
ತೀವ್ರ ಆರ್ಥಿಕ ಸಂಕಷ್ಟ, ಭಯೋತ್ಪಾದನೆ, ಪ್ರತ್ಯೇಕವಾದದ ಚಳವಳಿಗಳು, ಹೋರಾಟಗಳು, ವಿದ್ಯುತ್ ಕೊರತೆ, ಆಹಾರ ಧಾನ್ಯಗಳ ಕೊರತೆಯಲ್ಲಿ ನರಳ್ತಾ ಇರೋ ಪಾಕಿಸ್ತಾನಕ್ಕೆ ಈಗ ಭಾರತ ಮತ್ತೊಂದು ಹೊಡೆತ ಕೊಡೋದಕ್ಕೆ ಹೋಗ್ತಾ ಇದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಅತ್ಯಂತ ಪುರಾತನ ಮತ್ತು ಅತ್ಯಂತ ಬಲಿಷ್ಠ ಒಪ್ಪಂದ ಅಂತಾ ಕರೆಸಿಕೊಳ್ಳುವ ಸಿಂಧೂ ನದಿ ನೀರಿನ ಒಪ್ಪಂದವನ್ನ ರದ್ದು ಮಾಡಿ, ಮತ್ತೆ ಆ ಬಗ್ಗೆ ಮಾತುಕತೆಗೆ ಕೂತು ಇನ್ನೊಂದು ಒಪ್ಪಂದಕ್ಕೆ ಬರೋ ಬಗ್ಗೆ ಭಾರತ ಪಾಕಿಸ್ತಾನಕ್ಕೆ ನೊಟೀಸ್ ಕೊಟ್ಟಿದೆ.. ಆ ನೋಟೀಸ್ ಗೆ ಮೂರು ತಿಂಗಳ ಒಳಗಾಗಿ ಪಾಕಿಸ್ತಾನ ಉತ್ತರ ಕೊಡಬೇಕು ಇಲ್ಲದಿದ್ದಲ್ಲಿ ಇಂಡಸ್ ವಾಟರ್ ಟ್ರೀಟಿಯನ್ನ ನಾವು ರದ್ದು ಮಾಡಿಕೊಳ್ತೀವಿ ಅನ್ನೋದು ಭಾರತ ಕೊಟ್ಟಿರೋ ಎಚ್ಚರಿಕೆ.
ಈ ಸಿಂದೂ ನದೀ ನೀರಿನ ಒಪ್ಪಂದದ ಹಿಂದೇ ಒಂದು ದೊಡ್ಡ ಷಡ್ಯಂತ್ರ ಕೆಲಸಾ ಮಾಡಿತ್ತು. ಅವತ್ತು ಅಮೆರಿಕಾದ ಚಿತಾವಣೆಯಿಂದಾ ವಿಶ್ವ ಬ್ಯಾಂಕ್ ಭಾರತದ ಮೇಲೆ ಒತ್ತಡ ಹೇರಿ, ಈ ಒಪ್ಪಂದಕ್ಕೆ ಸಹಿ ಹಾಕೋ ಹಾಗೆ ಮಾಡಿತ್ತು ಮತ್ತು ಈ ಒಪ್ಪಂದವನ್ನ ಕೂಡಾ ಅವತ್ತಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ತಪ್ಪು ನಿರ್ಧಾರಗಳ ಪೈಕಿ ಒಂದು ಅಂತಾ ನೆಹರು ಟೀಕಾಕಾರರು ಹೇಳ್ತಾರೆ.
ಈ ಒಪ್ಪಂದದಿಂದಾಗಿ ಪಾಕಿಸ್ದತಾನಕ್ಕೆ ಸಾಕಷ್ಟು ಲಾಭ ಆಯ್ತು. ಅಲ್ಲಿನ ನೆಲಕ್ಕೆ ಸಮೃದ್ಧವಾಗಿ ನೀರು ಸಿಗೋ ಹಾಗಾಯ್ತು. ಇಷ್ಟಾದ ನಂತರ ಕೂಡಾ ಪಾಕಿಸ್ತಾನ ನಾಲ್ಕು ಬಾರಿ ಭಾರತದ ವಿರುದ್ಧ ಯುದ್ಧಕ್ಕೆ ನಿಂತ್ಕೊಳ್ತು ಭಾರತದಲ್ಲಿ ಭಯೋತ್ಪಾದನೆ ಹೆಚ್ಚಾಗೊದಕ್ಕೆ ಭೇಕಾದ ಎಲ್ಲವನ್ನೂ ಮಾಡ್ತು. ಆದ್ರೂ ಭಾರತ ಸರ್ಕಾರ ಪಾಕಿಗಳಿಗೆ ನೀರು ನಿಲ್ಲಿಸೋದಕ್ಕೆ ಮುಂದಾಗಲಿಲ್ಲ..
ಆದ್ರೆ ಈಗ ಅಂದ್ರೆ ಒಪ್ಪಂದ ನಡೆದು 62 ವರ್ಷಗಳ ನಂತರ ಸಿಂಧೂ ನಿದಿ ನೀರು ಹಂಚಿಕೆ ಒಪ್ಪಂದವನ್ನ ರದ್ದು ಮಾಡ್ತೀವಿ ಅಂತಾ ಭಾರತ ಹೇಳ್ತಿರೋದ್ಯಾಕೆ..? ಅಕಸ್ಮಾತ್ ಆ ಒಪ್ಪಂದ ರದ್ದಾಗಿ ಹೋದ್ರೆ ಪಾಕಿಸ್ತಾನದ ಪರಿಸ್ಥಿತಿ ಹೇಗಿರುತ್ತೆ..? ಇಷ್ಟಕ್ಕೂ ಸಿಂಧೂ ನದಿ ನೀರನ್ನ ಹಂಚಿಕೊಳ್ಳೋದಕ್ಕೆ ಅವತ್ತು ಭಾರತದ ಮೇಲಿನ ಒತ್ತಡ ಹೇಗಿತ್ತು. ಆ ಕುತಂತ್ರದ ಹಿಂದೆ ಯಾರಿದ್ರು ಅನ್ನೋ ಕುರಿತಾದ ಕುತೂಹಲಕಾರಿ ಐತಿಹಾಸಿಕ ಮಾಹಿತಿಗಾಗಿ ಈ ವಿಡಿಯೋ ಕ್ಲಿಕ್ ಮಾಡಿ.







Leave a Reply