ಇಸ್ರೇಲ್ ಹಾಗು ಅಮಹಾಸ್ ಸಂಘರ್ಷ ಕ್ಕೆ ಒಂದು ಸಣ್ಣ ಬಿಡುವು ಕೊಡಿಸಬೇಕು ಅನ್ನೋ ಪ್ರಯತ್ನಗಳು ತೀವ್ರ ಪ್ರಮಾಣದಲ್ಲಿ ನಡೀತಾ ಇವೆ.. ಇಸ್ರೇಲಿ ಪಡೆಗಳು ಗಾಜಾದೊಳಕ್ಕೆ ಕಾಲಿಟ್ರೆ ಅಲ್ಲಿಅ ವರ ಹೆಣಗಳ ರಾಶಿ ಬೀಳುತ್ತೆ.. ನಾವು ಮಾಡೋ ದಾಳಿಯನ್ನ ಎದುಇರಿಸೋದಕ್ಕೆ ಇಸ್ರೇಲಿಗೆ ಸಾಧ್ಯವಾಗೋದೇ ಇಲ್ಲ.. ಅಂತೆಲ್ಲಾ ಹೇಳಿಕೊಳ್ತಾ ಇದ್ದ ಹಮಾಸ್ ಈಗ ಕದನ ವಿರಾಮಕ್ಕೆ ಮನವಿ ಮಾಡಿಕೊಳ್ತಾ ಇದೆ.. ಒಂದಷ್ಟು ಬಿಡುವು ಕೊಡಿ ಅಂತಾ ಕೇಳ್ತಾ ಇದೆ.. ಇಸ್ರೇಲ್ ಗೆ ದಾಳಿಯನ್ನ ನಿಲ್ಲಿಸೋದಕ್ಕೆ ಹೇಳಿ ಅಂತಾ ಇಸ್ಳಾಮಿಕ್ ದೇಶಗಳ ಮೇಲೆ ಒತ್ತಡ ಹೇರೋ ಪ್ರಯತ್ನವನ್ನ ಮಾಡ್ತಾ ಇದೆ. ಇಸ್ರೇಲ್ ಬಂಧಿಸಿರೋ ಪ್ಯಾಲಸ್ತೀನಿಯರನ್ನ ಬಿಡೋ ವರೆಗೆ ನಾವು ಇಸ್ರೇಲಿ ಒತ್ತೆಯಾಳುಗಳನ್ನ ಬಿಡೋದಿಲ್ಲ ಅಂತಾ ಹೇಳ್ತಿದ್ದವರು ಈಗ ಒತ್ತೆಯಾಳುಗಳನ್ನ ಬಿಡ್ತೀವಿ ಕದನ ವಿರಾಮ ಘೋಷಣೆ ಮಾಡಿ ಅಂತಾ ಕೇಳಿಕೊಳ್ತಾ ಇದಾರೆ.. ಅದಕ್ಕಾಗಿ ಮಾತುಕತೆಗಳು ಕೂಡಾ ಆರಂಭ ಗೊಂಡಂತಿವೆ. ಐದು ದಿನಗಳ ಕದನ ವಿರಾಮವನ್ನ ಇಸ್ರೇಲ್ ಘೋಕ್ಷಣೆ ಮಾಡಿದ್ರೆ, ಪ್ರತಿ ನಿತ್ಯಾ ಐವತ್ತು ಮಂದಿಯಂತೆ ಗುಂಪು ಗುಂಪಾಗಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡ್ತೀವಿ ಅಂತಾ ಹಮಾಸ್ ಹೇಳಿದೆ ಅನ್ನೋ ವರದಿಗಳೂ ಇವೆ. ಆದ್ರೆ.ಈ ಮಾತುಕತೆಗಳು ರಾಜೀ ಸಂಧಾನದ ಸುದ್ದಿಗಳನ್ನ ಅಮೆರಿಕಾ ಹಾಗೂ ಇಸ್ರೇಲ್ ಎರಡೂ ತಳ್ಳಿ ಹಾಕಿವೆ ಅ.ಥಾ ಯಾವಸ ಂಧಾನದ ಪ್ರಕ್ರಿಯೇನೂ ನಡೀತಿಲ್ಲ ಅಂತಾ ಅಮೆರಿಕಾ ಹೇಳಿದ್ರೆ. ಇಸ್ರೇಲ್ ಮಾತ್ರ ತನ್ನ ದಾಳಿಯ ತೀವ್ರತೆಯನ್ನ ಮುಂದುವರೆಸ್ತಾ ಇದೆ.. ಉತ್ತರ ಗಾಜಾ ಮಾತ್ರ ಅಲ್ಲಾ, ದಕ್ಷಿಣ ಗಾಜಾದ ಒಂದಷ್ಟುನಿರ್ದಿಷ್ಟ ಪ್ರದೇಶಗಳಲ್ಲಿ ಕೂಡಾ ಇಸ್ರೇಲಿ ಪಡೆಗಳು ದಾಳಿ ಮಾಡ್ತಾ ಇದಾರೆ.
