ ಪದ್ಮನಾಭನ ದೇವಾಲಯದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯಗಳು. ಆ ದೇವಾಲಯನ್ನು ಸಂಪೂರ್ಣವಾಗಿ ಮಿಟಲಿರಿ ಆವರಿಸಿಕೊಂಡು ಬಿಟ್ಟಿದೆ. ಅದಕ್ಕೆ ಕಾರಣ ಅಲ್ಲಿರೋ ...

ಕೇರಳ ಅಂದ್ರೆ ಗಾಡ್ಸ್ ಓನ್ ಕಂಟ್ರಿ, ದೇವರ ನಾಡು ಅಂತಾನೇ ಪ್ರಸಿದ್ಧಿ, ಇಲ್ಲಿ ಪುರಾಣಗಳೊಂದಿಗೆ ನಂಟನ್ನು ಹೊಂದಿದ ದೇವಾಲಯಗಳು ಅನೇಕ. ತನ್ನದೇ ಆದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಿಂದ, ಪ್ರಕೃತಿ ಸೌಂದರ್ಯದಿಂದ, ಪದ್ಧತಿಗಳಿಂದ ಗಮನ ಸೆಳೆಯುತ್ತೆ. ಈ ವಿಶಿಷ್ಟ ಪರಂಪರೆಗೆ ಸೇರಿದ ಒಂದು ದೇವಾಲಯ ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯ. ಇಲ್ಲಿ ಶಿವನನ್ನ ಲಿಂಗ ರೂಪದಲ್ಲಿ ಪೂಜಿಸಲಾಗುತ್ತೆ.ಕಾಸರಗೋಡು ಕೇರಳಕ್ಕೆ ಸೇರಿದ ಪ್ರದೇಶವಾದ್ರೂ ಕನ್ನಡದೊಂದಿಗೆ ಅವಿನಾಭಾವ ಸಂಬಂಧವನ್ನ ಹೊಂದಿದೆ. ಪುರಾಣ ಐತಿಹ್ಯಗಳ ಜೊತೆ ಬೆಸೆದುಕೊಂಡಿರುವ ಈ ಅಡೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ...