ಬಂದ್ರೂ ಕೊಂದ್ರೂ.. ಹೋದ್ರೂ..! ಪಾಕ್ ನಲ್ಲಿ ಮತ್ತೊಬ್ಬ ಲಷ್ಕರಿ ಖಲ್ಲಾಸ್

ಗೆಳೆಯರೇ ಪಾಕಿಸ್ತಾನದಲ್ಲೀಗ ಟ್ರೆಂಡ್ ಏನೂ ಅಂದ್ರೆ, ಬೈಕಲ್ಲಿ ಬರೋದು ನಿಮಗೆ ಯಾರನ್ನ ಕಂಡ್ರೆ ಆಗೋದಿಲ್ವೋ ಅಂಥವರನ್ನ ಗುಂಡಿಟ್ಟು ಕೊಲ್ಲೊದು ಮತ್ತು ಹಾಗೇ ಹೊರಟು ಹೋಗೋದು. ಅಲ್ಲಿ ಹಾಗೆ ಯಾರನ್ನೇ ಯಾರು ಕೊಂದ್ರೂ ಅಲ್ಲಿನ ಪೊಲೀಸರು ಇದು ಟಾರ್ಗೆಟ್ ಕಿಲ್ಲಿಂಗೂ, ಇದರ ಹಿಂದೆ ಭಾರತ ಇದೆ ಅಂತಾ ಹೇಳಿ ಸುಮ್ಮನಾಗಿ ಬಿಡ್ತಾರೆ. ಅಲ್ಲಿಗೆ ಪೊಲೀಸರಿಗೂ ಕೆಲಸಾ ಇಲ್ಲ. ಕೊಂದವರೂ ನಿರಾಶ.. ಕೊಲ್ಲಿಸಿಕೊಂಡವನಂತೂ ಬಿಡಿ ಅವನಿಗೆ ಲಾಟರಿ ಹೊಡೀತದೆ.. ಅವನು ಜನ್ನತ್ ಗೆ ಹೋಗ್ತಾನೆ.. aಲ್ಲಿ ಯಥಾ ಪ್ರಕಾರ ಬಹತ್ತರ್ 72ಹೂರ್ ಗಳಿರುತ್ವೆ. ಅವನ ಪಾಡಿಗೆ ಅವನಿದ್ದು ಬಿಡ್ತಾನೆ.
ಗೆಲೆಯರೇ ಮೊನ್ನೆ ಕೂಡಾ ಅಲ್ಲಿ, ಲಷ್ಕರ್ ಎ ತಯ್ಯೇಬಾದ ನಾಯಕನೊಬ್ಬನನ್ನ ಅವನ ಬೆಂಬಲಿಗನ ಸಮೇತ ನಡು ರಸ್ತೆಯಲ್ಲಿ ಹಾಡ ಹಗಲೇ ಗುಂಡಿಟ್ಟು ಕೊಂದಿದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತಕ್ಕೆ ಸೇರಿದ ಸಿಯಾಲ್ ಕೊಟ್ ನಲ್ಲಿ ಜನ ನಿಬಿಡ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು. ಅದು ಅಲ್ಲಿನ ಸಿಸಿ ಕೆಮರಾದಲ್ಲಿ ರೆಕಾರ್ಡ್ ಕೂಡಾ ಆಗಿದೆ. ಆ ದೃಶ್ಯಾವಳಿಯನ್ನ ನಿಮಗೆ ಕೆಳಗೆ ಒಂದು ಲಿಂಕ್ ನಲ್ಲಿ ಕೊಡ್ತಾ ಇದೀನಿ.
