ಭಾರತದ ಪಾಲಿಗೆ ಮೋಸ್ಟ್ ವಾಂಟೆಂಟೆಡ್ ಅನ್ನಿಸಿಕೊಂಡಿದ್ದ, ಲಷ್ಕರ್ ಎ ತಯ್ಯೇಬಾದ ಮುಖ್ಯಸ್ಥ ಸಯದ್ ಹಫೀಜ್ ಇದಾನಲ್ಲಾ, ಅವನ ಅನುಚರನೊಬ್ಬ ಪಾಕಿಸ್ತಾನದ ಕರಾಚಿಯಲ್ಲಿ, ನಿಗೂಢವಾಗಿ ಸಾವಿಗೀಡಾಗಿದಾನೆ. ಮೊನ್ನೆ ಕರಾಚಿಯ ಸಾಮಾನಾಬಾದ್ ನ ಮಸೀದಿಯೊಂದರ ಮುಂದೆ ಅವನನ್ನ ಹೊಡೆದು ಕೆಡವಲಾಗಿದೆ.. ಅವನ ಮೇಲೆ ಗುಂಡಿನ ದಾಳಿ ನಡೀತಿದ್ದ ಹಾಗೇ ಅವನ ಜೊತೆಗಿದ್ದವರು, ಪ್ರಾಣ ಕಾಪಾಡಿಕೊಳ್ಳೋದಕ್ಕೆ ಓಡಿ ಹೋಗ್ತಾ ಇರೋ ದೃಶ್ಯಗಳು, ಇವನು ನೆಲಕ್ಕೆ ಕುಸಿದು ಬಿದ್ದ ದೃಶ್ಯದ ವಿಡಿಯೋ ಒಂದು ಪಾಕಿಸ್ತಾನ ಹಾಗೂ ಭಾರತದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.. ಅಲ್ಲಿ ಹಾಗೆ ನೆಲಕ್ಕೆ ಉರುಳೀದವನು ಹೆಸರು ...

ಈ ಭೂಮಿಯ (Earth) ಮೇಲೆ ಜೀವಿಗಳು ಇರೋದಕ್ಕೆ ಕಾರಣವೇ ನೀರು(Water) ಅಂತ ಹೇಳಲಾಗುತ್ತೆ. ನೀರನ್ನ ಜೀವಜಲ ಅಂತ ಕರೆಯಲಾಗುತ್ತೆ..ಕೆಲವು ಪುಣ್ಯ ಕ್ಷೇತ್ರಗಳಲ್ಲಿ ಹರಿಯುವ ನದಿಗಳಲ್ಲಿನ (River) ನೀರನ್ನ ಮುಟ್ಟಿದ್ರು ನಮ್ಮ ಪಾಪಗಳು ನಿವಾರಣೆ ಆಗುತ್ವೆ ಅಂತ ಹೇಳ್ತಾರೆ. ಆದ್ರೆ ಅಲ್ಲೊಂದು ಸರೋವರ (Lake) ಇದೆ. ಆ ಸರೋವರದ ನೀರನ್ನ ಮುಟ್ಟಿದ್ರು ಸಾಕು ಪ್ರಾಣಿಗಳು ಕಲ್ಲಾಗುತ್ವೆ. ಆ ನೀರಿಗೆ ಧುಮುಕುವ ಪಕ್ಷಿಗಳು (Bird) ಮೇಲಕ್ಕೆ ಬರೋದೇ ಇಲ್ಲಾ; ಪ್ರಾಣಿಗಳು (Animal) ಮತ್ತೆ ಉಸಿರಾಡೊದೇ ಇಲ್ಲಾ! ಆ ನೀರಲ್ಲಿ ಮನುಷ್ಯ(Human) ಹೆಚ್ಚು ಹೊತ್ತು ಇರೋದಕ್ಕೆ ಸಾಧ್ಯವೇ ಇಲ್ಲ. ...