ಈ ನಡುವೆ ಅಲ್ ಶಿಫಾ ಆಸ್ಪತ್ರೆಯನ್ನ ವಷಕ್ಕೆ ತಗೊಂಡಿರೋ ಇಸ್ರೇಲಿ ಪಡೆಗಳು ಅಲ್ಲಿನ ಸಿಸಿ ಕೆಮರಾ ದೃಶ್ಯಾವಳಿಯನ್ನ ಬಿಡುಗಡೆ ಮಾಡಿವೆ. ಅದರಲ್ಲಿ ಅಕ್ಟೋಬರ್ ಏಳನೇ ತಾರೀಖು ಇಸ್ರೇಲ್ ಮೇಲೆ ದಾಳಿ ನಡೀತಲ್ಲಾ, ಅವತ್ತು ಹಂಆಸ್ ಉಗ್ರರು ಅಪಹರಿಸಿಕೊಂಡು ಬಂದ ಇಸ್ರೇಲಿಗರನ್ನ ಈ ಅಲ್ ಶಿಫಾ ಆಸ್ಪತ್ರೆಗೆ ಹೊತ್ತು ತಂದ ದೃಶ್ಯಗಳು ಸೆರೆಯಾಗಿವೆ. ತೆಳು ನೀಲಿ ಬಣ್ಣದ ಬಟ್ಟೆ ಧರಿಸಿರುವ ವ್ಯಕ್ತೊಯೊಬ್ಬರನ್ನ ಬಲವಂತವಾಗಿ ನಾಲ್ಕೈದು ಮಂದಿ ಆಯುಧ ದಾರಿಗಳ ತಂಡ ಎಳೆ ತರುತ್ತೆ. ಅದು ಆಸ್ಪತ್ರೆಯ ರಿಸೆಪ್ಶನ್ ಕೌಂಟರ್ ಮುಂಭಾಗದಿಂದಾ ಒಳಗೆ ಎಳಕೊಂಡು ಹೋಗೋ ದೃರ್ಶಯಗಳು ಅದರಲ್ಲಿವೆ. ಇನ್ನೊಬ್ಬ ಗಾಯಾಳುವನ್ನ ಸ್ಟ್ರೆಚರ್ ಮೇಲೆ ತಗೊಂಡು ಹೋಗ್ತಾ ಇದಾರೆ ಅಲ್ಲಿ ಕೂಡಾ ಬಂದೂಕು ಧಾರಿಗಳು ನೋಡೋದಕ್ಕೆ ಸಿಗ್ತಾರೆ ಹಾಗೇ ಒಬ್ಬ ಆಸ್ಪತ್ರೆ ಯೂನಿಫಾಂ ಹಾಕ್ಕೊಂಡ ಮನುಷ್ಯ ಕುಡಾ ಅಲ್ಲಿದಾನೆ. ಈ ವಿಡಿಯೋನ ನಾನು ಕೆಳಗೆ ಲಿಂಕ್ ನಲ್ಲಿ ಕೊಡ್ತಾ ಇದೀನಿ ನೀವು ಅದನ್ನ ನೋಡಬಹುದು.
ಈ ವಿಡಿಯೋ ಬಿಡುಗಡೆ ಮಾಡೋ ಮೂಲಕ, ತಾನು ಅಲ್ ಶಿಫಾ ಮೇಲೆ ಮಾಡಿದ ದಾಳಿಯನ್ನ ಇಸ್ರೇಲ್ ಸಮರ್ಥಿಸಿಕೊಳ್ತಾ ಇದೆ. ಹಾಗೇ , ಅಲ್ಲಿ ಟನಲ್ಲುಗಳಿವೆ ಹಮಾಸ್ ಕಮ್ಯಾಂಡ್ ಸೆಂಟರ್ ಇದೆ ಅನ್ನೋ ಇಸ್ರೇಲಿ ಪಡೆಗಳ ಆರೋಪಗಳನ್ನ ಅಲ್ಲಿನ ವೈದ್ಯರು ತಳ್ಳಿ ಹಾಕಿದಾರೆ. ಅವರು, ಅಲ್ ಶಿಫಾದಲ್ಲಿ ಅಂಥದ್ದೇನೂ ಇಲ್ಲ.. ಇಲ್ಲಿ ಯಾವ ಉಗ್ರರೂ ಅಡಿ ಕೂತಿಲ್ಲ.. ಕೇವಲ ರೋಗಿಗಳು ನಿರಾರ್ಶರಿತರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಬಿಟ್ರೆ ಇಲ್ಲಿ ಯಾರೂ ಇಲ್ಲಾ ಅಂತಾ ಹೇಳಿಕೊಂಡಿದಾರೆ ಅವರ ಆ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ ಇಸ್ರೇಲ್ ಅಪಹರಣಕ್ಕೆ ಒಳಗಾದವರನ್ನ ಆಸ್ಪತ್ರೆಗೆ ಎಳಕೊಂಡು ಹೋಗ್ತಿರೋ ದೃಶ್ಯಾವಳಿಯನ್ನ ಬಿಡುಗಡೆ ಗೊಳಿಸಿದೆ.
ಇಲ್ಲಿ, ಅಲ್ ಶಿಫಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಕೂಡಾ ಹಮಾಸ್ ಉಗ್ರರ ನೆರವಿಗೆ ನಿಂತ್ಕೊಳ್ತಿದೆ ಅನ್ನೋ ಇಸ್ರೇಲಿನ ಆರೋಪಗಳು ಮತ್ತೆ ಸಾಬೀತಾಗ್ತಾ ಇವೆ.
https://x.com/IDF/status/1726319900304769393?s=20







Leave a Reply