ಕೊಲೆಯಾದವರನ್ನ Mohammed Muzamil and his associate Naeemur Rahman aಂತಾ ಗುರುತಿಸಲಾಗಿದೆ. ಈ ಕೊಲೆಗೆ ಅಲ್ಲಿನ ಜಮೀನು ವಿವಾದ ಕಾರಣ ಅಂತಾ ಪೊಲೀಸರು ಅಂದಾಜು ಮಾಡ್ತಾ ಇದಾರೆ. ಅಲ್ಲಿ ಸಮಸ್ಯೆ ಏನೂ ಅಂದ್ರೆ, ಲಷ್ಕರ್, ಜೈಶ್ ಥರದ ಸಂಘಟನೆಗಳ ನಾಯಕರು ಅಂತಾ ಗುರುತಿಸಿಕೊಂಡವರು ಸ್ಥಲೀಯವಾಗಿ ಕೂಡಾ ಒಂದಷ್ಟು ಅಪರಾಧ ಚಟುವಟಿಕೆಗಳು, ಕಂಡವರ ಆಸ್ತಿ ಕಿತ್ಕೊಳೋದು, ವಂಚನೆಗಳು, ಕೊಲೆಗಳು ಮುಂತಾದ ಕೃತ್ಯಗಳಲ್ಲಿ ಭಾಗಿಯಾಗ್ತಾ ಇರ್ತಾರೆ.. ಅವರಿಗೆ ಅಲ್ಲಲ್ಲೇ ಅದೆಷ್ಟು ದುಶ್ಮನ್ ಗಳಿರ್ತಾರೋ ಅಂತೂ ಯಾರೋ ಒಬ್ಬರು ಒಂದಿನ ಹೊಡೆದು ಕೆಡವ್ತಾರೆ ಅಷ್ಟೇ.. ಈಗ ಈ ಮುಹಮ್ಮದ್ ಮುಜಾಮಿಲ್ ವಿಷಯದಲ್ಲಿ ಆಗಿರೋದೂ ಅದೇ ಇರಬೇಕು.. ಅಲ್ಲಿ ಬೈಜಕಲ್ಲಿಇಬ್ಬರು ಬರ್ತಾರೆ. ಕಾರ್ ಒಂದರ ಸಮೀಪ ಈ ಮುಹಮ್ಮದ್ ನಿಂತಿದ್ದ. ಅವನ ಮೇಲೆ ಬಂದೂಕು ದಾರಿಯೊಬ್ಬ ಗುಂಡು ಹಾರಿಸ್ತಾನೆ. ಹಾಗೇ ಇನ್ನೆರಡು ಶಾಟ್ಸ್ ಇವನ ಅನುಚರನ ಮೇಲೆ ಹಾರಿಸಿ, ಅಲ್ಲಿಮದಾ ದೇ ಬೈಕಲ್ಲಿ ಹೊರಟು ಹೋಗ್ತಾನೆ. ಖೇಲ್ ಖತಮ್ ಅಷ್ಟೇ.
ಇನ್ನು ಪಾಕಿಸ್ತಾನದಲ್ಲಿ, ಅಪರಿಚತರು ಗುಂಡು ಹೊಡೆದ್ರೆ, ನಮ್ಮ ಕಾಶ್ಮೀರದ ಗಡಿಯಲ್ಲಿ ಆಕ್ರಮಿತ ಕಾಶ್ಮೀರದಿಂದಾ ಒಳ ನುಸುಳಿದ್ದ ಭಯೋತ್ಪಾದಕ ಬಷಿರ್ ಅಹಮ್ಮದ್ ಮಲಿಕ್ ಹಾಗೂ ಅವನ ಸಹವರ್ತಿ Ahmed Gani Sheikh ಅನ್ನೋ ಇಬ್ಬರನ್ನ ಭದ್ರತಾ ಪಡೆಗಳು ಹೊಡೆದು ಕೆಡವಿವೆ.
ಈ ಬಷೀರ್ ಆಕ್ರಮಿತ ಕಾಶ್ಮೀರದಿಂದಾ ಭಯೋತ್ಪಾದಕರನ್ನ ಗಡಿ ದಾಟಿಸಿ ಕಾಶ್ಮೀರಕ್ಕೆ ಕೂಹಿಸುವ ಕೆಲಸವನ್ನ ಸಾಕಷ್ಟು ವರ್ಷಗಳೀಂದಾ ಮಾಡ್ಥಾ ಇದ್ದ. ಇವನು ಈ ಭಾಗದ ಪ್ರಮುಖ ಲಾಂಚಿಂಗ್ ಕಮ್ಯಾಂಡರ್ ಆಗಿದ್ದ ಅಂತಾ ಭದ್ರತಾ ಪಡೆಗಳು ಹೇಳಿವೆ. ಆಕ್ರಮಿತ ಕಾಶ್ಮೀರದ Leepa ದಿಂದಾ, ರಜೌರಿ ವರೆಗೆ ಉಗ್ರರ ನೆಟ್ವರ್ಕ್ ಬೆಳೆಸಿದ್ದ ಈ ಬಷೀರ್, ಈ ಭಾಗದಲ್ಲಿ ಸಾಖಷ್ಟು ಬಾರಿ ಭಯೋತ್ಪಾದಕರ ಒಳ ನುಸುಳುವಿಕೆಗೆ ಸಹಾಯ ಮಾಡಿದ್ದ.