ಆರ್ಮೇನಿಯಾ (Armenia) ಹಾಗೂ ಅಜರ್ಬೈಜಾನ್ (Azerbaijan) ನಡುವಿನ ಬಿಕ್ಕಟ್ಟು ಹೆಚ್ಚಾಗ್ತಾ ಇದೆ. ಇಂತಹ ಸಂದರ್ಭದಲ್ಲಿ ಆರ್ಮೇನಿಯಾ ಭಾರತದ (India) ಜೊತೆಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ಭಾರತ ತನ್ನ ಭಯಾನಕ ಅಸ್ತ್ರಗಳ ಪೈಕಿ ಒಂದಾದ ಪಿನಾಕ ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್ಗಳನ್ನ ಆರ್ಮೇನಿಯಾಗೆ ಮಾರಾಟ ಮಾಡ್ತಾ ಇದೆ. ಈಗ ಮೊದಲ ಪಿನಾಕ ಕನ್ಸೈನ್ ಮೆಂಟ್ ಆರ್ಮೇನಿಯಾವನ್ನ ತಲುಪ್ತಾ ಇದ್ದು, ಇದು ಅಜರ್ಬೈಜಾನ್ ಆತಂಕಕ್ಕೆ ಕೂಡಾ ಕಾರಣವಾಗ್ತಾ ಇದೆ. ಈ ಹಿನ್ನಲೆಯಲ್ಲಿ ಅಜರ್ಬೈಜಾನ್‌ ಭಾರತಕ್ಕೆ ಹಿತೋಪದೇಶ ನೀಡೋದಕ್ಕೆ ಶುರು ಮಾಡಿದ್ದು, “ನೀವು ಆಲಿಪ್ತ ನೀತಿಯನ್ನ ಅಪ್ಪಿಕೊಂಡವರು. ಯಾವುದೇ ...

ರಿಷಿ ಸುನಕ್ ಭಾರತೀಯ ಮೂಲದ ಹಿಂದೂ ಕುಟುಂಬದಲ್ಲಿ ಜನಿಸಿದ್ರು. ಅವ್ರ ತಾತ ಭಾರತದ ಪಂಜಾಬ್ನಿಂದ ಪೂರ್ವ ಆಫ್ರಿಕಾದ ಕೀನ್ಯಾಕ್ಕೆ ವಲಸೆ ಹೋಗಿದ್ರು.. ಅಲ್ಲಿ ಭಾರತೀಯರ ಮೇಲೆ ಸಮಸ್ಯೆಗಳು ಹೆಚ್ಚಾದಾಗ ಅಲ್ಲಿಂದ ಆ ಕುಂಟುಂಬ ಬ್ರಿಟನ್ಗೆ ವಲಸೆ ಹೋಯ್ತು. ರಿಷಿ ಸುನಕ್ ಅವ್ರ ತಾಯಿ ಪಾರ್ಮಾಸಿಸ್ಟ್ ಆಗಿದ್ದು, ರಿಷಿಯವ್ರ ತಂದೆ ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಜನರಲ್ ಪ್ರಾಕ್ಟೀಷಿಯನರ್ ಆಗಿದ್ರು. ರಿಷಿ ಸುನಕ್ ಆಕ್ಸ್ಫರ್ಡ್ ವಿಶ್ವಾವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. 2009ರಲ್ಲಿ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಮಗಳು ಅಕ್ಷತಾ ರನ್ನ ಮದುವೆ ಆದ್ರು.ಈ ದಂಪತಿಗೆ ...

ಇಂದು ಬ್ರಿಟನ್ ನಲ್ಲಿ ನಡೆದ ಕನ್ಸರ್ವೇಟಿವ್ ಪಕ್ಷದ ಸದಸ್ಯರ ಸಭೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್ ರನ್ನ ಬ್ರಿಟನ್ನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ..ರಿಷಿಗೆ ಈ 190 ಸಂಸದರ ಬೆಂಬಲ ಸಿಕ್ಕಿದೆ..ಆದ್ರೆ ಅವ್ರ ವಿರೋಧಿ ಪೆನಿ ಮಾರ್ಡಂಟ್ ನೂರು ಜನ ಸಂಸದರ ಬಲವನ್ನ ಪಡೆಯೋದ್ರಲ್ಲಿ ವಿಫಲರಾದ್ರು..ಹೀಗಾಗಿ ಅವ್ರು ನಾಮಪತ್ರ ಸಲ್ಲಿಸೋದಕ್ಕೂ ಕೂಡಾ ಆಗಲಿಲ್ಲಾ..ಈ ಹಿನ್ನಲೆಯಲ್ಲಿ ಕನ್ಸರ್ವೇಟೀವ್ ಪಕ್ಷದ ನಾಯಕನಾಗಿ ರಿಷಿ ಸುನಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ..ಅಲ್ಲದೇ ಅವ್ರು ಮುಂದೆ ಬ್ರಿಟನ್ನ ಪ್ರಧಾನಿಯಾಗಿ ಕೂಡಾ ಕಾರ್ಯ ನಿರ್ವಹಿಸಲಿದ್ದಾರೆ..ರಿಷಿ ಸುನಕ್ ಕರ್ನಾಟಕದ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವ್ರ ...

