ಸ್ನೇಹಿತರೇ. ಪ್ರತೀ ವರ್ಷದ ಹಾಗೇ ಈ ವರ್ಷದ ಫೆಬ್ರುವರಿ 15 ರಂದು  ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ಆಚರಿಸಲಾಗ್ತಾ ಇದೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸೋದು, ಕ್ಯಾನ್ಸರ್‌ನ ಮೊದಲ ಹಂತದ ಪತ್ತೆ,  ರೋಗನಿರ್ಣಯ, ಕಡಿಮೆ ಮತ್ತು ಗುಣಮಟ್ಟದ ಔಷಧಿಗಳ ಲಭ್ಯತೆ, ಉತ್ತಮ ಚಿಕಿತ್ಸೆ, ಕ್ಯಾನ್ಸರ್ನಿಂದ ಬಳಲ್ತಾ ಇರೋ ಮಕ್ಕಳಿಗೆ ಉತ್ತಮ ಆರೈಕೆ, ಸ್ವಚ್ಛತೆ, ರೇಡಿಯೊಥೆರಪಿ, ಕೋಬಾಲ್ಟ್-60 ನಂತಹ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡೋದು ಇದರ ಮುಖ್ಯ ಉದ್ದೇಶ. ಇನ್ನು  ಕ್ಯಾನ್ಸರ್‌ ಅನ್ನೋ ಪದ ಕೇಳಿದ ತಕ್ಷಣ  ಒಂದು ಸಾರಿ ಆತಂಕ, ಭಯ ಶುರುವಾಗುತ್ತೆ. ...