ಅವನು ಭಾರತದ ಗಡಿ ದಾಟ್ತಾ ಇರೋ ಬಗ್ಗೆ ಐಬಿ ಹಾಗೂ ಸೇನಾ ಇಂಟೆಲಿಜೆನ್ಸ್ ಮಾಹಿತಿ ಅನ್ವಯ ಕಾರ್ಯಾಚರಣೆಯನ್ನ ಡನೆಸಲಾಗಿದೆ. ಲೈನ್ ಆಫ್ ಕಂಟ್ರೋಲ್ ನಲ್ಲಿ ಉರಿ ಸೆಕ್ಟಾರ್ ನಲ್ಲಿ ನಡೆದ ಆಪರೇಷನ್ ಕಾಳಿ ಹೆಸರಿನ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಬಷೀರ್ ಹಾಗೂ ಅಹ್ಮದ್ ಗನಿ ಶೇಕ್ ಇಬ್ಬರನ್ನೂ ಹೊಡೆದುರುಳಿಸಲಾಗಿದೆ.
ಈ ಉಗ್ರ ಬಳಿ ಎಕೆ 47, ಚೈನಾ ನಿರ್ಮಿತ ಗ್ರನೇಡುಗಳು, ಪಿಸ್ಟಲ್ಸ್ ಮ,ದ್ದು ಗುಂಡುಗಳು. ಒಂದಷ್ಟು ಆಹಾರ ಪದಾರ್ಥ, ಪಾಕಿಸ್ತಾನಿ ಅನ್ನೋದಕ್ಕೆಅಲ್ಲಿನ ಐಡೆಂಟಿಟಿ ಕಾರ್ಡ್, ಹಾಗೂ 2630 ಪಾಕಿಸ್ಥಾನಿ ರೂಪಾಯಿ ಹಣ ಸಿಕ್ಕಿದೆ ಅಂತಾ ಹೇಳಲಾಗ್ತಾ ಇದೆ. ಅಲ್ಲಿಗೆ ಇನ್ನೂ ಇಬ್ಬರು ಭಾರತಕ್ಕೆ ಬಂದು ಇಲ್ಲಿಂದಾ ನೇರವಾಗಿ ಜನ್ನತ್ ಕಡೆಗೆ ಪ್ರಯಾಣ ಬೆಳೆಸಿದಾರೆ.
ಈಗ ಆ ಬಡ್ಡಿ ಮಕ್ಕಳನ್ನ ಹೂಳೋ ಕೆಲಸಾ ಬೇರೆ ಭಾರತೀಯ ಪಡೆಗಳೇ ಮಾಡಬೇಕು.. ಇನ್ನು ಪಾಕಿಸ್ಥಾನದ ಗಡಿಯಲ್ಲಿ ಭದ್ತರಾ ಪಡೆಗಳು ಹಾಗೂ ಅಲ್ಲಿನ ಸ್ಥಳೀಯ ಪೊಲೀಸರು ನಿರಂತರವಾಗಿ ಕಾರ್ಯಾಚರಣೆಗಳನ್ನ ಮಾಡ್ತಲೇ ಇದಾರೆ. ಕಾಶ್ಮೀರದಲ್ಲಿ ಹಿಮ ಬೀಳೋದಕ್ಕೆ ಶುರುವಾಗ್ತಾ ಇದೆ. ಹೀಗಾಗಿ ಆದಷ್ಟು ಬೇಗ ಗಡಿ ದಾಟಿಸೋರನ್ನ ಉಗ್ರರು ಈಗ ದಾಟಿಸಿಬಿಡ್ತಾರೆ. ಸೋ, ಅಲ್ಲಿ ಗಸ್ತು ಹೆಚ್ಚಿಸಲಾಗಿದೆ.