ಮಹತ್ತರ ಬೆಳವಣಿಗೆಯಲ್ಲಿ ಬ್ರಿಟನ್ನ ಪ್ರಧಾನಿ ರೇಸ್ನಿಂದ ಬೋರೀಸ್ ಜಾನ್ಸನ್ ಹಿಂದೆ ಸರಿಸಿದ್ದಾರೆ.. ಈ ಮೂಲಕ ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ನ ಪ್ರಧಾನಿಯಾಗೋದಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾದಂತಿದೆ..ಈಗಗಲೇ 146 ಸಂಸದರ ಬಲವನ್ ಹೊಂದಿರೋ ಸುನಕ್ಗೆ ಪ್ರಬಲ ಎದುರಾಳಿಗಳು ಇಲ್ಲದಂತಾಗಿದ್ದಾರೆ..ಹೀಆಗಿ ಸುನಕ್ರ ಹಾದಿ ಸುಗಮ ಆಗಬಹುದು.. ಮೊನ್ನೆಯಷ್ಟೇ ರಿಷಿ ಸುನಕ್ ಹಾಗೂ ಬೋರಿಸ್ ಜಾನ್ಸನ್ ಇಬ್ರು ಪರಸ್ಪರ ಮಾತಾಡಿದ್ರು..ಲೀಜ್ ಟ್ರಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸೋದಾಗಿ ಹೇಳಿಕೊಂಡಿದ್ದ ಬೋರಿಸ್ ಜಾನ್ಸನ್ ಮತ್ತೊಬ್ಬ ,ಅಭ್ಯರ್ಥಿ ರಿಷಿ ಸುನಕ್ ಜೊತೆ ಮಾತಾಡಿದ್ದು ಬಾರಿ ಸುದ್ದಿ ಮಾಡಿತ್ತು.. ಈಗ ಜಾನ್ಸನ್ ...

ಸ್ನೇಹಿತರೇ..,   ನೀವು ಆಟೋಮ್‌ ಬಾಂಬ್‌, ಟೈಮ್ ಬಾಂಬ್‌ ಹೈಡ್ರೋಜನ್ ಬಾಂಬ್‌ ಸೇರಿದ ಹಾಗೆ ಬಾಂಬ್‌ ಗಳ ಬಗ್ಗೆ ಬಹಳಷ್ಟು ಕೇಳಿರ್ತೀರಾ. ಅವುಗಳಿಂದ ಆಗೋ ಎಲ್ಲಾ ರೀತಿಯ ದುಷ್ಟರಿಣಾಮಗಳು ಹಾಗೂ ಸಾವು ನೋವಿನ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತಿರುತ್ತೆ. ಜಪಾನ್‌ ನ ಹಿರೋಷಿಮಾ ನಾಗಸಾಕಿಯ ದುರಂತ ಕಥೆಯೂ ನಿಮ್ಮ ಮುಂದೆ ಇದ್ದೇ ಇರುತ್ತೆ. ಆದ್ರೆ ನೀವು ಇವೆಲ್ಲವನ್ನೂ ಮೀರಿದ ವಾಟರ್‌ ಬಾಂಬ್‌ ಬಗ್ಗೆ ಕೇಳಿದ್ದೀರಾ..? ನೀರಾವರಿಗೆ ಅಂತ ಕಟ್ಟಿದ ಡ್ಯಾಂ ಒಂದು ಲಕ್ಷಾಂತರ ಮಂದಿಯ ಜೀವನವನ್ನ ಆತಂಕಕ್ಕೆ ತಳ್ಳಿರೋ ಕಥೆ ನಿಮಗೆ ಗೊತ್ತಿದ್ಯಾ..?. ಅದೊಂದು ...

ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು ಅದೊಂದು ಆಘಾತಕಾರಿ ಅಂಶ. “ ಸಾವಿನ ವ್ಯಾಪಾರಿಯ ಸಾವು..!! ” ಅನ್ನೋ ಶಿರೋನಾಮೆಯ ಜೊತೆಗೆ ಪುಟಗಟ್ಟಲೆ ವರದಿ. ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಆತನ ಕಣ್ಣುಗಳು ಮಂಜಾದವು. ಒಂದರೆಕ್ಷಣ ತಾನು ಗಳಿಸಿದ್ದ ಮಿಲಿಯನ್‌ಗಟ್ಟಲೆ ಆಸ್ತಿಪಾಸ್ತಿ, ಬಂದು ಬಳಗ, ಗೆಳೆಯರು ಎಲ್ಲವೂ ಆತನ ಕಣ್ಣ ಮುಂದೆ ಹಾದು ಹೋದಂತಾಯಿತು. ಆತನ ಸಹೋದರ ಮೃತಪಟ್ಟಿರುವುದನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದ ಪತ್ರಿಕೆಗಳು ಆತನೇ ಮೃತಪಟ್ಟಿದ್ದಾನೆ ಎಂಬರ್ಥದಲ್ಲಿ ಸುದ್ದಿ ಪ್ರಕಟಿಸಿದ್ದವು. ಪತ್ರಿಕೆಗಳ ತುಂಬೆಲ್ಲಾ ಆತನ ರಂಗು ರಂಗಾದ ಪೊಟೋಗಳು. ಸಹೋದರನ ಅಗಲುವಿಕೆಯಿಂದ ನೊಂದಿದ್ದ ಆತನ ಮನಸ್ಸು ಮತ್ತಷ್ಟು ವೇದನೆ ...

