ಸ್ನೇಹಿತರೇ ಒಮ್ಮೆ ರಣರಂಗಕ್ಕೆ ಇಳಿದ ಮೇಲೆ ಸೋಲು, ಗೆಲುವು ಶತಸಿದ್ದ. ಯುದ್ದವೆಂದ ಮೇಲೆ ಸೋತವನು ಗೆದ್ದವನಿಗೆ ಶರಣಾಗಬೇಕು, ಸೋಲನ್ನು ಒಪ್ಪಿಕೊಳ್ಳಲೇಬೇಕು. ಹಾಗಂತ ಎಲ್ಲಾ ಯುದ್ದಗಳಲ್ಲಿ ಗೆದ್ದವನೇ ಗೆಲ್ಲಬೇಕು ಎನ್ನುವ ನಿಯಮವೇನೂ ಇಲ್ಲ. ಜಗತ್ತು ಕಂಡ ಅತ್ಯಂತ ಪರಾಕ್ರಮಿಗಳು ಕೂಡ ಒಂದಲ್ಲಾ ಒಂದು ಕಡೆ ಸೋಲನ್ನು ಅನುಭವಿಸಿರುವ ಅನೇಕ ಉದಾಹರಣೆಗಳಿವೆ. ಹಾಗೆ ಸೋಲಿನ ಕಹಿ ಅನುಭವಿಸಿದವರು ಅದಕ್ಕೆ ಪ್ರತಿಕಾರವಾಗಿ ಮರಳಿ ಗೆಲುವು ಸಾಧಿಸಿದ್ದೂ ಇದೆ. ಇನ್ನು ನೂರಾರು ಯುದ್ದಗಳನ್ನ ಮಾಡಿ ಯಾವುದರಲ್ಲೂ ಸೋಲನ್ನೇ ಅನುಭವಿಸದ ಮಹಾವೀರರು ಜಗತ್ತಿನಲ್ಲಿ ಕೆಲವೇ ಕೆಲವರು ಇದ್ದಾರೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ...
ಸ್ನೇಹಿತರೆ ಭಾರತದ ಪುಣ್ಯ ನೆಲದ ಮೇಲೆ ಹಾಗು ಭಾರತೀಯ ಭಾವನೆಗಳ ಮೇಲೆ ಪರಕೀಯರ ದಾಳಿ ನಡೆದದ್ದು, ಇಲ್ಲಿಯ ಸಂಸ್ಕೃತಿಯನ್ನ ಹಾಳು ಮಾಡುವ ಕೆಲಸ ಮಾಡಿದ್ದು ಇತಿಹಾಸದ ಪುಟ ಪುಟಗಳೂ ಹೇಳುತ್ತವೆ. ವ್ಯಾಪಾರಿಗಳ ಸೋಗಿನಲ್ಲಿ ಬಂದ ಪರಕೀಯರು ಭಾರತದ ಶ್ರೀಮಂತಿಕೆಯನ್ನ ದೋಚಿ, ಬಾರತೀಯರನ್ನೇ ಗುಲಾಮರನ್ನಾಗಿಸಿಕೊಂಡ ಬಗ್ಗೆ ಅನೇಕ ಸಾಕ್ಷ್ಯಿಗಳಿವೆ. ಅದೇ ರೀತಿ ಬ್ರಿಟೀಷರು ಭಾರತದಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಸಾಮಾಜಿಕ ಕ್ಷೇತ್ರಕ್ಕೂ ಒಂದಷ್ಟು ಕೊಡುಗೆಗಳನ್ನ ಕೊಟ್ಟಿದ್ದಾರೆ ಅನ್ನೋದನ್ನು ಕೂಡ ನಾವು ಓದಿ ತಿಳಿದುಕೊಂಡಿದ್ದೇವೆ. ಹೀಗೆ ಇತಿಹಾಸದ ಪುಟಗಳನ್ನ ತಿರುವಿ ಹಾಕುತ್ತಾ ಹೋದ್ರೆ ಭಾರತೀಯ ವಾಸ್ತು ...




