ಬ್ರಿಟನ್‌ಗೆ ತಲೆನೋವಾದ ನಿರಾಶ್ರಿತರು..!

ನಿರಾಶ್ರಿತರ ಸಮಸ್ಯೆಯ ಕಾರಣದಿಂದ ಆಫ್ರಿಕಾದ ರವಾಂಡದ ಜೊತೆ ಬ್ರಿಟನ್ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈಗ ಇದು ಬ್ರಿಟನ್ ಸರ್ಕಾರದಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣ ಆಗ್ತಿದ್ದು, ಈ ಒಪ್ಪಂದವನ್ನ ವಿರೋಧಿಸಿ ಇಮಿಗ್ರೇಶನ್ ಮಿನಿಸ್ಟರ್ ರಾಬರ್ಟ್ ಜೆನ್ರಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ರವಾಂಡ ಜೊತೆಗಿನ ಒಪ್ಪಂದದಲ್ಲಿ ಬ್ರಿಟನ್ಗೆ ಬರುವ ನಿರಾಶ್ರಿತರನ್ನ ರವಾಂಡಾಗೆ ಕಳುಹಿಸುವ ಬಗ್ಗೆ ಹಾಗೂ ರವಾಂಡ ಸರ್ಕರಕ್ಕೆ ಬ್ರಿಟನ್ ಒಂದಷ್ಟು ಪರಿಹಾರವನ್ನ ಕೊಡುವ ಬಗ್ಗೆ ನಿರ್ಧಾರಗಳನ್ನ ಮಾಡಲಾಗಿದೆ. ನಿರಾಶ್ರಿತ ಸಮಸ್ಯೆಯಿಂದ ತಪ್ಪಿಸಿಕೊಳ್ಳೋಕೆ ಸಿದ್ದ ಆದ ಈ ಒಪ್ಪಂದ ಈಗ ಬ್ರಿಟನ್ ಸರ್ಕಾರಕ್ಕೆ ತೀವ್ರ ಸಂಕಷ್ಟವನ್ನ ತಂದೊಡ್ತಿದೆ..
ಈ ಒಪ್ಪಂದದ ಪ್ರಸ್ತಾಪ ಆಡಳಿತ ಪಕ್ಷ ಎನಿಸಿಕೊಂಡ ಕನ್ಸರ್ವೇಟಿವ್ ಪಕ್ಷದಲ್ಲೇ ಪ್ರಧಾನಮಂತ್ರಿ ರಿಷಿ ಸುನಕ್ ವಿರುದ್ದ ಅಭಿಪ್ರಾಯ ಮೂಡುವಂತೆ ಮಾಡಿದೆ. ಈ ಒಪ್ಪಂದ ಮತ್ತೊಮ್ಮೆ ಬ್ರಿಟನ್ನಲ್ಲಿ ಸರ್ಕಾರ ಬೀಳೋದಕ್ಕೆ, ಪ್ರಧಾನಿ ಬದಲಾಗೋದಕ್ಕೆ ಕಾರಣ ಆಗುತ್ತಾ ಕಾದು ನೊಡ್ಬೇಕಷ್ಟೇ.