ಬಂಧಿತ ಉಗ್ರರ ಫೊಟೋ ಬಿಡುಗಡೆ ಮಾಡಿದ ಹಮಾಸ್‌..!

Captured and detained Palestinians sit on a street in Beit Lahia, northern Gaza Strip, as Israeli soldiers stand guard, amid the ongoing ground operation of the Israeli army against Palestinian Islamist group Hamas this handout image obtained by Reuters on December 8, 2023.

ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ತೀವ್ರವಾಗ್ತಿದೆ. ಇಸ್ರೆಲ್ನ ದಾಳಿಗೆ ಹಮಾಸ್ ಉಗ್ರರು ಬೆಚ್ಚಿ ಬೀಳ್ತಿದ್ದಾರೆ. ಗಾಜಾ ಪಟ್ಟಿಯ ಗಾಜ ನಗರ, ಖಾನ್ ಯೂನಿಸ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಇಸ್ರೆಲ್ನ ದಾಳಿ ಹೆಚ್ಚಾಗಿದೆ.ಇನ್ನು ಗಾಜ ನಗರದ ಸಮೀಪವಿರುವ ಹಮಾಸ್ನ ನೆಲಗಳನ್ ಐಡಿಎಫ್ ಸುತ್ತು ವರೆದಿದೆ. ಸಂದರ್ಭದಲ್ಲಿ ಸಾಕಷ್ಟು ಮಂದಿ ಹಮಾಸ್ ಉಗ್ರರು ಇಸ್ರೆಲಿ ಪಡೆಗಳಿಗೆ ಶರಣಾಗ್ತಿದ್ದಾರೆ. ಅವ್ರನ್ನ ಅರೆನಗ್ನಗೊಳಿಸ್ತಿರೋ ಇಸ್ರೆಲಿ ಪಡೆಗಳು, ಕಣ್ಣು ಹಾಗೂ ಕೈ ಗಳಿಗೆ ಬಟ್ಟೆ ಕಟ್ಟಿ, ಅರೆಸ್ಟ್ ಮಾಡ್ತಿದ್ದಾರೆ. ಈ ಪೋಟೋಗಳನ್ನ ಹಮಾನ್ ತನ್ನ ಅನುಕೂಲಕ್ಕೆ ಬಳಸಿಕೊಳ್ತಿದ್ದು, ಇಸ್ರೇಲ್‌ ಮಾನವ ಹಕ್ಕುಗಳನ್ನ ಗಾಳಿಗೆ ತೂರ್ತಿದೆ. ಸಾಮಾನ್ಯ ನಾಗರೀಕರನ್ನ ಸೆರೆ ಹಿಡಿತಿದೆ ಅಂತಾ ಹೇಳ್ತಿದೆ. ಆದ್ರೆ ಇಸ್ರೆಲ್ ಪಡೆಗಳು ಹೇಳ್ತಿರೋ ಹಾಗೆ ಇಲ್ಲಿ ಬಂಧಿತರಾಗಿರುವವರು ಹಮಾಸ್ ಉಗ್ರರೇ ಹೊರತು ಸಾಮಾನ್ಯ ನಾಗರೀಕರಲ್ಲ. ಇನ್ನಷ್ಟು ಉಗ್ರರು ಶರಣಾಗೋದಕ್ಕೆ ಸಿದ್ದ ಕೂಡಾ ಇದ್ದಾರೆ. ಹೀಗಾಗಿ ನಾವು ಕಾರ್ಯಚರಣೆಯನ್ನ ಮುನ್ನಡೆಸಿದ್ದೇವೆ ಅಂತಾ ಇಸ್ರೇಲಿ ಪಡೆಗಳು ಹೇಳ್ತಿವೆ.

ಹಮಾಸ್ ಹೇಳ್ತಿರೋ ಆ ಪೋಟೋಗಳು ಇಲ್ಲಿವೆ ನೋಡಿ..̧