ಕಾಡಿನ ರಹಸ್ಯ..! ಪ್ರತಿ ರಾತ್ರಿ ಆ ಕಾಡಲ್ಲಿ ಕಾಣುತ್ತೆ ಅದ್ಭುತ ಬೆಳಕು..!

ಪ್ರಕೃತಿ ವಿಸ್ಮಯಗಳ ಆಗರ. ಅಲ್ಲೊಂದು ಕಾಡಿದೆ..ಅಲ್ಲಿ ರಾತ್ರಿ ಆದ್ರೆ ಸಾಕು ಮರಗಿಡಗಳು ಹೊಳೆಯೋದಕ್ಕೆ ಶುರುಮಾಡುತ್ವೆ.. ಯಾರೊ ಹೋಗಿ ಅಲ್ಲಿ ಎಲ್​ಇಡಿ ಲೈಟ್​ಗಳನ್ನ ಹಾಕಿಬಂದಿರ್ಬೇಕು ಅನ್ನಿಸೋದಕ್ಕೆ ಶುರುವಾಗುತ್ತೆ..ಸಟ್ಟ ಸರಿ ರಾತ್ರಿಯಲ್ಲಿ ಹಸಿರು ಹಾಗೂ ಹಳದಿ ಬೆಳಕು ಇಡೀ ಕಾಡನ್ನ ಆವರಿಸುತ್ತೆ..ಕ್ಗತ್ತಲೆಯ ಕಡುರಾತ್ರಿ ಆ ಬೆಳಕಿನ ಚಿತ್ತಾರವನ್ನ ನೊಡೋದೇ ಒಂದು ಅದ್ಬುತ ಅನ್ನಿಸದೇ ಇರೋದಿಲ್ಲಾ..

ಇಂತಹ ಕಾಡಿರೋದು ಬೇರೆ ಯಾವುದೋ ದೇಶದಲ್ಲಲ್ಲ..ಇದು ನಮ್ಮ ಭಾರತದಲ್ಲೇ ಇರೋ ಕಾಡು..ಅದ್ರಲ್ಲು ನಮ್ಮ ಕರ್ನಾಟಕದ ಪಕ್ಕದಲ್ಲೇ ಈ ವೈವಿಧ್ಯಯಯ ಅರಣ್ಯ ಇದು, ಅದೀಗ ಕೇವಲ ವಿಸ್ಮಯದ ಕಾಡಾಗಿ ಉಳಿದಿಲ್ಲ.ಬದಲಾಗಿ ಅದು ಹುಲಿ ಕಾಡಾಗಿ ಗುರ್ತಿಸಿಕೊಂಡಿದೆ.

ಅಲ್ಲಿ ಸೂರ್ಯ ಮರೆಯಾಗ್ತಿದ್ದಂತೇ, ಸಣ್ಣಗೆ ಬೆಳಕು ಹರಡೋದಕ್ಕೆ ಶುರುವಾಗುತ್ತೆ. ಸೀರಿಯಲ್ ಸೆಟ್ ಹಾಕಿದ ಹಾಗೆ. ಅಲ್ಲಿನ ಮರಗಳ ಕೊಂಬೆಗಳ ಮೇಲೆ, ಎಲೆಗಳ ಮೇಲೆ, ನೆಲದ ಮೇಲೆ ಎಲ್ಲಿ ನೋಡಿದ್ರೂ ಬೆಳಕೇ ಬೆಳಕು. ಹಾಗಾದ್ರೆ ಆ ಕಾಡಿನ ಮರಗಳಿಗೆ ಬೆಳಕು ಬಿಡ್ತಾ ಇರೋರು ಯಾರು? ಕರೆಂಟು ಕಾಣದ ಆ ಕಾಡಿನ ನಡುವೆ ಅಂಥಾ ದಿವ್ಯ ಬೆಳಕು ಬರೋದೆಲ್ಲಿಂದ..? ಅದು ಮ್ಯಾಜಿಕ್ಕಾ..? ಮಾನವನ ಕೈಚಳಕಾನಾ ಅಥವಾ ಪ್ರಕೃತಿ ತನಗೆ ತಾನೇ ಮಾಡಿಕೊಂಡಿರೋ ವ್ಯವಸ್ಥೆನಾ..? ಅಲ್ಲಿ ನಿಜಕ್ಕೂ ಏನಾಗ್ತಿದೆ ಆಕಡಿನ ರಹಸ್ಯವಾದ್ರೂ ಏನು ಅನ್ನೋದು ನಿಮಗೆ ಗೊತ್ತಾಗಬೇಕಿದ್ರೆ ಈ ವಿಡಿಯೋ ಕ್ಲಿಕ್ ಮಾಡಿ.