ಕೇರಳದ ತಿರುವನಂತಪುರಂನಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ತಿಳಿಯದವರೇ ಕಡಿಮೆ. ಲಕ್ಷಾಂತರ ಕೋಟಿ ಚಿನ್ನಾಭರಣಗಳನ್ನ ಹೊಂದಿರೋ ಅನಂತ ಪದ್ಮನಾಭ ಸ್ವಾಮಿ, ತಿರುಪತಿಯ ತಿಮ್ಮಪ್ಪನನ್ನು ಹಿಂದಿಕ್ಕಿದ್ದ ದೇವರಾಗಿದ್ದ. ಹೀಗಾಗೀ ಆ ದೇವಾಲಯಕ್ಕೆ ಹೆಚ್ಚಿನ ಭದ್ರತೆಯನ್ನ ಕೊಡಲಾಗಿತ್ತು. ಎಲ್ಲಿ ನೋಡಿದರೂ ಸಿಸಿ ಕೆಮೆರಾಗಳು, ಸಿಂಪಲ್ಲಾಗಿ ಪಂಚೆಯುಟ್ಟು ದೇವಾಲಯದ ಒಳಗೆ ಕಾವಲು ಕಾಯ್ತಿದ್ದ ಮಿಲಿಟರಿ; ಯಾವ ಅಧಿಕಾರಿಯ ಸೊಂಟದಲ್ಲಿ ನೋಡಿದ್ರು ಅತ್ಯಾಧುನಿಕ ಆಯುಧಗಳು! ಇದು ಅನಂತ ಪದ್ಮನಾಭನ ದೇವಾಲಯದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯಗಳು. ಆ ದೇವಾಲಯನ್ನು ಸಂಪೂರ್ಣವಾಗಿ ಮಿಟಲಿರಿ ಆವರಿಸಿಕೊಂಡು ಬಿಟ್ಟಿದೆ. ಅದಕ್ಕೆ ಕಾರಣ ಅಲ್ಲಿರೋ ...