ಗೆಳೆಯರೇ, ಭಾರತೀಯರು ಸಮುದ್ರ ವ್ಯಾಪಾರಗಳನ್ನ ಮಾಡೋದಕ್ಕೆ ಶುರ ಆಡಿದ್ದು ಯಾವಾಗ..? ಈ ಪ್ರಶ್ನೆಗೆ ಖಚಿತವಾದ ಉತ್ತರವನ್ನ ಹುಡುಕೋದು ತುಂಬಾ ಕಷ್ಟ.. ಅರಬ್ ವ್ಯಾಪಾರಿಗಳ ಮೇಲೆ ಭಾರತದ ಸಮುದ್ರ ವ್ಯಾಪಾರ ಸಂಪೂರ್ಣವಾಗಿ ಅವಲಂಬಿತವಾಗಿತ್ತು ಅನ್ನೋದನ್ನ ನಾವು ಪದೇ ಪದೇ ಓದ್ತಾ ಇರ್ತೀವಿ.. ಅರಬರು ತಂದು ಕೊಡೋ ಕುದುರೆಗಳಿಗಾಗಿ ವಿಜಯ ನಗರ ಸಾಮ್ರಾಟ ಶ್ರೀ ಕೃಷ್ಣ ದೇವರಾಯ ಕಾಯ್ತಿದ್ದ. ಆ ಕುದುರೆಗಳನ್ನ ಅವರು ಬಿಜಾಪುರ ಹಾಗೂ ಇನ್ನಿತರ ಮುಸ್ಲಿಂ ಸುಲ್ತಾನರಿಗೆ ಕೊಡ್ತಿದಾರೆ ಅನ್ನೋ ಕಾರಣಕ್ಕಾಗಿನೇ, ಮೂರೂ ಸಮುದ್ರಗಳ ಮೇಲೆ ರಾಯ ಹಿಡಿತ ಸಾಧಿಸಿದ್ದ. ಪೋರ್ಚುಗೀಸರನ್ನ ಕೃಷ್ಣದೇವರಾಯ, ಗೋವಾ ...

ಧೂಮಪಾನ, ಮದ್ಯಪಾನದಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಸುವ ಹಲವಾರು ಜಾಹಿರಾತುಗಳನ್ನ ಹಾಗೂ ಶಾಸನ ವಿಧಿಸಿರುವ ಎಚ್ಚರಿಕೆಗಳನ್ನ ನೀವು ಸದಾ ನೋಡುತ್ತಲೇ ಇರುತ್ತೀರಿ. ಆದರೆ ಇದು ಅಂತಹ ಗಂಭೀರ ವಿಚಾರ ಅಲ್ಲಾ ಅನ್ನೋದು ಬಹಳಷ್ಟು ಮಂದಿಯ ಭಾವನೆಯಾಗಿರುತ್ತದೆ. ಪ್ರತಿನಿತ್ಯ ಕ್ಯಾನ್ಸರ್‌ ಬಗ್ಗೆ ಎಚ್ಚರಿಸುವ ಹಲವಾರು ಅಭಿಯಾನಗಳು ಜಾಗತಿಕ ಮಟ್ಟದಲ್ಲಿ ನಿರಂತರವಾಗಿದ್ದರೂ ಸಹ ಕ್ಯಾನ್ಸರ್‌ ಗೆ ಕಾರಣವಾಗುವ ಅಂಶಗಳ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇವೆಲ್ಲದರ ನಡುವೆ ಪ್ರತಿವರ್ಷ ಫೆಬ್ರವರಿ ೪ ನ್ನು ವಿಶ್ವ ಕ್ಯಾನ್ಸರ್‌ ದಿನವನ್ನಾಗಿ ಆಚರಿಸಲಾಗುತ್ತಿದೆ. ಕ್ಯಾನ್ಸರ್‌ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವುದು ...