ವಿಶ್ವದ ನ.1  T20 ಆಟಗಾರರ ಸ್ಥಾನಕ್ಕೆ ಭಾರತೀಯರು

ಭಾರತದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ವಿಶ್ವದ ನ.1 T20 ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಬ್ಯಾಟಿಂಗ್ ವಿಬಾಗದಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನವನ್ನ ಅಲಂಕರಿಸಿದ್ದಾರೆ.
ವಿಶ್ವ T20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಿ ಅನ್ನಿಸಿಕೊಂಡಿದ್ದ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನ 23 ವರ್ಷದ ಭಾರತೀಯ ಕ್ರಿಕೆಟಿಗ ರವಿ ಬಿಷ್ನೋಯಿ ಹಿಂದಿಕ್ಕಿದ್ದಾರೆ. ಐಪಿಯಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಗುರುತಿಸಿಕೊಂಡಿದ್ದ ರವಿ ಬಿಷ್ಣೋಯ್, ಆಸಿಸ್ ವಿರುದ್ಧದ T20 ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನ ನೀಡಿ ಮೊದಲ ಸ್ಥಾನಕ್ಕೇರಿದ್ದಾರೆ.
ಆಸಿಸ್ ಸಿರೀಸ್ಗೂ ಮುನ್ನ ರವಿ ಬಿಷ್ಣೋಯ್664 ರೇಟಿಂಗ್ ಪಾಯಿಂಟ್ಗಳೊಂದಿಗೆ 5ನೇ ಸ್ಥಾನದಲ್ಲಿದ್ರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಐದು ಪಂದ್ಯಗಳಲ್ಲಿ 9 ವಿಕೆಟ್ ಪಡೆದು 34 ಅಂಕಗಳನ್ನ ಹೆಚ್ಚಿಸಿಕೊಂದ ಬಿಷ್ಣೋಯ್, ಅಫ್ಘಾನಿ ಬೌಲರ್ ರಶೀದ್ ಖಾನ್ ಅನ್ನು 7 ಅಂಕಗಳಿಂದ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. 2022ರ ಫೆಬ್ರವರಿಯಲ್ಲಿ ವಿಶ್ವ T20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ರವಿಬಿಷ್ಣೋಯ್ ಆಡಿರುವ 21 ಪಂದ್ಯಗಳಲ್ಲಿ ಒಟ್ಟು 34 ವಿಕೆಟ್ಗಳನ್ನ ಪಡೆದುಕೊಂಡಿದ್ದಾರೆ.
ಅದಾಗಲೇ T20 ರ್ಯಾಂಕಿಂಗ್ನಲ್ಲಿ ನ.1 ಬ್ಯಾಟ್ಸ್ಮ್ಯಾನ್ ಅನ್ನಿಸಿಕೊಂಡಿರೋ ಸೂರ್ಯಕುಮಾರ್ಯಾದವ್, ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ತಂಡದ ನಾಯಕತ್ವವನ್ನ ವಹಿಸಿದ್ದ ಸೂರ್ಯಕುಮಾರ್ಯಾದವ್ 4-1 ಅಂತರದ ಗೆಲುವನ್ನ ಸಾಧಿಸುವುದರೊಂದಿಗೆ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ದಾರೆ.